ಆಂಧ್ರ ಪ್ರದೇಶ: ಅವರಿಬ್ಬರು ನಾಲ್ಕು ವರ್ಷದ ಅವಳಿ ಜವಳಿ ಬಾಲಕಿಯರು (Twin Girls). ಅದರಲ್ಲಿ ಒಬ್ಬಳಿಗೆ ದುಷ್ಟ ಶಕ್ತಿಯ ಕಾಟ ಇದೆ ಅಂತ ಬಾಲಕಿಯರ ತಂದೆಗೆ (Father) ಯಾರೋ ಹೇಳಿದ್ದರಂತೆ. ಇದನ್ನೇ ಗಂಭೀರವಾಗಿ (Serious) ತೆಗೆದುಕೊಂಡ ತಂದೆ, ದುಷ್ಟ ಶಕ್ತಿ ಓಡಿಸಬೇಕು ಎಂಬ ಆತುರಕ್ಕೆ ಬಿದ್ದು ಮಾಡಬಾರದ ಕೆಲಸ ಮಾಡಿದ್ದಾನೆ. ದುಷ್ಟ ಶಕ್ತಿ ನಿವಾರಣೆ ಪೂಜೆ (Worship) ನೆಪದಲ್ಲಿ ಏನೂ ಅರಿಯದ 4 ವರ್ಷದ ಕಂದಮ್ಮನಿಗೆ ದೈಹಿಕವಾಗಿ (Physically) ಚಿತ್ರ ಹಿಂಸೆ (Harassment) ನೀಡಿದ್ದಾನೆ. ತಂದೆಯ ಹಿಂಸೆ ತಾಳಲಾರದ ಪುಟ್ಟ ಮಗು (Baby) ಉಸಿರು ಎಳೆದುಕೊಳ್ಳಲಾಗದೇ ಸಾವನ್ನಪ್ಪಿದ್ದಾಳೆ. ಆಂಧ್ರ ಪ್ರದೇಶದ (Andhra Pradesh), ನೆಲ್ಲೂರು (Nellur) ಜಿಲ್ಲೆಯ ಹಳ್ಳಿಯೊಂದರಲ್ಲಿ (Vilalge) ಇಂತದ್ದೊಂದು ಘನ ಘೋರ ಘಟನೆ ನಡೆದಿದೆ.
ಪುಟ್ಟ ಕಂದನ ಮೇಲಿತ್ತಂತೆ ದುಷ್ಟ ಶಕ್ತಿ
ನೆಲ್ಲೂರು ಜಿಲ್ಲೆಯ ಪೇರರೆಡ್ಡಿಪಲ್ಲಿ ಗ್ರಾಮದ ವೇಣುಗೋಪಾಲ್ ಎಂಬಾತನೇ ಈ ರೀತಿ ಮೂಢ ನಂಬಿಕೆಗೆ ಒಳಗಾಗಿ ಮಗಳನ್ನೇ ಕೊಂದ ಪಾಪಿ ತಂದೆ. ಈತನಿಗೆ 4 ವರ್ಷದ ಇಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳಿದ್ದರು. ಇವರಲ್ಲಿ ಪುನರ್ವಿಕಾ ಎಂಬುವಳಿಗೆ ದುಷ್ಟ ಶಕ್ತಿಯ ಕಾಟ ಇದೆ ಅಂತ ಯಾರೋ ಹೇಳಿದ್ದರಂತೆ. ಇದರಿಂದ ಅವರ ಸಲಹೆ ಪಡೆದ ವೇಣುಗೋಪಾಲ್, ತಾನೇ ಮನೆಯಲ್ಲಿ ಪೂಜೆ ಮಾಡಿ, ಮಗಳ ಮೇಲಿನ ದುಷ್ಟ ಶಕ್ತಿ ನಿವಾರಣೆ ಮಾಡಬೇಕು ಅಂತ ಯೋಚಿಸಿದ್ದಾ
ಮನೆಯಲ್ಲೇ ಮಗಳನ್ನು ಕೂರಿಸಿ ಪೂಜೆ ಮಾಡಿದ ತಂ
ಬೇರೊಬ್ಬರಿಂದ ಸಲಹೆ ಪಡೆದ ವೇಣುಗೋಪಾಲ್, ನಿನ್ನೆ ತಮ್ಮ ಮನೆಯಲ್ಲಿ ದುಷ್ಟ ಶಕ್ತಿ ನಿವಾರಿಸುವ ಸಲುವಾಗಿ ಹೋಮ ಹವನ ಮಾಡಿದ್ದಾರೆ. ಆಚರಣೆಯ ಭಾಗವಾಗಿ, ವೇಣುಗೋಪಾಲ್ ತನ್ನ 4 ವರ್ಷಗದ ಪುಟ್ಟ ಮಗಳು ಪುನರ್ವಿಕಾ ಮೇಲೆ ಅರಿಶಿನ ನೀರನ್ನು ಸುರಿದು ನಂತರ ಆಕೆಯ ಬಾಯಿಯಲ್ಲಿ ಅರಿಶಿನ, ಕುಂಕುಮದ ಪುಡಿಯನ್ನು ತುಂಬಿಸಿ ಪೂಜೆ ಮಾಡಿದ್ದಾ
