ನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ರಜನಿಕಾಂತ್ ಅವರ ಆಪ್ತ ಮೂಲಗಳನ್ನು ಉದ್ದೇಶಿಸಿ ಸುದ್ದಿ ಮಾಧ್ಯಮವೊಂದು ಈ ಬಗ್ಗೆ ವಿಸ್ತೃತ ವರದಿ ಮಾಡಿದೆ. ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿದ ಕೂಡಲೇ ನಟನೆಗೆ ಗುಡ್ ಬೈ ಘೋಷಿಸಲು ನಿರ್ಧರಿಸಲಾಗಿದ್ದಾರೆ.
ದಿಢೀರನೆ ಈ ನಿರ್ಧಾರವೇಕೆ?
ರಜನಿಕಾಂತ್ ಅವರಿಗೆ ಈಗ 74 ವರ್ಷ. ಅವರು ಇತ್ತೀಚೆಗೆ ಜೈಲರ್ ಹಾಗೂ ಕೂಲಿ ಎಂಬ ಆಯಕ್ಷನ್ ಚಿತ್ರಗಳನ್ನು ಮಾಡಿದ್ದಾರೆ. ಆದರೆ, ಅಪಾರದ ದೈಹಿಕ ಪರಿಶ್ರಮ ಬೇಡುವ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವಾಗ ಅವರಿಗೆ ತೀರಾ ಸುಸ್ತಾಗುತ್ತಿದ್ದರು. ಅಲ್ಲದೆ, ಕೂಲಿ ಚಿತ್ರದಲ್ಲಿನ ಸಾಹಸಮಯ ದೃಶ್ಯಗಳಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅಲ್ಲದೆ, ಅವರಿಗೆ ಆಗಾಗ್ಗೆ ವಯೋಸಹಜ ದೈಹಿಕ ಸಮಸ್ಯೆಗಳೂ ಕಾಡಲಾರಂಭಿಸಿವೆ. ಆ ಹಿನ್ನೆಲೆಯಲ್ಲಿ, ತಮ್ಮ ಕುಟುಂಬದವರೊಡನೆ ಚರ್ಚಿಸಿರುವ ಅವರು ಅವರ ಸಲಹೆಯ ಮೇರೆಗೆ ನಟನೆಗೆ ಗೌರವಯುತವಾಗಿ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅದಲ್ಲದೆ, ಪೀಕ್ ಲೆವೆಲ್ ನಲ್ಲಿದ್ದಾಗಲೇ ಚಿತ್ರರಂಗಕ್ಕೆ ವಿದಾಯ ಹೇಳುವುದು ಸಹ ಒಂದು ಗೌರವಯುತವಾದ ಕೆಲಸ ಎಂದು ಅವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಕೂಲಿ ಚಿತ್ರದಲ್ಲಿನ ಕೆಲವು ದೃಶ್ಯಗಳಿಗೆ ರಜನಿಯವರಿಗೆ ಡ್ಯೂಪ್ ಬಳಸಲಾಗಿತ್ತು. ಈ ವಿಚಾರ ಲೀಕ್ ಆಗಿ, ಸೋಷಿಯಲ್ ಮೀಡಿಯಾಗಳಲ್ಲಿ ರಜನಿಕಾಂತ್ ಅವರ ವಿರುದ್ಧ ಕೆಲವು ಟೀಕೆಗಳು ಸಹ ವ್ಯಕ್ತವಾಗಿದ್ದವು. ಹಾಗಾಗಿ, ಇಂದಿನ ಯುವಪೀಳಿಗೆಯ ಸೋಷಿಯಲ್ ಮೀಡಿಯಾ ಟಾಂಗ್ ಗಳಿಂದ ಎಚ್ಚೆತ್ತುಕೊಂಡಿರುವ ರಜನಿಕಾಂತ್ ಅವರು ಆಗಲೇ ಚಿತ್ರರಂಗ ತೊರೆಯಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.
ಸದ್ಯಕ್ಕೆ ಮೂರು ಚಿತ್ರಗಳು
ಸದ್ಯಕ್ಕೆ ರಜನಿಕಾಂತ್ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿವೆ. ಅವುಗಳಲ್ಲಿ ಒಂದು ಸಿ. ಸುಂದರ್ ಅವರ ಕಾಮಿಡಿ ಚಿತ್ರ. ಆ ಚಿತ್ರದ ಜೊತೆಗೆ ರಜನಿಯವರು ಜೈಲರ್ - 2 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣ ಸದ್ಯಕ್ಕೆ ಗೋವಾದಲ್ಲಿ ನಡೆಯುತ್ತಿದೆ. ಈ ಎರಡೂ ಚಿತ್ರಗಳ ನಂತರ ಕಮಲ್ ಹಾಸನ್ ಅವರ ಜೊತೆಗೆ ಒಂದು ಚಿತ್ರದಲ್ಲಿ ನಟಿಸಲು ರಜನಿಕಾಂತ್ ಅವರು ನಿರ್ಧರಿಸಿದ್ದಾರೆ.
ಈ ಮೂರೂ ಚಿತ್ರಗಳು ಬಹುಶಃ 2026ರ ಅಂತ್ಯಕ್ಕೆ ಮುಗಿಯುವ ಸಾಧ್ಯತೆಗಳಿವೆ. ಅವು ಮುಗಿದ ಕೂಡಲೇ ರಜನಿಯವರು ನಿವೃತ್ತಿಯ ಬಗ್ಗೆ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ. ಅಕಸ್ಮಾತ್ ಆ ಚಿತ್ರಗಳು ಮುಗಿಯುವುದು ತಡವಾಗಿ 2027ರಲ್ಲೂ ಅವರ ಚಿತ್ರ ಚಟುವಟಿಕೆಗಳು ಮುಂದುವರಿದೆ ಅವರ ನಿವೃತ್ತಿಯ ನಿರ್ದಾರ 2027ರಲ್ಲಿ ಹೊರಬೀಳಬಹುದು ಎಂದು ಹೇಳಲಾಗಿದೆ.

Post a Comment