ಖರ್ಗೆ ವಿದ್ಯಾರ್ಹತೆ ವಿವಾದ: 2018ರಲ್ಲಿ ಪಿಯುಸಿ, 2023ಕ್ಕೆ ಎಸ್ಸೆಸ್ಸೆಲ್ಸಿ! ಸಚಿವರ ಅಫಿಡವಿಟ್ ಗೊಂದಲಕ್ಕೆ ನೆಟ್ಟಿಗರಿಂದ ಫುಲ್ ಟ್ರೋಲ್


 ಗಳೂರು: ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇದೀಗ ತಮ್ಮ ವಿದ್ಯಾರ್ಹತೆಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಅವರ ವಿದ್ಯಾರ್ಹತೆ ಬೇರೆ ಬೇರೆಯಾಗಿರುವುದೇ ಈ ಎಲ್ಲಾ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿದೆ.

ಏನಿದು ಅಫಿಡವಿಟ್ ಗೊಂದಲ?

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಅಫಿಡವಿಟ್‌ನ ಎರಡು ಫೋಟೋಗಳು ವೈರಲ್ ಆಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿದ್ಯಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

* 2018ರ ಅಫಿಡವಿಟ್: 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಪ್ರಿಯಾಂಕ್ ಖರ್ಗೆ ತಮ್ಮ ವಿದ್ಯಾರ್ಹತೆಯನ್ನು '12ನೇ ತರಗತಿ' (ಪಿಯುಸಿ) ಎಂದು ನಮೂದಿಸಿದ್ದಾರೆ.

* 2023ರ ಅಫಿಡವಿಟ್: ಇತ್ತೀಚೆಗೆ ನಡೆದ 2023ರ ಚುನಾವಣೆಯ ಅಫಿಡವಿಟ್‌ನಲ್ಲಿ ತಮ್ಮ ವಿದ್ಯಾರ್ಹತೆಯನ್ನು '10ನೇ ತರಗತಿ ಉತ್ತೀರ್ಣ' (ಎಸ್‌ಎಸ್‌ಎಲ್‌ಸಿ) ಎಂದು ಘೋಷಿಸಿಕೊಂಡಿದ್ದಾರೆ.

ಈ ಎರಡೂ ಅಫಿಡವಿಟ್‌ಗಳ ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು, 'ಐದು ವರ್ಷಗಳಲ್ಲಿ ಸಚಿವರ ವಿದ್ಯಾರ್ಹತೆ ಪಿಯುಸಿಯಿಂದ ಎಸ್‌ಎಸ್‌ಎಲ್‌ಸಿಗೆ ಇಳಿದಿದ್ದು ಹೇಗೆ?' ಎಂದು ತಮಾಷೆಯಾಗಿ ಪ್ರಶ್ನಿಸುತ್ತಿದ್ದಾರೆ. 'ಸಾರ್, ದಯವಿಟ್ಟು ಮೊದಲು ಈ ಗೊಂದಲವನ್ನು ಸರಿಪಡಿಸಿ. ನೀವು ಓದಿದ್ದು ಎಸ್‌ಎಸ್‌ಎಲ್‌ಸಿನಾ ಅಥವಾ ಪಿಯುಸಿನಾ?' ಎಂದು ಕಾಮೆಂಟ್ ಮಾಡುವ ಮೂಲಕ ಸಚಿವರ ಕಾಲೆಳೆಯುತ್ತಿದ್ದಾರೆ.

ಸರಣಿ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಖರ್ಗೆ

ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾತನಾಡಿದ್ದು, ಬಜರಂಗದಳದ ಕುರಿತು ಹೇಳಿಕೆ ನೀಡಿದ್ದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದಲ್ಲದೆ, ಆಂಧ್ರಪ್ರದೇಶದ ಐಟಿ ಸಚಿವರು ಹಾಗೂ ಅಸ್ಸಾಂ ಮುಖ್ಯಮಂತ್ರಿಗಳ ಹೇಳಿಕೆಗಳಿಗೆ ತಿರುಗೇಟು ನೀಡುವ ಮೂಲಕವೂ ಅವರು ಗಮನ ಸೆಳೆದಿದ್ದರು. ಹೀಗೆ ಸತತವಾಗಿ ರಾಜಕೀಯ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಅವರ ವಿರುದ್ಧ, ಇದೀಗ ವಿರೋಧಿಗಳು ಮತ್ತು ಟ್ರೋಲಿಗರು ವಿದ್ಯಾರ್ಹತೆಯ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

ಈ ಅಫಿಡವಿಟ್ ಗೊಂದಲವು ತಾಂತ್ರಿಕ ತಪ್ಪಿನಿಂದ ಆಗಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕಡೆಯಿಂದ ಯಾವುದೇ ಸ್ಪಷ್ಟನೆ ಇನ್ನೂ ಲಭ್ಯವಾಗಿಲ್ಲ. ಆದರೆ, ಈ ವಿಚಾರವು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಮತ್ತು ಟ್ರೋಲ್‌ಗಳಿಗೆ ದೊಡ್ಡ ಆಹಾರವಾಗಿದೆ.

Post a Comment

Previous Post Next Post