Marriage for Rain: ಹುಯ್ಯೋ ಹುಯ್ಯೋ ಮಳೆರಾಯ ಮಕ್ಕಳ ಮದುವೆ ಮಾಡ್ತೀವಿ! ಈ ಗ್ರಾಮದಲ್ಲೊಂದು ವಿಶಿಷ್ಟ ಆಚರಣೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆ (Rain) ಬಾರದಿದ್ದರೆ ಬೇರೆ ಬೇರೆ ರೀತಿಯ ಆಚರಣೆಗಳು ನಡೆಯುತ್ತವೆ. ಕಪ್ಪೆ ಮದುವೆ, ಕತ್ತೆ ಮದುವೆ ಮಾಡಿಸಿ, ಮಳೆಗಾಗಿ ಪ್ರಾರ್ಥಿಸುತ್ತಾರೆ. ಆದರೆ ಇಲ್ಲಿ ಬೇರೆಯದ್ದೇ ರೀತಿಯ ವಿಶಿಷ್ಟ ಆಚರಣೆ ನಡೆಯುತ್ತದೆ.


 ವಿಜಯಪುರ: ಬಾಲ್ಯ ವಿವಾಹ (Child Marriage) ಕಾನೂನಿನ ಪ್ರಕಾರ ಅಪರಾಧ. ಆದರೆ ಇಲ್ಲಿ ಬರೀ ಮನೆಯವರಷ್ಟೇ ಅಲ್ಲ, ಇಡೀ ಗ್ರಾಮಸ್ಥರೆಲ್ಲ (Villagers) ಸೇರಿ ಮಕ್ಕಳ ಮದುವೆ ಮಾಡಿಸಿದ್ದಾರೆ. ಆದರೆ ಇದು ಒರಿಜಿನಲ್ (Original) ಮದುವೆ ಅಲ್ಲ, ಮದುವೆಯನ್ನೇ ಹೋಲುವ ಅಣುಕು ಮದುವೆ. ಅಂದಹಾಗೆ ಇದು ನಡೆದಿದ್ದು ಮಳೆಗಾಗಿ. ಹೌದು, ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ (Rural Area) ಮಳೆ (Rain) ಬಾರದಿದ್ದರೆ ಬೇರೆ ಬೇರೆ ರೀತಿಯ ಆಚರಣೆಗಳು ನಡೆಯುತ್ತವೆ. ಕಪ್ಪೆ ಮದುವೆ, ಕತ್ತೆ ಮದುವೆ ಮಾಡಿಸಿ, ಮಳೆಗಾಗಿ ಪ್ರಾರ್ಥಿಸುತ್ತಾರೆ. ಆದರೆ ವಿಜಯಪುರ (Vijayapur) ಜಿಲ್ಲೆಯ ಮುದ್ದೇಬಿಹಾಳ (Muddebihal) ತಾಲೂಕಿನ ನಾಲತವಾಡದ ಹಟ್ಟಿ ಓಣಿಯಲ್ಲಿ ಮಳೆಗಾಗಿ ಇಬ್ಬರು ಚಿಕ್ಕ ಹೆಣ್ಣು ಮಕ್ಕಳಿಗೆ (Girls) ಅಣಕು ಮದುವೆ ಮಾಡಿಸಲಾಗಿದೆ.

ಮಳೆಗಾಗಿ ಮಕ್ಕಳ ಮದು

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಎಂಬಲ್ಲಿ  ವಿಶೇಷ ಸಂಪ್ರದಾಯವೊಂದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಮಳೆಗಾಗಿ ಮಕ್ಕಳಿಗೆ ಅಣಕು ಮದುವೆ ಮಾಡಿಸಲಾಗುತ್ತದೆ

ಇಲ್ಲಿ ಹೆಣ್ಣೇ ವಧು, ಹೆಣ್ಣೇ

ಇಲ್ಲಿ ಹೆಣ್ಣು ಮಕ್ಕಳನ್ನೇ ವಧು - ವರನ ವೇಷದಲ್ಲಿ ಶೃಂಗರಿಸಿ ಮದುವೆ ಮಾಡಿಸಲಾಗುತ್ತದೆ.  ಒಂದು ಹೆಣ್ಣು ಮಗುವಿಗೆ ವರನ ಉಡಿಗೆ ತೊಡಿಸಿ ಮತ್ತೊಂದು ಹೆಣ್ಣು ಮಗುವಿಗೆ ವಧುವಿನ ಅಲಂಕಾರ ಮಾಡಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಸಾಂಕೇತಿಕವಾಗಿ ಮಾಂಗಲ್ಯ ಕಟ್ಟಿಸಿ ವಿವಾಹ ಮಾಡಲಾಗುತ್ತದೆ.  ವರುಣ ದೇವನ ಕೃಪೆಗಾಗಿ ಗ್ರಾಮೀಣ ಭಾಗದಲ್ಲಿ ನಡೆಯುವ ವಿಶೇಷ ಕಲ್ಯಾಣವಿ

ಇದನ್ನೂ ಓದಿ: Government School: ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ-ಬದಿಪಳಿಕೆ; ಇಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದಾರೆ ಮಕ್ಕ

