PSI Suicide: ಬೆಂಗಳೂರಲ್ಲಿ PSI ಆತ್ಮಹತ್ಯೆ; ನೇಣಿಗೆ ಶರಣಾಗಲು ಕಾರಣವೇನು? ಕುಡಿತದ ಚಟಕ್ಕೆ ದಾಸರಾಗಿದ್ದ ಸುದರ್ಶನ ಶೆಟ್ಟಿ, ರಿಹ್ಯಾಬಿಟೇಶನ್ ಸೆಂಟರ್ ಗೆ ತೆರಳಿ ಕುಡಿತವನ್ನ ಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಯಿಂದಲೂ ಬಳಲುತ್ತಿದ್ರು ಎನ್ನಲಾಗಿದೆ. ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ


  ಬೆಂಗಳೂರು, (ಜೂ 19): ಬೆಂಗಳೂರಿನಲ್ಲಿ ಸಬ್ಣ  ಇನ್ಸ್‌ಪೆಕ್ಟರ್ (Sub Inspector) ಒಬ್ಬರು ಆತ್ಮಹತ್ಯೆಗೆ (Suicide) ಶರಣಾಗಿರೋ ಘಟನೆ ನಡೆದಿದೆ. ಹನುಮಂತನಗರ (HanumantaNagar) ಪೊಲೀಸ್ ಠಾಣೆಯ ಸಬ್  ಇನ್ಸ್‌ಪೆಕ್ಟರ್ ಸುದರ್ಶನ್ ಶೆಟ್ಟಿ (45) (Sudarshan Shetty) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಯಶವಂತಪುರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. PSI ಸುದರ್ಶನ್ ಶೆಟ್ಟಿ. ಕೆಲ ವರ್ಷಗಳ ಹಿಂದೆ ಕುಡಿತಕ್ಕೆ ದಾಸನಾಗಿದ್ರು. ಕರ್ತವ್ಯದ ವೇಳೆಯಲ್ಲೂ ಕುಡಿದಿದ್ದ ಹಿನ್ನೆಲೆಯಲ್ಲಿ ಅವರು ಸಸ್ಪೆಂಡ್ (Suspend) ಆಗಿದ್ದರು. ಇದರಿಂದ ಮಾನಸಿಕವಾಗಿ ಮನನೊಂದು ಪಿಎಸ್ಐ ಸುದರ್ಶನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ

ಕುಡಿತದ ಚಟಕ್ಕೆ ದಾಸರಾಗಿದ್ದ ಸುದರ್ಶನ ಶೆಟ್ಟಿನಿವೃತ್ತ ಯೋಧರಾಗಿದ್ದ ಸುದರ್ಶನ್ ಶೆಟ್ಟಿ ಅವರು  ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅತಿಯಾದ ಕುಡಿತದ ಚಟಕ್ಕೆ ದಾಸರಾಗಿದ್ದ ಸುದರ್ಶನ ಶೆಟ್ಟಿ, ರಿಹ್ಯಾಬಿಟೇಶನ್ ಸೆಂಟರ್ ಗೆ ತೆರಳಿ ಕುಡಿತವನ್ನ ಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಯಿಂದಲೂ ಬಳಲುತ್ತಿದ್ರು ಎನ್ನಲಾಗಿದೆ. ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ನಿಖರವಾದ ಕಾರಣ ತಿಳಿದುಬಂದಿ

ಕೆಲ ದಿನಗಳ ಹಿಂದೆ ಮೈಸೂರಲ್ಲಿ ಪೇದೆ ಆತ್ಮಹತ್ಯೆ

ಮೈಸೂರು: ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಜಲಪುರಿ ಪೊಲೀಸ್ ಕ್ವಾಟ್ರಸ್ ನಲ್ಲಿ ನಡೆದಿತ್ತು. ಪರಸಪ್ಪ ಕೊನ್ನೂರು (27) ಮೃತ ಪೊಲೀಸ್ ಪೇದೆ ಎಂದು ಹೇಳಲಾಗುತ್ತಿದೆ. ಪರಸಪ್ಪ ಅವರು ಮೈಸೂರಿನ ದೇವರಾಜ ಠಾಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಉತ್ತರ ಕರ್ನಾಟಕ ಮೂಲದ ಪರಸಪ್ಪ ಕೊನ್ನೂರು 2016ನೇ ಬ್ಯಾಚ್ ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿ

