TRANSPORT DEPARTMENT: 200 ರೂಪಾಯಿಗೆ ಡಿಎಲ್ ಸ್ಮಾರ್ಟ್ ಕಾರ್ಡ್ - ಸಾರಿಗೆ ಸಚಿವರಿಂದ ಘೋಷಣೆ


 [ಗಳೂರು: ಕರ್ನಾಟಕ ಸಾರಿಗೆ ಇಲಾಖೆ (Karnataka Transport Department) ಹೊಸ ಸ್ಮಾರ್ಟ್‌ ಕಾರ್ಡ್‌ (Smart Card) ಯೋಜನೆಯನ್ನು ಜಾರಿಗೆ ತಂದಿದ್ದು, ನೋಂದಣಿ ಪ್ರಮಾಣಪತ್ರ (RC) ಮತ್ತು ಚಾಲನಾ ಅನುಜ್ಞಾ ಪತ್ರ (DL) ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಮುಂದಿನ ಐದು ವರ್ಷಗಳ ಅವಧಿಗೆ ಜಾರಿಗೆ ಬರುವಂತೆ ಪ್ರಾರಂಭಿಸಲಾಗಿದೆ.

ಕೇಂದ್ರ ಸರ್ಕಾರದ ಅಧಿಸೂಚನೆ ಸಂಖ್ಯೆ.GSR 174(E), ದಿನಾಂಕ:01-03-2019 ಅನುಸಾರ ದೇಶಾದ್ಯಂತ ಒಂದೇ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಿ ವಾಹನ ಮಾಲೀಕರಿಗೆ ಮತ್ತು ಲೈಸೆನ್ಸ್ ದಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಮಾರ್ಟ್ ಕಾರ್ಡ್ ಪಾಲಿಕಾರ್‌ಬಾನೆಟ್‌ ಮೆಟೀರಿಯಲ್‌ ಆಗಿದ್ದು, ಲೇಸರ್‌ ಎನ್‌ಗ್ರೇವಿಂಗ್‌ ಮೂಲಕ ಮುದ್ರಿಸಲಾಗುತ್ತಿದೆ. ಸ್ಮಾರ್ಟ್ ಕಾರ್ಡಿನಲ್ಲಿ 64 ಕೆಬಿ ಕೆಪ್ಯಾಸಿಟಿಯ ಮೈಕ್ರೋ ಚಿಪ್‌ ಇದ್ದು ಹೆಚ್ಚುವರಿಯಾಗಿ ಎನ್‌ಐಸಿ ತಂತ್ರಾಂಶದ ಕ್ಯೂಆರ್‌ ಕೋಡ್‌ ಅನ್ನು ಸಹ ಮುದ್ರಿಸಲಾಗುತ್ತದೆ.


ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡ್‌ಗಳನ್ನು ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು. ಕೇಂದ್ರಿಕೃತ ಮುದ್ರಣ ಸೌಲಭ್ಯ ವ್ಯವಸ್ಥೆಯಡಿ ಸೇವಾದಾರರಾದ ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಣ ಮಾಡಿ, ಸಂಬಂಧಪಟ್ಟ ರಾಜ್ಯದ ಅಧೀನ ಕಛೇರಿಗಳಿಗೆ ರವಾನಿಸಲಾಗುವುದು. ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಮಾರ್ಟ್ ಕಾರ್ಡಿನಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಪರಿಶೀಲಿಸಿ ಸ್ಪೀಡ್ ಪೋಸ್ಟ್ ಮೂಲಕ ಸಂಬಂಧಪಟ್ಟವರಿಗೆ ರವಾನಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.


