Ramanagara: ಬಿಸಿಯೂಟ, ಯುನಿಫಾರ್ಮ್, ಪುಸ್ತಕ ಎಲ್ಲ ಕೊಟ್ಟು ಶಿಕ್ಷಕರನ್ನೇ ಕೊಡ್ತಿಲ್ಲ ಸರ್ಕಾರ ಎಲ್ಲವನ್ನ ಕೊಟ್ಟು ಸರ್ಕಾರ ಪಾಠ ಪ್ರವಚನ ಮಾಡುವ ಶಿಕ್ಷಕರನ್ನ ಮಾತ್ರ ನೀಡುತ್ತಿಲ್ಲ. ಇದ್ರಿಂದ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಹೌದು!‌ ರಾಮನಗರ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.


  ರಾಮನಗರ(ಜೂ.16): ಸರ್ಕಾರಿ ಶಾಲೆಗಳೆಂದರೆ (Govt School) ಮೂಗು ಮುರಿಯುವವರೆ ಹೆಚ್ಚು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ (Students) ಸರಕಾರ ಎಲ್ಲವನ್ನು ಉಚಿತವಾಗಿ ನೀಡುತ್ತದೆ. ಆದ್ರೆ ಎಲ್ಲವನ್ನ ಕೊಟ್ಟು ಪಾಠ ಪ್ರವಚನ ಮಾಡುವ ಶಿಕ್ಷಕರನ್ನ (Teachers) ಮಾತ್ರ ನೀಡುತ್ತಿಲ್ಲ. ಇದ್ರಿಂದ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಹೌದು!‌ ರಾಮನಗರ ಜಿಲ್ಲೆಯಲ್ಲಿ ಪ್ರಾಥಮಿಕ (Primary) ಹಾಗೂ ಪ್ರೌಢಶಾಲೆಯಲ್ಲಿ (High School) ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ಹಲವು ಶಾಲೆಗಳಲ್ಲಿ ಶಿಕ್ಷಕರೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಒಟ್ಟು 1718 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು 142143 ವಿದ್ಯಾರ್ಥಿಗಳು ಇದ್ದಾರೆ.

ಕನಕಪುರ ತಾಲೂಕುವೊಂದರಲ್ಲೆ 40 ಶಾಲೆಗಳಲ್ಲಿ ಒಬ್ಬೆ ಒಬ್ಬ ಶಿಕ್ಷಕನು ಇಲ್ಲಾ ಇಂತಹ ಶಾಲೆಗಳಿಗೆ ಬೇರೆ ಶಾಲೆಯ ಶಿಕ್ಷಕಕರನ್ನ ನಿಯೋಜನೆ ಮಾಡಲಾಗಿದೆ. ಇನ್ನೂ ಜಿಲ್ಲೆಯಲ್ಲಿ 686 ಪ್ರಾಥಮಿಕ ಶಾಲೆ ಶಿಕ್ಷಕರ ಹಾಗೂ ಪ್ರೌಢಶಾಲೆಯಲ್ಲಿ 217 ಶಿಕ್ಷಕರ ಕೊರತೆ ಇ

ಎಲ್ಲಾ ಇದ್ರೂ ಶಿಕ್ಷಕರೇ ಇಲ್ಲ

ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷರನ್ನ ನೇಮಕ ಮಾಡಿಕೊಳ್ಳಲಾಗಿದೆ. ಪ್ರೌಢಶಾಲೆಯ ವಿಭಾಗದಲ್ಲಿ ಭಾಷಾವಾರು ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಈ ವರ್ಷದ ಪಠ್ಯ ಪುಸ್ತಕಗಳನ್ನ ವಿತರಣೆ ಮಾಡಲಾಗಿ

