Ola, Uber, Rapido: ಓಲಾ & ಊಬರ್ ಇನ್ಮುಂದೆ ದುಬಾರಿ: ಪೀಕ್ ಅವರ್‌ನಲ್ಲಿ ಡಬಲ್ ಚಾರ್ಚ್, ಬೈಕ್ ಟ್ಯಾಕ್ಸಿಗೂ ಅವಕಾಶ!


 ಶದಲ್ಲಿ ಒಂದಿಲ್ಲೊಂದು ಸೇವೆಗಳ ಬೆಲೆ ಏರಿಕೆ ಆಗುತ್ತಲ್ಲೇ ಇದೆ. ಈಗಾಗಲೇ ಬೆಂಗಳೂರಿನಂತಹ ನಗರಗಳಲ್ಲಿ ಸಾರಿಗೆ ದುಬಾರಿಯಾಗಿದೆ. ಜನ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವುದಕ್ಕೆ ನಿತ್ಯವೂ ಪರದಾಡುವ ಪರಿಸ್ಥಿತಿ ಇದೆ. ಈ ರೀತಿ ಇರುವಾಗಲೇ ಇದೀಗ ಕೇಂದ್ರ ಸರ್ಕಾರವು ಮತ್ತೊಂದು ಶಾಕ್ ನೀಡಿದೆ.

 ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದಾದ್ಯಂತ ರ್ಯಾಪಿಡೋ, ಓಲಾ ಹಾಗೂ ಊಬರ್ನಂತಹ ಕ್ಯಾಬ್ ಸೇವೆಗಳು ದುಬಾರಿ ಆಗಲಿವೆ. ಪೀಕ್ ಅವರ್‌ನಲ್ಲಿ ಇನ್ಮುಂದೆ ದುಪ್ಪಟ್ಟು ಚಾರ್ಚ್ ಆಗಲಿದೆ. ಅಲ್ಲದೇ ಬೈಕ್ ಟ್ಯಾಕ್ಸಿ ಸೇವೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಓಲಾ ಹಾಗೂ ಊಬರ್ ಕ್ಯಾಬ್ ಪ್ರಯಾಣದ ಬೆಲೆ ಎಷ್ಟು ಹೆಚ್ಚಾಗಲಿದೆ ಎನ್ನುವ ವಿವರ ಇಲ್ಲಿದೆ.


ಬೆಂಗಳೂರಿನಲ್ಲಿ ಸಂಚಾರ ಸೇವೆ ಈಗಾಗಲೇ ದುಬಾರಿಯಾಗಿದೆ. ಸಾರ್ವಜನಿಕ ಸಾರಿಗೆಗಳಾದ ಮೆಟ್ರೋ ಹಾಗೂ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ಇದರಿಂದ ಸಹಜವಾಗಿಯೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ವಿಪರೀತ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಪೀಕ್ ಅವರ್‌ಗಳಲ್ಲಿ ಮಾತ್ರ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ ಸಮಸ್ಯೆ ಆಗುತ್ತಿತ್ತು. ಇದೀಗ ಮಧ್ಯಾಹ್ನದ ಸಮಯದಲ್ಲೂ ಕೆಲವು ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಆಗುತ್ತಿದೆ. ಒಂದು ಕಡೆ ಟ್ರಾಫಿಕ್ ಜಾಮ್‌ ಸಮಸ್ಯೆ ಎದುರಾದರೆ ಮತ್ತೊಂದು ಕಡೆ ಪ್ರಯಾಣಕ್ಕೆ ಹೆಚ್ಚು ದುಡ್ಡು ಖರ್ಚಾಗುತ್ತಿರುವುದು ಜನರಿಗೆ ಸಂಕಷ್ಟ ತಂದಿದೆ.


ಇದೀಗ ಕೇಂದ್ರ ಸರ್ಕಾರವು ದೇಶದಲ್ಲಿ ಬೈಕ್ ಟ್ಯಾಕ್ಸಿಗೆ ಅವಕಾಶ ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಬೈಕ್ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇಟರ್ಗಳ ಸೇವೆಯಲ್ಲಿ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಮಾಡಿದೆ. ಆದರೆ ಇದರ ನೇರ ಪರಿಣಾಮ ಸಾರ್ವಜನಿಕರ ಮೇಲೆ ಆಗಲಿದೆ. ಮುಂದಿನ ದಿನಗಳಲ್ಲಿ ಪೀಕ್ ಅವರ್‌ನಲ್ಲಿಯೂ ಬೆಲೆ ಏರಿಕೆ ಆಗಲಿದೆ. ಅದೂ ಸಹ ಎರಡು ಪಟ್ಟು ಹೆಚ್ಚಳವಾಗಲಿದೆ. ಬೈಕ್ ಟ್ಯಾಕ್ಸಿಗಳ ಸೇವೆ ಕೆಲವೊಂದು ಕಾನೂನಾತ್ಮಕ ಸಮಸ್ಯೆಗಳು ಇತ್ತು. ಅಲ್ಲದೇ ಕರ್ನಾಟಕದಲ್ಲಿ ಈ ಸೇವೆಯನ್ನು ನಿಷೇಧಿಸಲಾಗಿತ್ತು. ಒಟ್ಟಾರೆ ಈ ಸೇವೆಯಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಆಗಲಿದೆ.

