Karur Stampede: ನ. 5ಕ್ಕೆ ಸಭೆ ಕರೆದ ನಟ ವಿಜಯ್‌; ಮತ್ತೆ ಚುನಾವಣೆಗಾಗಿ ರ‍್ಯಾಲಿ ಆರಂಭಿಸಲು ಚರ್ಚೆ?


  ಹಾಬಲಿಪುರಂ: ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಸಮಾರೋಪದಿ ಸಮಾವೇಶ ಸಭೆ, ರ‍್ಯಾಲಿಗಳು ನಡೆಸುತ್ತಿದ್ದ ತಮಿಳಿಗ ವೆಟ್ರಿ ಕಳಗಂ ಪಕ್ಷ(ಟಿವಿಕೆ)ವು, ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ನಂತರ ಎಲ್ಲದಕ್ಕೂ ಸಂಪೂರ್ಣ ಬ್ರೇಕ್‌ ಕೊಟ್ಟಿಕೊಂಡಿತ್ತು. ಘಟನೆ ನಡೆದು ಒಂದು ತಿಂಗಲ ನಂತರ, ನವೆಂಬರ್‌ 5ರಂದು ಪಕ್ಷದ ಮುಖ್ಯಸ್ಥ ನಟ ವಿಜಯ್‌ ಅವರು ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ಮತ್ತೆ ಜಾಗರೂಕರಾಗಿ ಪ್ರಚಾರ ಆರಂಭಿಸುವ ಬಗ್ಗೆ ಚರ್ಚೆ ಮಾಡಬಹುದು ಎನ್ನಲಾಗುತ್ತಿದೆ.


ಟಿವಿಕೆ ಅಧ್ಯಕ್ಷರಾದ ನಟ ವಿಜಯ್ ಅವರು ಪಕ್ಷದ ಸಭೆಯನ್ನು ನವೆಂಬರ್ 5 ರಂದು ಮಹಾಬಲಿಪುರಂನಲ್ಲಿ ನಡೆಸಲು ಕರೆ ನೀಡಿದ್ದಾರೆ. ಟಿವಿಕೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಪ್ರಮುಖ ನಿರ್ಣಯಗಳು, ಮುಂಬರುವ ಪಕ್ಷದ ಚಟುವಟಿಕೆಗಳು ಮತ್ತು ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗುವುದು.



ಕರೂರು ಕಾಲ್ತುಳಿತ


ಒಂದು ತಿಂಗಳ ಹಿಂದೆ ಕರೂರಿನಲ್ಲಿ ವಿಜಯ್ ಅವರ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಘಟನೆಯ ನಂತರ, ಪಕ್ಷವು ತನ್ನ ಸಾರ್ವಜನಿಕ ಚಟುವಟಿಕೆಗಳನ್ನು ಸೀಮಿತಗೊಳಿಸಿ, ಎಲ್ಲ ರೀತಿಯ ಪ್ರಚಾರಕ್ಕೂ ಬ್ರೇಕ್‌ ಹಾಕಿಕೊಂಡಿತ್ತು. ಸದ್ಯ ಈ ಬಗ್ಗೆ ಸಭೆ ನಡೆಸಿ, ಮುಂದಿನ ಕಾರ್ಯಕ್ರಮಗಳನ್ನು ಅಥವಾ ಪ್ರಚಾರವನ್ನು ಜಾಗರೂಕವಾಗಿ ಹೇಗೆ ಜರುಗಿಸಬೇಕು ಎಂಬ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 ಮುಂದಿನ ಹೆಜ್ಜೆ ಎಚ್ಚರಿಕೆಯಾಗಿ ಇಡೋಣ

