High Court: ಪ್ರೀತ್ಸೋದು ತಪ್ಪಲ್ಲ, ಆದ್ರೆ ಅಪ್ಪ-ಅಮ್ಮನ ತ್ಯಾಗ ನೆನಪಿರಲಿ ಹೆತ್ತವರನ್ನು ಧಿಕ್ಕರಿಸಿ, ಪ್ರೇಮಿಯೊಂದಿಗೆ ಓಡಿ ಹೋಗಿ ಮದುವೆಯಾದ ಹುಡುಗಿಯೊಬ್ಬಳ ಪ್ರಕರಣವಿದು. ನ್ಯಾಯಾಲಯ, ಆ ಯುವತಿಗೆ ತಾನು ಮದುವೆಯಾದ ಹುಡುಗನೊಂದಿಗೆ ಇರಲು ಅನುಮತಿಯನ್ನೇನೋ ಕೊಟ್ಟಿತು, ಆದರೆ ಆಕೆ ಹೆತ್ತವರಿಗೆ ನೀಡಿದ ನೋವು ಮುಂದೊಂದು ದಿನ ಅವಳಿಗೂ ವಾಪಾಸ್ಸು ಸಿಗಬಹುದು ಎಂಬ ಎಚ್ಚರಿಕೆಯನ್ನು ಕೂಡ ನೀಡಿದೆ.


 ನಾವೇನು ತಪ್ಪು ಮಾಡುತ್ತೇವೆಯೋ ಮುಂದೆ ಒಂದು ದಿನ ಅದರ ಫಲವನ್ನು ಅನುಭವಿಸುತ್ತೇವೆ ಎಂಬ ಮಾತನ್ನು ಹಿಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಇದೀಗ ಕರ್ನಾಟಕ ಉಚ್ಚ ನ್ಯಾಯಾಲಯವು (Karnataka high court) ಕೂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಂತದ್ದೇ ಮಾತನ್ನು ಉಲ್ಲೇಖಿಸಿದೆ. ಹೆತ್ತವರನ್ನು ಧಿಕ್ಕರಿಸಿ, ಪ್ರೇಮಿಯೊಂದಿಗೆ ಓಡಿ ಹೋಗಿ ಮದುವೆಯಾದ (Marriage) ಹುಡುಗಿಯೊಬ್ಬಳ ಪ್ರಕರಣವಿದು. ನ್ಯಾಯಾಲಯ (Court), ಆ ಯುವತಿಗೆ ತಾನು ಮದುವೆಯಾದ ಹುಡುಗನೊಂದಿಗೆ ಇರಲು ಅನುಮತಿಯನ್ನೇನೋ ಕೊಟ್ಟಿತು, ಆದರೆ ಆಕೆ ಹೆತ್ತವರಿಗೆ (Parents) ನೀಡಿದ ನೋವು ಮುಂದೊಂದು ದಿನ ಅವಳಿಗೂ ವಾಪಾಸ್ಸು ಸಿಗಬಹುದು ಎಂಬ ಎಚ್ಚರಿಕೆಯನ್ನು ಕೂಡ ನೀಡಿದೆ.

ಪ್ರೀತಿಸಿ ಮದುವೆಯಾದ ಪ್ರ

ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ನಿಸರ್ಗ, ನಿಖಿಲ್ ಎಂಬ ಚಾಲಕನನ್ನು ಮದುವೆಯಾಗಿರುವುದನ್ನು ಪ್ರಶ್ನಿಸಿ, ಟಿ ಎಲ್ ನಾಗರಾಜು ಎಂಬವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಕೆ .ಎಸ್ ಹೇಮಲತಾ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಮೇ 25 ರಂದು ಈ ಪ್ರಕರಣದ ತೀರ್ಪನ್ನು ನೀಡಲಾಗಿದ್ದು, ನ್ಯಾಯಾಲಯ ನಾಗರಾಜು ಅವರ ಅರ್ಜಿಯನ್ನು ವಜಾಗೊಳಿಸಿದೆ