ಸರ್ಜ್ ಪ್ರೈಸಿಂಗ್ ಹೆಚ್ಚಳಕ್ಕೆ: ದೇಶದಲ್ಲೊಇ ಓಲಾ ಹಾಗೂ ಊಬರ್ನಂತಹ ಕ್ಯಾಬ್ ಅಗ್ರಿಗೇಟರ್ಗಳು ಸರ್ಜ್ ಪ್ರೈಸಿಂಗ್ ( ಡೈನಮಿಕ್ ಪ್ರೈಸಿಂಗ್) ಬೆಲೆ ಹೆಚ್ಚಳ ಅಥವಾ ಕಡಿಮೆ ಮಾಡುವುದಕ್ಕೆ ಅವಕಾಶ ಕೊಡಲಾಗಿದೆ. ಸರ್ಕಾರಗಳು ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಮತ್ತು ಕಡಿಮೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಕ್ಯಾಬ್ಗಳಿಗೆ ಡಿಮ್ಯಾಂಡ್ ಕಡಿಮೆ ಇದ್ದರೆ, ಮೂಲ ಬೆಲೆಗಿಂತ ಶೇ. 50ರವರೆಗೂ ದರ ಕಡಿಮೆ ಮಾಡಬಹುದು ಅಥವಾ ಡಿಮ್ಯಾಂಡ್ ಜಾಸ್ತಿ ಹಾಗೂ ಪೀಕ್ ಅವರ್ನಲ್ಲಿ ಮೂಲ ಬೆಲೆಗಿಂತ ಬರೋಬ್ಬರಿ ಎರಡುಪಟ್ಟು ಹೆಚ್ಚಳ ಮಾಡುವುದಕ್ಕೆ ಆಯಾ ಕಂಪನಿಗಳಿಗೆ ಅವಕಾಶ ನೀಡಲಾಗಿದೆ.


ಓಲಾ & ಊಬರ್ ಇನ್ಮುಂದೆ ದುಬಾರಿ!


ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಓಲಾ ಹಾಗೂ ಊಬರ್ ಕ್ಯಾಬ್ ಪ್ರಯಾಣದ ಬೆಲೆ ದುಬಾರಿ ಆಗಲಿದೆ. ಸರ್ಕಾರವು ಕ್ಯಾಬ್ ಅಗ್ರಿಗೇಟರ್‌ಗಳು ಪೀಕ್ ಸಮಯದಲ್ಲಿ 2X (ಎರಡು ಪಟ್ಟು ಹೆಚ್ಚಳ) ಮೂಲ ದರವನ್ನು ವಿಧಿಸಲು ಅನುಮತಿಸಿದೆ. ಸರ್ಕಾರವು ಉಬರ್, ಓಲಾ ಮತ್ತು ರಾಪಿಡೋದಂತಹ ಕ್ಯಾಬ್ ಅಗ್ರಿಗೇಟರ್‌ಗಳಿಗೆ ಪೀಕ್ ಸಮಯದಲ್ಲಿ ಮೂಲ ದರದ ಎರಡು ಪಟ್ಟು ವರೆಗೆ ವಿಧಿಸಲು ಅವಕಾಶ ನೀಡಿದೆ. ಇದಕ್ಕೂ ಮೊದಲು, ಈ ಅಗ್ರಿಗೇಟರ್‌ಗಳು ಪೀಕ್ ಸಮಯದಲ್ಲಿ ಮೂಲ ದರದ 1.5 ಪಟ್ಟು ಸರ್ಜ್ ಬೆಲೆ ಅಥವಾ ಡೈನಾಮಿಕ್ ದರವಾಗಿ ವಿಧಿಸಬಹುದಿತ್ತು. ಇದನ್ನು ಈಗ ಹೆಚ್ಚಿಸಲಾಗಿದೆ.


ಮಂಗಳವಾರ ಬಿಡುಗಡೆಯಾದ ಪರಿಷ್ಕೃತ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಪೀಕ್ ಸಮಯದಲ್ಲಿ ಕ್ಯಾಬ್ ಅಗ್ರಿಗೇಟರ್‌ಗಳು 2X ಮೂಲ ದರವನ್ನು ವಿಧಿಸಲು ಸರ್ಕಾರ ಅನುಮತಿ ನೀಡಿದೆ. ಸಾರಿಗೆ ಮತ್ತು ಹೆದ್ದಾರಿಗಳು (MoRTH) ಪೀಕ್ ಅಲ್ಲದ ಸಮಯದಲ್ಲಿ, ಅಗ್ರಿಗೇಟರ್‌ಗಳು ಮೂಲ ದರದ ಕನಿಷ್ಠ 50 ಪ್ರತಿಶತವನ್ನು ವಿಧಿಸಬಹುದು ಎಂದು ಹೇಳಿದೆ.


ಪ್ರಯಾಣದ ದೂರ 3 ಕಿಲೋಮೀಟರ್‌ಗಳಿಗಿಂತ ಕಡಿಮೆಯಿದ್ದರೆ ಹೊರತುಪಡಿಸಿ, ಯಾವುದೇ ಪ್ರಯಾಣಿಕರಿಗೆ ಡೆಡ್ ಮೈಲೇಜ್‌ಗೆ ಶುಲ್ಕ ವಿಧಿಸಲು ಅವಕಾಶ ಇಲ್ಲ. ಪ್ರಯಾಣದ ಮೂಲ ಸ್ಥಳದಿಂದ ಪ್ರಯಾಣಿಕರನ್ನು ಇಳಿಸುವ ಸ್ಥಳದ ವರೆಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ.

Post a Comment

Previous Post Next Post