ಇದನ್ನೂ ಓದಿ: Hassan: ಭೀಕರ ಅಪಘಾತದಲ್ಲಿ ತಂದೆ-ಮಗ ಸಾವು; ಈಜಲು ಹೋಗಿ ಇಬ್ಬರು ನೀರುಪಾ

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿ

ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕ್ವಾಟ್ರಸ್ ನಲ್ಲಿ ನೇಣುಬಿಗಿದುಕೊಂಡು ಪರಸಪ್ಪ ಆತ್ಮಹತ್ಯೆಗೆ ಶರಣಾಗಿದ್ದರು  ಒಂದೂವರೆ ವರ್ಷಗಳ ಹಿಂದಷ್ಟೇ ಪರಸಪ್ಪ ಅವರು ಮದುವೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಜರ್ ಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

ಗುಂಡು ಹಾರಿಸಿಕೊಂಡು ಆತ್ಮಹ

ಗದಗದಲ್ಲಿ ಜೂನ್ 16 ರಂದು ಕರ್ತವ್ಯ ನಿರತ ಪೊಲೀಸ್ ಪೇದೆಯೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲಾಡಳಿತ ಭವನದ ಖಜಾನೆ ಕಚೇರಿನಲ್ಲಿ ನಡೆದಿದೆ. ಡಿ.ಆರ್ ಪೊಲೀಸ್ ಪೇದೆ ಕಿರಣ್ ಕೊಪ್ಪದ ಮೃತ ವ್ಯಕ್ತಿ. ಕಿರಣ್ ಕೊಪ್ಪದ ಕರ್ತವ್ಯ ನಿರತ ವೇಳೆ ಕುತ್ತಿಗೆಗೆ ಗುಂಡಿ ಹಾರಿಸಿಕೊಂಡರು. ಇದಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗುತ್ತಿ

ಆದರೆ ಮೃತ ಪೇದೆ ತಂದೆ, ಕಿರಣ್ ಅವರು ಇತ್ತೀಚಿಗೆ ಅದ್ಯಾಕೋ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಿದ್ದಾರೆ. ಸೆಕೆಂಡ್ ಶಿಫ್ಟ್ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ರೈಫಲ್ ಮೂಲಕ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದಾ

ಡಿ.ಆರ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿ

ಮೃತ ಪೇದೆ ಕಿರಣ್, ಕಳೆದ 20 ವರ್ಷಗಳಿಂದ ಡಿ.ಆರ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಐದಾರು ವರ್ಷಗಳಿಂದ ಸಂಸಾರದಲ್ಲಿ ಕಲಹ ಏರ್ಪಟ್ಟಿತ್ತು. ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಳು. ಬರುವ ಆದಾಯದಲ್ಲಿ ಅರ್ಧದಷ್ಟು ಪತ್ನಿ ಹಾಗೂ ಮಕ್ಕಳ ಜೀವನೋಪಾಯಕ್ಕೆ ಕೊಡುವಂತೆ ಕೋರ್ಟ್ ಆದೇಶವಾಗಿತ್ತು ಎನ್ನಲಾಗುತ್ತಿ

ಇದನ್ನೂ ಓದಿ: Bengaluru: ನಾಳೆ ವಾಹನ ಸವಾರರು ರಸ್ತೆಗಿಳಿಯೋ ಮುನ್ನ ಎಚ್ಚರ; ನಗರದಲ್ಲಿ ಹಲವೆಡೆ ಸಂಚಾರ ಬಂ

ಮಾನಸಿಕನಾಗಿ ಕುಗ್ಗಿ ಹೋಗಿದ್ದ ಕಿ

ನಾನು ಯಾಕೆ ಅರ್ಧ ವೇತನ ನೀಡಬೇಕು ಎಂದು ಮಾನಸಿಕನಾಗಿ ಕುಗ್ಗಿ ಹೋಗಿದ್ದ. ಇದರಿಂದ ಬೇಸತ್ತು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಎಸ್.ಪಿ, ಡಿವೈಎಸ್ಪಿ, ಸಿಪಿಐ ಹಾಗೂ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಣ್ದ್ದೆ.ರಣ್ನೆ.ದೆ.ತ್ಯೆ.ಲ್ಲಲುದ್ದರು.ಲ್ಲ.. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post