ಮೇ 13 ರಂದು 19 ವರ್ಷ ವಯಸ್ಸಿನ ನಿಸರ್ಗ ತನ್ನ ಹಾಸ್ಟೆಲನ್ನು ತೊರೆದಿದ್ದಳು. ವರದಿಗಳ ಪ್ರಕಾರ, ಆಕೆಯ ತಂದೆ ನಾಗರಾಜು ಅವರಿಗೆ, ಆಕೆ ಹಾಸ್ಟೆಲ್‍ನಿಂದ ಕಣ್ಮರೆಯಾಗಿರುವುದು ಎರಡು ದಿನಗಳ ಬಳಿಕ ತಿಳಿದು ಬಂತು. ನಿಖಿಲ್ ಆಕೆಯನ್ನು ಕರೆದುಕೊಂಡು ಹೋಗಿರಬಹುದು ಎಂದು ಸಂಶಯಗೊಂಡ ನಾಗರಾಜು ಅವರು, ಪೊಲೀಸ್ ಠಾಣೆಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 ರ ಅಡಿಯಲ್ಲಿ ದೂರು ನೀಡಿದ್ದಾರೆ

ಈ ಬಗ್ಗೆ ನಿಸರ್ಗ ನ್ಯಾಯಾಧೀಶರಿಗೆ ಹೇಳಿದ್ದೇ

ತಾನು ಹುಟ್ಟಿರುವುದು 2003 ರ ಏಪ್ರಿಲ್ 28 ರಂದು, ಹಾಗಾಗಿ ತಾನೀಗ ಪ್ರಾಪ್ತ ವಯಸ್ಕಳಾಗಿದ್ದೇನೆ ಎಂದು ನಿಸರ್ಗ ನ್ಯಾಯಾಲಯಕ್ಕೆ ತಿಳಿಸಿದರು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ದೇವಾಸ್ಥಾನವೊಂದರಲ್ಲಿ ತಾನು ನಿಖಿಲ್ (24) ನನ್ನು ಮದುವೆ ಆಗಿದ್ದೇನೆ ಮತ್ತು ಮದುವೆಯ ಬಳಿಕ ನಿಖಿಲ್ ಅವರ ಭಾವನ ಮನೆಯಲ್ಲಿ ಇದ್ದೆವು ಎಂದು ನ್ಯಾಯಾಧೀಶರಿಗೆ ನಿಸರ್ಗ ತಿಳಿಸಿದ್ದಾರೆ

ಇದನ್ನೂ ಓದಿ: Drunk Youth: ಕುಡಿದು ಟೈಟಾಗಿ ಪೊಲೀಸ್ ವಾಹನದ ಮೇಲೆ ಹತ್ತಿ ಯುವಕನ ರಾದ್ಧಾಂ

ತಾನು ತನ್ನ ಪತಿ ನಿಖಿಲ್ ಜೊತೆಯೇ ಇರಲು ಬಯಸುತ್ತೇನೆ ಮತ್ತು ಹೆತ್ತವರ ಜೊತೆ ಹೋಗಲು ತನಗೆ ಇಷ್ಟವಿಲ್ಲ ಎಂದು ಆಕೆ ನ್ಯಾಯಾಲಯಕ್ಕೆ ತಿಳಿಸಿದರು. ಈ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ, ಹೈಕೋರ್ಟ್ ನಿಸರ್ಗ ಮತ್ತು ಆಕೆಯ ಹೆತ್ತವರಿಗೆ ಕೆಲವು ಸಲಹೆಗಳನ್ನು ನೀಡಿ

ಇಬ್ಬರ ನಡುವೆ ಪ್ರೀತಿ, ಮಮತೆ ಇದ್ದರೆ ಈ ರೀತಿ ಆಗಲು ಸಾಧ್ಯವಿ

“ಮಕ್ಕಳಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಪೋಷಕರು ಮತ್ತು ಪೋಷಕರಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಮಕ್ಕಳು ಇದ್ದರು ಎಂಬುದನ್ನು ನಮ್ಮ ಇತಿಹಾಸ ತಿಳಿಸುತ್ತದೆ. ಇಬ್ಬರ ನಡುವೆ ಪ್ರೀತಿ ಮತ್ತು ಮಮತೆ ಇದ್ದರೆ, ಕುಟುಂಬದಲ್ಲಿ ಬಿರುಕು ಮೂಡಲು ಸಾಧ್ಯವಿಲ್ಲ. ಆಗ, ತಮ್ಮ ಹಕ್ಕುಗಳ ರಕ್ಷಣೆಗಾಗಿ ಮಕ್ಕಳು ಪೋಷಕರ ವಿರುದ್ಧ ಅಥವಾ ಪೋಷಕರು ಮಕ್ಕಳ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಉಚ್ಛ ನ್ಯಾಯಾಲಯ ಹೇಳಿದೆ

 ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿರುವುದೇನು

“ಈ ಪ್ರಕರಣದ ವಿಚಿತ್ರ ಅಂಶಗಳು ಮತ್ತು ಸನ್ನಿವೇಶಗಳು, ಪ್ರೀತಿ ಕುರುಡಾಗಿರುತ್ತದೆ ಮತ್ತು ಹೆತ್ತವರು, ಕುಟುಂಬ ಹಾಗೂ ಸಮಾಜದ ಪ್ರೀತಿ , ವಾತ್ಸಲ್ಯಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುವ ಅಸ್ತ್ರ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತಿದೆ” ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ

ಇದನ್ನೂ ಓದಿ: 2nd PUC Result 2022: ದ್ವಿತೀಯ ಪಿಯುಸಿ ಫಲಿತಾಂಶ; ಹೀಗೆ ಮೆಸೇಜ್ ಬಂದರೆ ನಂಬ

“ಬದುಕು, ಪ್ರತಿಕ್ರಿಯೆ, ಪ್ರತಿಧ್ವನಿ ಮತ್ತು ಪ್ರತಿಬಿಂಬವನ್ನು ಒಳಗೊಂಡಿರುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಇವತ್ತು ಅವರ ತಂದೆತಾಯಿಗೆ ಏನನ್ನು ಮಾಡುತ್ತಿದ್ದಾರೋ, ಭವಿಷ್ಯದಲ್ಲಿ ಅದನ್ನೇ ಅವರು ವಾಪಾಸ್ಸು ಪಡೆಯುತ್ತಾರೆ” ಎಂದು ಹೈಕೋರ್ಟ್ ನಿಸರ್ಗಾಳಿಗೆ ಎಚ್ಚರಿಕೆಯ ಮಾತನ್ನು ಕೂಡ ಹೇಳಿ

ಹೈಕೋರ್ಟ್ ಮನು ಸ್ಮೃತಿಯನ್ನು ಉಲ್ಲೇಖಿಸಿ, “ ಮನು ಸ್ಮೃತಿಯ ಪ್ರಕಾರ ಕೂಡ, ಹೆತ್ತವರು ಮಗ/ಮಗಳಿಗೆ ಜನ್ಮ ನೀಡುವುದರಿಂದ ಹಿಡಿದು ಅವರನ್ನು ಪ್ರೌಢಾವಸ್ಥೆಗೆ ಬರುವವರೆಗೆ ಸಾಕಲು ಪಟ್ಟ ಕಷ್ಟದ ಋಣವನ್ನು ತೀರಿಸಲು 100 ವರ್ಷ ಕಳೆದರೂ ಸಾಧ್ಯವಿಲ್ಲ. ಹಾಗಾಗಿ, ಯಾವಾಗಲು ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಇಷ್ಟವಾಗುವುದನ್ನೇ ಮಾಡಲು ಪ್ರಯತ್ನಿಸಿ. ಏಕೆಂದರೆ ಹಾಗೆ ಮಾಡುವುದರಿಂದ ಮಾತ್ರ ನೀವು ಮಾಡುವ ಯಾವುದೇ ಧಾರ್ಮಿಕ ಪೂಜೆಯಿಂದ ಸ್ವಲ್ಪ ಮಟ್ಟಿನ ಫಲವನ್ನಾದರೂ ಪಡೆಯಲು ಸಾಧ್ಯವಿದೆ” ಎಂದು ಹೇಳಿದೆ.ದೆ.ಬೇಡಿ.?.ಲ್ಲತು.ತ!.ನು?..ಕರಣಪಡೆಯಲು ಸಾಧ್ಯವಿದೆ” ಎಂದು ಹೇಳಿದೆ.

Post a Comment

Previous Post Next Post