ಇದನ್ನೂ ಓದಿ: ATMನಲ್ಲಿ ಒಂದು ಬಾರಿ ಕಾರ್ಡ್ ಹಾಕಿದ್ರೆ 5 ಬಾರಿ ಹಣ ಬರುತ್ತಂತೆ! ಕೆಲಸ ಬಿಟ್ಟು ಹಣಕ್ಕಾಗಿ ಕ್ಯೂ ನಿಂತ
ಗಂಟಲಿಗೆ ಅರಿಶಿನ ಕುಂಕುಮ ಸಿಲುಕಿ ಅಸ್ವಸ್ಥಗೊಂಡ
ಹೀಗೆ ತಂದೆ ಪುಟ್ಟ ಮಗುವಿನ ಬಾಯಿಗೆ ಅರಿಶಿನ, ಕುಂಕುಮದ ಪುಡಿ ತುಂಬಿದ್ದಾರೆ. ಇದರಿಂದ ಪುಟ್ಟ ಮಗುವಿಗೆ ಉಸಿರುಗಟ್ಟಿದಂತೆ ಆಯಿತು. ಈ ವೇಳೆ ಉಸಿರಾಡಲಾಗದೇ ಆಕೆ ಒದ್ದಾಡ ತೊಡಗಿದ್ದಾಳೆ
ಪ್ರಜ್ಞಾ ಹೀನ ಮಗು ಆಸ್ಪತ್ರೆ ದಾ
ಮಗಳ ಒದ್ದಾಟ ಮಾಡುವುದನ್ನು ನೋಡಿ ಮನೆಯವರು ಕೂಗಿಕೊಂಡಿದ್ದಾರೆ. ಆಗ ಸಹಾಯಕ್ಕೆ ಬಂದ ಸ್ಥಳೀಯರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಕೆ ಸ್ಥಿತಿ ಗಂಭೀರವಾಗಿದ್ರಿಂದ ಅದೇ ದಿನ ಚೆನ್ನೈನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಪುನರ್ವಿಕಾ ಸಾವನ್ನಪ್ಪಿದ್ದಾ
ಇದನ್ನೂ ಓದಿ: Vet Doctor: ಪ್ರಾಣಿಗೆ ಹುಷಾರಿಲ್ಲ ಎಂದು ಪಶುವೈದ್ಯನ ಕರೆದೊಯ್ದು ಮದುವೆ ಮಾಡಿಸಿದ
ತಂದೆಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಸ್ಥಳೀ
ಸ್ಥಳೀಯರ ಪ್ರಕಾರ, ವೇಣುಗೋಪಾಲ್ ಮಣ್ಣು ತೆಗೆಯುವ ವ್ಯಾಪಾರ ನಡೆಸುತ್ತಿದ್ದರು ಆದರೆ ದುಷ್ಟ ಶಕ್ತಿಗಳಿಂದ ಉಂಟಾಗಿದೆ ಎಂದು ನಂಬಿದ್ದರು. ಇದೀಗ ಈತನ ಮೂಢ ನಂಬಿಕೆಯಿಂದ ಏನೂ ಅರಿಯದ 4 ವರ್ಷದ ಮುಗ್ದ ಕಂದಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮಗು ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ಮೃತ ಮಗುವಿನ ತಂದೆ ವೇಣುಗೋಪಾಲ್‌ಗೆ ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿ ತಂದೆ ವೇಣುಗೋಪಾಲ್‌ನನ್ನು ಬಂಧಿಸಿದ್ದಾರೆ.ಯರು ಜನಳೆ.ಖಲು.ಮಗುಜನರುರೆ.ದೆನೆ.!ವೇಣುಗೋಪಾಲ್‌ನನ್ನು ಬಂಧಿಸಿದ್ದಾರೆ.

Post a Comment