ಕೇಂದ್ರಿಕೃತ ಮುದ್ರಣ ಸೌಲಭ್ಯದಲ್ಲಿರುವ ಎರಡು ಸ್ಮಾರ್ಟ್ ಕಾರ್ಡ್ ಪ್ರಿಂಟಿಂಗ್ ಮೆಷಿನ್ ಅನ್ನು ಸೇವಾದಾರರ ಮೂಲಕ ಇಟಲಿ ಮೂಲದ ಕಂಪನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಆಮದು ಮಾಡಿಕೊಂಡಿರುವ ಪ್ರಿಂಟಿಂಗ್ ಮೆಷಿನ್ ನಲ್ಲಿರುವ ವೈಶಿಷ್ಟ್ಯತೆಗಳು ದೇಶದಲ್ಲಿಯೇ ಮೊದಲನೆಯದಾಗಿದ್ದು, ಒಂದು ತಾಸಿಗೆ ಸುಮಾರು 500 - 600 ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಲಾಗುತ್ತಿದ್ದು, ಒಂದು ದಿನದಲ್ಲಿ ಅಂದಾಜು 15 ರಿಂದ 16 ಸಾವಿರ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಲಾಗುತ್ತದೆ.


ಅರ್ಜಿದಾರರಿಂದ ಪ್ರತಿ ಸ್ಮಾರ್ಟ್ ಕಾರ್ಡಿಗೆ ಸಂಗ್ರಹಿಸಲಾಗುವ ಒಟ್ಟಾರೆ ಶುಲ್ಕ 200 ರೂ. ಈ ಪೈಕಿ ಸೇವಾದಾರರ ಪಾಲು 64.46 ರೂ. ಗಳು (ಎಲ್ಲಾ ತರಹದ ತೆರಿಗೆಗಳು ಸೇರಿ) ಮತ್ತು ಸರ್ಕಾರದ ಪಾಲು 135.54 ರೂ. ಗಳಾಗಿರುತ್ತವೆ.


ಮೈಕ್ರೊ ಚಿಪ್ ಹೊಂದಿರುವ ನೋಂದಣಿ ಪ್ರಮಾಣಪತ್ರ (RC) ಸ್ಮಾರ್ಟ್ ಕಾರ್ಡಿನ ಎರಡು ಬದಿಯಲ್ಲಿ, ವಾಹನ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ನೋಂದಣಿ ಸಿಂಧುತ್ವ, ಮಾಲೀಕತ್ವ ಕ್ರಮ ಸಂಖ್ಯೆ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ, ಮಾಲೀಕರ ಹೆಸರು, ಮಾಲೀಕರ ವಿಳಾಸ, ಇಂಧನ ಹೊರಸೂಸುವಿಕೆ ಮಾನದಂಡಗಳು, ಉತ್ಪಾದನೆಯ ತಿಂಗಳು ವರ್ಷ, ಸಿಲಿಂಡರ್‌ಗಳ ಸಂಖ್ಯೆ, ಆಕ್ಸಲ್ ಸಂಖ್ಯೆ, ತಯಾರಕರ ಹೆಸರು, ಮಾದರಿ ಹೆಸರು, ಬಣ್ಣ, ಆಸನ ಸಾಮರ್ಥ್ಯ, ನಿಲ್ಲುವ ಸಾಮರ್ಥ್ಯ, ಸ್ಲೀಪರ್ ಸಾಮರ್ಥ್ಯ, ಹೊರೆಯಿಲ್ಲದ ತೂಕ, ಹೊರೆ ತೂಕ, ಒಟ್ಟು ಸಂಯೋಜನೆಯ ತೂಕ, ಘನ ಸಾಮರ್ಥ್ಯ, ಹಾರ್ಸ್‌ ಪವರ್, ವೀಲ್‌ ಬೇಸ್‌, ಮಾಲೀಕರ ಹೆಸರುಗಳು ಮುದ್ರಿತವಾಗುತ್ತದೆ.


ಚಾಲನಾ ಅನುಜ್ಞಾ ಪತ್ರ (DL) ಸ್ಮಾರ್ಟ್ ಕಾರ್ಡುಗಳನ್ನು ಈ ತಿಂಗಳ 15ನೇ ತಾರೀಖಿನೊಳಗಾಗಿ ಕೇಂದ್ರಿಕೃತ ಮುದ್ರಣ ಸೌಲಭ್ಯದಡಿ NIC ರವರೊಂದಿಗೆ ಸಾಫ್ಟ್ ವೇರ್ ಇಂಟಿಗ್ರೇಷನ್ ಮಾಡಿ ಮುದ್ರಿಸಿ ಲೈಸೆನ್ಸ್ ದಾರರಿಗೆ ವಿತರಿಸಲಾಗುವುದು ಎಂದು ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

Previous Post Next Post