ಕಾರ ಹುಣ್ಣಿಮೆ ಮರುದಿನ ಕಲ್ಯಾಣೋತ್ಸ

 ಕಾರಹುಣ್ಣಿಮೆ ಮರು ದಿನದಂದು ಸಸಿ ಹಬ್ಬ ಮಾಡುವ ಪದ್ಧತಿ ಇದೆ. ಆ ನಿಮಿತ್ತ ಹೆಣ್ಣು ಮಕ್ಕಳಿಬ್ಬರನ್ನು ವಧು ವರರನ್ನಾಗಿ ತಯಾರಿ ಮಾಡಿ ಅವರಿಗೆ ಮದುವೆ ಶಾಸ್ತ್ರ ಮಾಡುವ ರೂಢಿ ಇ

ಸಂಪ್ರದಾಯಬದ್ಧವಾಗಿ ನಡೆಯುತ್ತದೆ ಅಣಕು ಮದು

ಮದುವೆ ಸಂಪ್ರದಾಯದಂತೆ ಎಲ್ಲಾ ಶಾಸ್ತ್ರಗಳನ್ನು ಮಾಡಿಸಿ, ಅಣಕು ಮದುವೆ ಮಾಡಿಸಲಾಗುತ್ತದೆ. ವಧು ವರರಿಗೆ ಅರಿಶಿನ ಶಾಸ್ತ್ರ ಮಾಡಿ, ಮಾಂಗಲ್ಯಧಾರಣೆ ಮಾಡಿಸಲಾಗುತ್ತ

ಅಣಕು ದಂಪತಿಗೆ ಗ್ರಾಮಸ್ಥರಿಂದ ಆಶೀರ್ವಾ

 ಈ ಅಣಕು ಮದುವೆಗೆ ಗ್ರಾಮದ ಗುರು ಹಿರಿಯರು, ಮಹಿಳೆಯರು , ಮಕ್ಕಳು ಸಾಕ್ಷಿಯಾದರು. ನೆರೆದಿದ್ದವರೆಲ್ಲ ಮದುವೆ ನೋಡಿ ಖುಷಿಗೊಂಡರು. ಅಣಕು ಮದುವೆಯಾದವರಿಗೆ ಗ್ರಾಮದಲ್ಲಿ ಭಾಜ ಭಜಂತ್ರಿ ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಅಕ್ಷತೆ ಹಾಕಿ ಶುಭ ಹಾರೈಸಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಶುಭ ಹಾರೈಕೆ ಮಾಡುವಂತೆ ಅಣಕು ಮದುವೆಯಾದ ಇವರಿಗೆ ಗ್ರಾಮಸ್ಥರು ಶುಭ ಹಾರೈ

 ವಿಜಯಪುರದಲ್ಲಷ್ಟೇ ಅಲ್ಲ ಹಲವೆಡೆ ಇಂತಹ ಆಚ

ಮಳೆ ಬಾರದಿದ್ದರೆ ಕಪ್ಪೆ ಮದುವೆ, ಕತ್ತೆ ಮದುವೆಯಂತ ಸಂಪ್ರದಾಯವನ್ನು ಹಲವೆಡೆ ಆಚರಿಸಲಾಗುತ್ತದೆ. ಆದರೆ ಮಕ್ಕಳ ಮದುವೆ ಮಾಡಿಸುವುದು ವಿಶೇಷ ಅಂತಾನೇ ಹೇಳಬಹುದು. ಆದರೆ ಈ ಆಚರಣೆ ಬರೀ ವಿಜಯಪುರದ ಮುದ್ದೇಬಿಹಾಳ ಭಾಗದಲ್ಲಿ ಮಾತ್ರ ನಡೆಯುವುದಿಲ್ಲ. ಬದಲಾಗಿ ಮೈಸೂರಿನ ಕೆಲವೊಂದು ಭಾಗದಲ್ಲಿ, ಯಾದಗಿರಿ ಸುರಪುರ ಸೇರಿದಂತೆ ಹಲವೆಡೆ ಇಂತಹ ವಿಶಿಷ್ಟ ಆಚರಣೆ ನಡೆಯುತ್ತ

ಇದನ್ನೂ ಓದಿ: Agriculture: ಅಕ್ಕಿಗೆ ಭಾರೀ ಡಿಮ್ಯಾಂಡ್; ಭತ್ತದ ಬೆಳೆಯತ್ತ ದಕ್ಷಿಣ ಕನ್ನಡ ರೈತರ ಚಿ

 ಮದುವೆ ಬಳಿಕ ಭರ್ಜರಿ ಭೋಜನವೂ ನಡೆಯುತ್ತ

ಕೆಲವೆಡೆ ಅಣಕು ಮದುವೆಯ ನಂತರ  ವಿವಿಧ ಬಗೆಯ ತಿಂಡಿ, ತಿನಿಸು, ಅಡುಗೆಗಳನ್ನು ಮಾಡಲಾಗುತ್ತದೆ, ಗ್ರಾಮದ ಪ್ರತಿಯೊಬ್ಬರು ನವ ವರರಿಗೆ ಶುಭ ಹಾರೈಸಿ, ಭಕ್ಷ್ಯ ಭೋಜನ ಸವಿದು ಜನರು ಖುಷಿಪಡುತ್ತಾರೆದೆ!ತ್ತದೆ.ರಣೆಸಿದರು.ದದೆ.ವೆದೆ.ವಳು!ದು. ವರ!.ವೆಸಿ, ಭಕ್ಷ್ಯ ಭೋಜನ ಸವಿದು ಜನರು ಖುಷಿಪಡುತ್ತಾರೆ

Post a Comment

Previous Post Next Post