Siddaramaiah: ಆದೇಶ ಹಿಂದಕ್ಕೆ ಪಡೆದಿರೋದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ?; ಸಿದ್ದರಾಮಯ್ಯ ಪ್ರಶ್ನೆ


  ಸಿದ್ದರಾಮಯ್ಯ

ಪರಿಶಿಷ್ಟ ಜಾತಿ/ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಇಂಧನ ಸಚಿವ ವಿ.ಸುನೀಲ್ ಕುಮಾರ್ ಹಿಂದಕ್ಕೆ ಪಡೆದಿರುವುದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ ಎಂದು ಕೇಳಿದ್ದಾರೆ

ಪರಿಶಿಷ್ಟ ಜಾತಿ/ಪಂಗಡದ ಬಿಪಿಎಲ್ ಕುಟುಂಬಗಳಿಗೆ (SC/ST BPL Family) ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು (Free Electricity Supply) 40 ಯುನಿಟ್ ಗಳಿಂದ 75 ಯುನಿಟ್ಗಳಿಗೆ ಹೆಚ್ಚಿಸುವ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿರೋದಕ್ಕೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ (Former CM Siddaramaiah) ಆಕ್ರೋಶ ಹೊರ ಹಾಕಿದ್ದಾರೆ. ಸಾಲು ಸಾಲು ಟ್ವೀಟ್ (Siddaramaiah’s Tweet) ಮಾಡಿರುವ ವಿಪಕ್ಷ ನಾಯಕರು, ಇಂಧನ ಸಚಿವ ವಿ.ಸುನೀಲ್ ಕುಮಾರ್ (Power Minister V Sunil Kumar) ಅವರನ್ನ ಪ್ರಶ್ನೆ ಮಾಡಿದ್ದಾರೆ. ಪರಿಶಿಷ್ಟ ಜಾತಿ/ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಇಂಧನ ಸಚಿವ ವಿ.ಸುನೀಲ್ ಕುಮಾರ್ ಹಿಂದಕ್ಕೆ ಪಡೆದಿರುವುದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ ಎಂದು ಕೇಳಿದ್ದಾರೆ

ಇಂದನ ಸಚಿವರೇ, ನಿಮ್ಮದೇ ಲೆಕ್ಕದ ಪ್ರಕಾರ ಉಚಿತವಾಗಿ ಹೆಚ್ಚುವರಿ ಉಚಿತ ವಿದ್ಯುತ್ ನೀಡಲು ಬೇಕಾಗಿರುವುದು ರೂ.979 ಕೋಟಿ ಮಾತ್ರ. ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯಡಿ ರೂ.28,233 ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆಯಲ್ಲಾ, ಆ ಹಣ ಯಾರ ಕಲ್ಯಾಣಕ್ಕೆ ಎಂದು ಪ್ರಶ್ನಿಸಿದ್ದಾ

ಕಾಳಜಿ ಭಾಷಣದಲ್ಲಿ, ಜಾಹೀರಾತಿನಲ್ಲಿ ಅಲ್ಲ, ಕೃತಿಯಲ್ಲಿರಲಿ

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ರಾಜ್ಯ ಯೋಜನಾ ವೆಚ್ಚದ ಶೇಕಡಾ 25ರಷ್ಟನ್ನು ಮೀಸಲಿಡುವ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತಂದಾಗ ನಮ್ಮ ಸರ್ಕಾರ ಬಿಜೆಪಿ ಸರ್ಕಾರದಂತೆ ಹಣದ ಲೆಕ್ಕ ಹಾಕಿ ಕೂತಿರಲಿಲ್ಲ. ಕಾಳಜಿ ಭಾಷಣದಲ್ಲಿ, ಜಾಹೀರಾತಿನಲ್ಲಿ ಅಲ್ಲ, ಕೃತಿಯಲ್ಲಿರ

 ಸುನಿಲ್ ಕುಮಾರ್ಲು


75 ಯುನಿಟ್ ನಿಂದ 100 ಯುನಿಟ್ ಗೆ ಹೆಚ್ಚಿಸಿ

ಕುಂಟು ನೆಪಗಳನ್ನೊಡ್ಡದೆ ನುಡಿದಂತೆ ನಡೆಯಲು ಕಲಿಯಿರಿ. ಉಚಿತ ವಿದ್ಯುತ್ 75 ಯುನಿಟ್ ನಿಂದ 100 ಯುನಿಟ್ ಗೆ ಹೆಚ್ಚಿಸಿ. ಇದನ್ನು ಪಡೆಯಲು ನೀವು ರೂಪಿಸಿರುವ ನೂರೆಂಟು ನಿಯಮಗಳನ್ನು ಪರಿಷ್ಕರಿಸಿ ಸುಲಭದಲ್ಲಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ನೆರವಾಗಿ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಇದು ಶಿಕ್ಷಣವೋ? ಭಕ್ಷಣೆಯೋ?