ಪಕ್ಷದ ಕಾರ್ಯಕರ್ತರಿಗೆ ವಿಜಯ್ ಬರೆದ ಪತ್ರದಲ್ಲಿ, ʻಕಾಲ್ತುಳಿತದ ನಂತರ ಟಿವಿಕೆ ಪಕ್ಷದ ಮೇಲೆ ಕಳಂಕ ತರಲು ಹಲವು ರಾಜಕೀಯ ನಾಯಕರು ಹಲವು ರೀತಿಯಲ್ಲಿ ಕುತಂತ್ರ ರೂಪಿಸುತ್ತಲೇ ಇದ್ದಾರೆ. ಆದರೆ, ತಮಿಳುನಾಡಿನ ಜನರು ನಮ್ಮೊಂದಿಗೆ ನಿಂತಿದ್ದಾರೆ. ಅವರ ಬೆಂಬಲ ನಮಗೆ ಇದ್ದೇ ಇದೆ. ನಮ್ಮ ತಾಯ್ನಾಡು ತಮಿಳುನಾಡಿನ ಜನರಿಗಾಗಿ ನಾವು ಹೋರಾಡುವ ಸಮಯ ಬಂದಿದೆ. ಜನರ ಬೆಂಬಲ ಇರುವವರೆಗೂ ಪಕ್ಷವನ್ನು ತುಳಿಯಲು, ಕುಂತತ್ರವಾಗಿ ಮುಗಿಸಲು ಸಾಧ್ಯವಿಲ್ಲʼ ಎಂದು ಉಲ್ಲೇಖಿಸಿದ್ದಾರೆ.


ಮುಂದಿನ ಕಾರ್ಯಕ್ರಮಗಳನ್ನು ಮಾಡಲು ಪಕ್ಷದ ಸದಸ್ಯರು, ಕಾಳಜಿವಹಿಸಿ, ಎಲ್ಲ ರೀತಿಯಾ ಲೆಕ್ಕಾಚಾರ ಮತ್ತು ಸ್ಪಷ್ಟತೆಯೊಂದಿಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಜಯ್ ಸೂಚನೆ ಕೊಟ್ಟಿದ್ದಾರೆ.

ಕರೂರು ಕಾಲ್ತುಳಿತ ಕೇಸ್‌ ಸಿಬಿಐಗೆ


ತಮಿಳುನಾಡಿನ ಕರೂರಿನಲ್ಲಿನಟ ವಿಜಯ್‌ ಪ್ರಚಾರ ರಾರ‍ಯಲಿ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ. ಸೆಪ್ಟೆಂಬರ್‌ 27ರಂದು ಕರೂರಿನಲ್ಲಿಟಿಎಂಕೆ ಪಕ್ಷದ ಅಧ್ಯಕ್ಷ, ನಟ ವಿಜಯ್‌ ಪ್ರಚಾರ ರಾರ‍ಯಲಿವೇಳೆ ಉಂಟಾದ ನೂಕುನುಗ್ಗಲಿನಲ್ಲಿ41 ಜನರು ಬಲಿಯಾಗಿದ್ದರು. ಈ ಘಟನೆಯನ್ನು ಆಡಳಿತರೂಢ ಡಿಎಂಕೆ ಷಡ್ಯಂತ್ರ ಎಂದು ಆರೋಪಿಧಿಸಿದ್ದ ಟಿವಿಕೆ, ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಧಿಯಲ್ಲಿಸ್ವತಂತ್ರ ತನಿಖೆಗೆ ಮನವಿ ಮಾಡಿತ್ತು. ನ್ಯಾಯಮೂರ್ತಿಗಳಾದ ಜೆ.ಕೆ ಮಾಹೇಶ್ವರಿ ಮತ್ತು ಎನ್‌.ವಿ. ಅಂಜಾರಿಯಾ ಅವರಿದ್ದ ಪೀಠವು, ಸಿಬಿಐ ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಧಿಧಿಮೂರ್ತಿ ಅಜಯ್‌ ರಸ್ತೋಗಿ ನೇತೃತ್ವದ ಸಮಿತಿಯನ್ನು ನೇಮಿಸಿದೆ. ಇದಕ್ಕೂ ಮುನ್ನ ಮದ್ರಾಸ್‌ ಹೈಕೋರ್ಟ್‌ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ಆದೇಶಿಸಿತ್ತು. ಆದರೆ, 'ಎಸ್‌ಐಟಿ'ಯಲ್ಲಿತಮಿಳುನಾಡಿನ ಪೊಲೀಸ್‌ ಅಧಿಕಾರಿಧಿಗಳು ಮಾತ್ರ ಇದ್ದು, ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲಎಂದು ಆರೋಪಿಸಿ ಟಿವಿಕೆ ಪಕ್ಷ ಸುಪ್ರೀಂ ಮೆಟ್ಟಿಲೇರಿತ್ತು.

Post a Comment

Previous Post Next Post