ಬಹುತೇಕ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಸಮಸ್ಯೆ

ಸಮವಸ್ತ್ರಗಳು ಬರಬೇಕಿದ್ದು ಬಂದ ತಕ್ಷಣ ವಿತರಣೆ ಮಾಡಲಾಗುತ್ತದೆ. ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಹಾಲು ಹಾಗೂ ಮಧ್ಯಾಹ್ನ ಬಿಸಿಯೂಟವನ್ನ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ. ಅಂದಹಾಗೆ ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಆರ್ಥಿಕ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ಜನರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿ

ಇದನ್ನೂ ಓದಿ: Child Theft Case: ಕಿಮ್ಸ್ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್; ತಾಯಿಯೇ ಇಲ್ಲಿ ವಿಲನ್, ಹೀಗೆಲ್ಲಾ ಮಾಡ್ತಾ

ಜೊತೆಗೆ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಆದರೆ ಅವರು ಯಾವ ರೀತಿ ಪಾಠ ಮಾಡುತ್ತಾರೆ ಎಂಬುದು ಪೋಷಕರಿಗೆ ಚಿಂತೆಯಾಗಿದೆ. ಇತ್ತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಹಣವಿಲ್ಲ, ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವುದಕ್ಕೆ ಶಿಕ್ಷಕರೇ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾ

ಶಿಕ್ಷಕರ ಕೊರತೆಯಿಂದ ಶಿಕ್ಷಣಕ್ಕೆ ಸಮ

ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆ ಅಂದ್ರೆ ದೂರ ಹೋಗುವವರ ಸಂಖ್ಯೆ ಹೆಚ್ಚಿದೆ. ಇಂತಹ ಸನ್ನಿವೇಶದಲ್ಲಿ ಶಿಕ್ಷಕರ ಕೊರತೆ ಅಂದ್ರೆ ಯಾರ್ ತಾನೆ ತಮ್ಮ ಮಕ್ಕಳನ್ನ ಸರಕಾರಿ ಶಾಲೆಗೆ ಸೇರಿಸುತ್ತಾರೆ ನೀವೆ ಹೇ

ಇದನ್ನೂ ಓದಿ: Karnataka MLC Election: ಬಿಜೆಪಿ, ಕಾಂಗ್ರೆಸ್ಗೆ ತಲಾ ಒಂದೊಂದು ಸ್ಥಾನ; ಬಸವರಾಜ ಹೊರಟ್ಟಿ, ಪ್ರಕಾಶ್ ಹುಕ್ಕೇರಿಗೆ ಗೆಲು

ಶಿಕ್ಷಕರ ನೇಮಿಸುವಂತೆ ಸರ್ಕಾರಕ್ಕೆ ಜನರ ಒತ್ತಾ

ಸರ್ಕಾರ ಒಂದೆಡೆ ಸರ್ಕಾರಿ ಶಾಲೆಗಳನ್ನ ಉಳಿಸುವಂತೆ ಕರೆ ಕೊಡುತ್ತೆ. ಆದರೆ ರಾಮನಗರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ.‌ ಹಾಗಾಗಿ ಈ ಪರಿಸ್ಥಿತಿ ಮುಂದುವರೆದರೆ ಸರ್ಕಾರಿ ಶಾಲೆಗಳ ಉಳಿವು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಸಹ ಮೂಡಿ

ಈಗಾಗಲೇ ಶಾಲೆಗಳು ಶುರುವಾಗಿದ್ದು ಕೊರೋನಾ ನಾಲ್ಕನೇ ಅಲೆಯ ಭಯದ ಮಧ್ಯೆಯೇ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಆದರೆ ಅದರ ನಡುವೆ ಶಿಕ್ಷಕರ ಕೊರತೆಯಾಗಿರುವುದು ನಿಜಕ್ಕೂ ವಿಷಾದನೀಯದೆ.ಯ :ವುಳಿ.ಸ್ಯೆರೆ.ರಾ?ದೆ.ದೆ‌.ದೆ.ಕರ ಕೊರತೆಯಾಗಿರುವುದು ನಿಜಕ್ಕೂ ವಿಷಾದನೀಯ

Post a Comment

Previous Post Next Post