ಆರ್ ಎಸ್ ಎಸ್ ನಲ್ಲಿ ತರಬೇತಿ ಪಡೆದು ಬಂದಿರುವ ಬಿ.ಸಿ.ನಾಗೇಶ್ ಅವರು ರಾಜ್ಯ ಶಿಕ್ಷಣ ಸಚಿವರಾದಂದಿನಿಂದ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿರುವ ಕತೆ ಒಂದೊಂದಾಗಿ ಹೊರಬೀಳುತ್ತಿವೆ. ಪಠ್ಯಪುಸ್ತಕಗಳ ವಿವಾದದ ಮರೆಯಲ್ಲಿ ಇಲ್ಲಿ ನಡೆಯುತ್ತಿರುವುದು ಲಂಚಾವತಾರದ ಕುಣಿದಾಟ. ಇದು ಶಿಕ್ಷಣವೋ? ಭಕ್ಷಣೆಯೋ?

ಇದನ್ನೂ ಓದಿ:  Suicide: ಮದುವೆಯಾಗಿ ಕೇವಲ 15 ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ! ಕಾರಣ ನೋಡಿ

ದುಡ್ಡು ವಸೂಲಿ ಮಾಡುತ್ತಿದೆಯಂತೆ.

ಪ್ರಾರಂಭದಿಂದಲೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ದ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಈಗ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಪುರಾವೆಗಳನ್ನು ನೀಡಿದೆ. ಈ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆಯಂತೆ. ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿ ವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲವಂತೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಶಿಕ್ಷಣ ಇಲಾಖೆಯೇ, ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುತ್ತಿದೆಯಂತೆ. ಎಂತಹ ಅದ್ಭುತ ಪ್ಲಾನ್.

ಶಿಕ್ಷಣ ಸಚಿವರು 40% ಕಮಿಷನ್ ಲೆಕ್ಕ ಹಾಕುತ್ತಿರಬಹುದು

ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಶಿಕ್ಷಣದ ಹಕ್ಕಿನ ಕಾಯ್ದೆಯನ್ನೂ ರಾಜ್ಯ ಶಿಕ್ಷಣ  ಇಲಾಖೆ ಹಳ್ಳ ಹಿಡಿಸಿದೆ. 2012ರಲ್ಲಿ ಆರ್ ಟಿ ಇ ಫಲಾನುಭವಿ ವಿದ್ಯಾರ್ಥಿಗಳು 1.20 ಲಕ್ಷ, ಈಗ ಈ ವಿದ್ಯಾರ್ಥಿಗಳ ಸಂಖ್ಯೆ 7 ಸಾವಿರಕ್ಕೆ ಇಳಿದಿದೆ. ಖಾಸಗಿ ಶಾಲೆಗಳಿಗೆ ಸರ್ಕಾರದಿಂದಲೇ ಬೆಂಬಲ.  ಆರ್ ಟಿ ಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಂತೆ. ಶಿಕ್ಷಣ ಸಚಿವರು 40% ಕಮಿಷನ್ ಲೆಕ್ಕ ಹಾಕುತ್ತಿರುವಂತೆ ಕಾಣುತ್ತಿದೆ. ಕಮಿಷನ್ ಎಂಬ ಸಾಂಕ್ರಾಮಿಕ ರೋಗ ಶಿಕ್ಷಣ ಇಲಾಖೆಯನ್ನೂ ರೋಗಗ್ರಸ್ತ ಗೊಳಿಸಿದೆ.

ಹಿಂದುತ್ವ ಒಂದು ಮುಖವಾಡ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಇಲಾಖೆಯ ಲಂಚಾವತಾರದ ಕಡೆಗಿನ ಜನರ ಗಮನ ಬೇರೆಕಡೆ ಸೆಳೆಯಲಿಕ್ಕಾಗಿಯೇ ಪಠ್ಯಪುಸ್ತಕ, ಭಗವದ್ಗೀತೆ, ಮದರಸಾಕ್ಕೆ ಸಂಬಂಧಿಸಿದ ವಿವಾದ ಹುಟ್ಟುಹಾಕುತ್ತಿದ್ದಾರೆ. ಲಂಚಕೋರರಿಗೆ ಮು


ಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ.. ಹಿಂದುತ್ವ ಒಂದು ಮುಖವಾಡ..ಬಿ.ಸಿ.ನಾಗೇಶ್​

ಇದನ್ನೂ ಓದಿ: Bengaluru Rain: ಬೆಂಗಳೂರಿನ ಇತಿಹಾಸದಲ್ಲಿ 2ನೇ ಅತಿ ದೊಡ್ಡ ಮಳೆ, ಬಹುತೇಕ ಕೆರೆಗಳು ಭರ್ತಿ!

ನ್ಯಾಯಾಂಗ ತನಿಖೆಗೆ ಒತ್ತಾಯ

ಗುತ್ತಿಗೆದಾರರು ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಗಳಿಗೆ ಉತ್ತರ ಸಿಕ್ಕಿಲ್ಲ. ಈಗ ಖಾಸಗಿ ಶಾಲೆಗಳ ಆಡಳಿತವೂ ಪ್ರಧಾನಿಗೆ ಪತ್ರ ಬರೆದಿದೆಯಂತೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಈ ಎಲ್ಲ ಪತ್ರಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

Post a Comment

Previous Post Next Post