Agnipath: ಅಗ್ನಿಪಥ್‌ಗೆ ಆರಂಭದಲ್ಲಿಯೇ ಅಗ್ನಿ ಪರೀಕ್ಷೆ! 2ನೇ ದಿನ ರೈಲಿಗೆ ಬೆಂಕಿ, ಪೊಲೀಸರ ಮೇಲೆ ಕಲ್ಲು ತೂರಾಟ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇಂದೂ ಕೂಡ ಮುಂದುವರೆಯಿತು. ಎರಡನೇ ದಿನವಾದ ಇಂದು ಪ್ರತಿಭಟನೆ ಹಿಂಸಾ ರೂಪ ಪಡೆಯಿತು. ಬಿಹಾರದ ಹಲವು ಭಾಗಗಳಲ್ಲಿ ಸತತ ಎರಡನೇ ದಿನ ರೈಲು ಮತ್ತು ವಾಹನ ಸಂಚಾರಕ್ಕೆ ಸೇನಾ ಆಕಾಂಕ್ಷಿಗಳು ಅಡ್ಡಿಪಡಿಸಿದರು.


 ನವದೆಹಲಿ: ಭಾರತೀಯ ಸೇನೆಯಲ್ಲಿ (Indian Military) ಅಮೂಲಾಗ್ರ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ‘ಅಗ್ನಿ ಪಥ್’ (Agnipath) ಎಂಬ ಯೋಜನೆ (Project) ತರಲು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ. ಇನ್ನು ಮುಂದೆ ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ–ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿ ‘ಅಗ್ನಿಪಥ್’ ಯೋಜನೆ ಜಾರಿಯಾಗಿದೆ. ಆದರೆ ಯೋಜನೆಗೆ ಆರಂಭದಲ್ಲಿಯೇ ಭಾರೀ ವಿರೋಧ ಎದುರಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ (Bihar), ರಾಜಸ್ಥಾನ (Rajasthan), ಜಾರ್ಖಂಡ್ (Jharkhand) ಸೇರಿದಂತೆ ದೇಶದ ಹಲವೆಡೆ ಇಂದು ಭಾರೀ ಪ್ರತಿಭಟನೆ (Protest) ನಡೆಯಿತು. ಬಿಹಾರದ ಛಾಪ್ರಾದಲ್ಲಿ ಪ್ರತಿಭಟನಾಕಾರರು ರೈಲಿಗೆ (Rail) ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆಯಿಂದ ಪ್ರತಿಭಟನೆ ನಡೆಯುತ್ತಿದ್ದು, ಇಂದು ಹಲವೆಡೆ ಹಿಂಸೆಗೆ ತಿರುಗಿತ್ತು.

ಅಗ್ನಿಪಥ್ ವಿರೋಧಿಸಿ 2ನೇ ದಿನವೂ ಪ್ರತಿಭ

ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇಂದೂ ಕೂಡ ಮುಂದುವರೆಯಿತು. ಎರಡನೇ ದಿನವಾದ ಇಂದು ಪ್ರತಿಭಟನೆ ಹಿಂಸಾ ರೂಪ ಪಡೆಯಿತು. ಬಿಹಾರದ ಹಲವು ಭಾಗಗಳಲ್ಲಿ ಸತತ ಎರಡನೇ ದಿನ ರೈಲು ಮತ್ತು ವಾಹನ ಸಂಚಾರಕ್ಕೆ ಸೇನಾ ಆಕಾಂಕ್ಷಿಗಳು ಅಡ್ಡಿಪಡಿಸಿದರು

ರೈಲಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾ

ಬಿಹಾರದ ಭಭುವಾ ರೋಡ್ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಗಾಜಿನ ಕಿಟಕಿಗಳನ್ನು ಲಾಠಿಗಳಿಂದ ಒಡೆದು ಹಾಕಿದರು. ಅಲ್ಲದೆ, ಒಂದು ಕೋಚ್‌ಗೆ ಬೆಂಕಿ ಕೂಡ ಹಚ್ಚಿದರು. 'ಇಂಡಿಯನ್ ಆರ್ಮಿ ಲವರ್ಸ್' ಎಂಬ ಬ್ಯಾನರ್ ಹಿಡಿದು, ಹೊಸ ನೇಮಕಾತಿ ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಆರಾಹ್‌ದಲ್ಲಿನ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ

ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇ

ರೈಲು ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋ

ಬಕ್ಸರ್ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಯುವಕರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿದರು. ರೈಲ್ವೆ ಹಳಿಯಲ್ಲೇ ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪಾಟ್ನಾದಿಂದ ಹೊರಡಬೇಕಿದ್ದ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ತಡೆದು ನಿಲ್ಲಿಸಿದರು, ಇದರಿಂದಾಗಿ ರೈಲು 30 ನಿಮಿಷಗಳ ಕಾಲ ಮುಂದೆ ಹೋಗಲು ಸಾಧ್ಯವಾಗಲಿಲ್ಲ

ಪೊಲೀಸರ ಮೇಲೆ ಕಲ್ಲು ತೂ

ಜೆಹನಾಬಾದ್‌ನಲ್ಲಿ ರೈಲ್ವೆ ಸಂಚಾರಕ್ಕೆ ಅಡ್ಡಿಪಡಿಸಲು ರೈಲು ಹಳಿಗಳ ಮೇಲೆ ನಿಂತುಕೊಂಡಿದ್ದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಬೆನ್ನಟ್ಟಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪೊಲೀಸರು ಸೇರಿದಂತೆ ಅನೇಕ ಮಂದಿಗೆ ಗಾಯಗಳಾಗಿ

ಜಾರ್ಖಂಡ್‌, ರಾಜಸ್ಥಾನದಲ್ಲೂ ಪ್ರತಿಭ

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ಜೂನ್ 10 ರಂದು ಹಿಂಸಾಚಾರದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಅತ್ತ ರಾಜಸ್ಥಾನದ ಹಲವೆಡೆ ಕೂಡ ಅಗ್ನಿಪಥ್ ವಿರೋಧಿಸಿ ಪ್ರತಿಭಟನೆಗಳು ನಡೆದ

ಇದನ್ನೂ ಓದಿ: National Herald Case: ನಾಳಿನ ವಿಚಾರಣೆಯಿಂದ ವಿನಾಯಿತಿ ನೀಡಿ ಅಂತ ರಾಹುಲ್ ಗಾಂಧಿ ಮನವಿ, ಅಸ್ತು ಎಂದ್ರಾ ಇಡಿ ಅಧಿಕಾರಿಗ

ಅಗ್ನಿಪಥ್‌ಗೆ ವಿರೋಧ ವ್ಯಕ್ತವಾಗಿದ್ದು ಏ

ಅಗ್ನಿಪಥ ಯೋಜನೆಯಡಿ ನೇಮಕಗೊಳ್ಳುವ ಜನರಲ್ಲಿ ಶೇಕಡಾ 75 ರಷ್ಟು ಜನರಿಗೆ ಸೇವಾ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಅಥವಾ ಯಾವುದೇ ರೀತಿಯ ಪಿಂಚಣಿ ಪ್ರಯೋಜನವನ್ನು ಪಡೆಯುವುದಿಲ್ಲ. ಎರಡು ವರ್ಷಗಳ ನಂತರ ಸೇನೆಗೆ ನೇಮಕಾತಿ ಆರಂಭವಾಗಿದ್ದು, ನಂತರವೂ ಭವಿಷ್ಯದ ಬಗ್ಗೆ ಖಚಿತತೆ ಇಲ್ಲ ಎನ್ನುತ್ತಾರೆ. 4 ವರ್ಷಗಳ ನಂತರ ಸೇವೆ ವಿಸ್ತರಣೆಯಾಗದಿದ್ದರೆ ನಾವು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಈ ಯೋಜನೆಗೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ.ಕೆ?ಳು?ವು.ಟನೆವೆ.ರಾಟ.ಷಣೆನು?ರು.ರರು.ಟನೆತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post