ಸಿದ್ದರಾಮಯ್ಯ ಸಿಟ್ಟಿಗೆ ಗುರಿಯಾಗಿದ್ದ ಹಿರಿಯ ಪೊಲೀಸ್‌ ನಾರಾಯಣ ಭರಮನಿ ಸ್ವಯಂ ನಿವೃತ್ತಿ ಘೋಷಣೆಗೆ ಮುಂದು!


 ರವಾಡ: ಕೆಲ ತಿಂಗಳುಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ.ವಿ.ಭರಮನಿ ಅವರು ಸ್ವಯಂ ಘೋಷಿತ ರಾಜೀನಾಮೆಗೆ ಮುಂದಾಗಿದ್ದಾರೆ. ಈಗಾಗಲೇ ನಾರಾಯಣ ವಿ ಭರಮನಿ ರಾಜೀನಾಮೆಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಮನವೊಲಿಸುವ ಕಾರ್ಯವು ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳಿಂದ ನಡೆಯುತ್ತಿದೆ ಎನ್ನಲಾಗಿದೆ.

 ಈ ನಡುವೆ ಸಿಎಂ ವೇದಿಕೆ ಮೇಲೆ ಅವಮಾನ ಮಾಡಿದ್ದಕ್ಕೆ ಬೇಸರಗೊಂಡು ನಾರಾಯಣ.ವಿ.ಭರಮನಿ ಅವರು ರಾಜೀನಾಮೆಗೆ ಮುಂದಾಗಿದ್ದ ಎಂಬ ಮಾತುಗಳು ಕೇಳಿಬಂದಿವೆ.



ಆ ದಿನ ವೇದಿಕೆಯಲ್ಲಿ ಏನಾಗಿತ್ತು?


ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ವೇದಿಕೆಗೆ ಕರೆದು ಹೊಡೆಯಲು ಕೈ ಎತ್ತಿದ್ದು ವಿವಾದಕ್ಕೆ ಕಾರಣವಾಗಿತ್ತು. ವೇದಿಕೆ ಮೇಲೆ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗೆ "ಏಯ್‌.. ಯಾರಿಲ್ಲಿ ಎಸ್‌ಪಿ?" ಎಂದು ಕೂಗಿ ಕೈ ಎತ್ತಲು ಮುಂದಾದರು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸಿದ್ದರಾಮಯ್ಯ ಕೋಪಗೊಂಡಿದ್ದರು. ಸಿದ್ದರಾಮಯ್ಯ ಅವರ ಈ ವರ್ತನೆಗೆ ಅನೇಕರು ಆಕ್ಷೇಪ ವ್ಯಕ್ತವಾಗಿತ್ತು.

ಯಾರಿದು ಅಧಿಕಾರಿ? ಹಿನ್ನೆಲೆ ಏನು?


ನಾರಾಯಣ.ವಿ.ಭರಮನಿ ಅವರು 1994ರ ಬ್ಯಾಚ್‌ನ ಪೊಲೀಸ್ ಅಧಿಕಾರಿ. ಬೆಳಗಾವಿ ಜಿಲ್ಲೆಯಲ್ಲಿ ಅವರು ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿದ್ದಾರೆ. 2007ರಲ್ಲಿ ನಡೆದ ಕುಖ್ಯಾತ ರೌಡಿ ಪ್ರವೀಣ್ ಶಿಂತ್ರೆ ಎನ್‌ಕೌಂಟರ್ ಅನ್ನು ಅವರೇ ಮುನ್ನಡೆಸಿದ್ದರು. ನಾರಾಯಣ.ವಿ.ಭರಮನಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಗ್ರಾಮದವರು. ಅವರು ಜಮೀನ್ದಾರ ಕುಟುಂಬಕ್ಕೆ ಸೇರಿದವರು.

Post a Comment

Previous Post Next Post