ಕ್ಕಬಳ್ಳಾಪುರ: ಹೌದು ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಲ್ಲೂಕಿನ ನಂದಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿಯಾಗಿದೆ. ಐದು ವರ್ಷ ಇರುತ್ತದೆ ಎಂದು ತಿಳಿಸಿದರು.
ಈ ವೇಳೆ ಸುದ್ದಿಗಾರರು ನೀವು ಐದು ವರ್ಷ ಸಿ.ಎಂ ಆಗಿರುವಿರಾ ಎಂದು ಕೇಳಿದ್ದಕ್ಕೆ, ಹೌದು ಎಂದು ಉತ್ತರಿಸಿದರು.
ಅಶೋಕ, ನಾರಾಯಣಸ್ವಾಮಿ, ವಿಜಯೇಂದ್ರ ಬಿಜೆಪಿಯವರು. ಈ ಬಗ್ಗೆ ಹೇಳಲು ಅವರು ನಮ್ಮ ಹೈಕಮಾಂಡ್ ಅಲ್ಲ. ಅವರು ಹೇಳಿದರೆ ನೀವು ಬರೆಯುವುದಾ ಎಂದು ಮರುಪ್ರಶ್ನೆ ಹಾಕಿದರು.
ಬಿಜೆಪಿ ಅವರಿಗೆ ಸತ್ಯವೇ ಗೊತ್ತಿಲ್ಲ. ಅವರದ್ದು ಬರೀ ಸುಳ್ಳು. ನಾವು ಒಟ್ಟಾಗಿ ಇದ್ದೇವೆ. ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದರು.
ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ ಎಂದರು.
ಇದು ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ. ಬೆಳಗಾವಿ ವಿಭಾಗದ ಸಚಿವ ಸಂಪುಟ ಸಭೆಯನ್ನು ವಿಜಯಪುರದಲ್ಲಿ ಮಾಡಬೇಕು ಎಂದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
Post a Comment