Sonu Nigham: ಗಾಯಕ ಸೋನು ನಿಗಮ್ ವಿರುದ್ಧ ದೂರು! ಕನ್ನಡವನ್ನು ಉಗ್ರವಾದಕ್ಕೆ ಹೋಲಿಸಿದ ಆರೋಪದ ಮೇಲೆ ಕಂಪ್ಲೇಂಟ್


 Sonu nigham: ಈ ವೇಳೆ ಯುವಕನೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿಕೊಂಡಿದ್ದನಂತೆ. ಆದರೆ ಇಷ್ಟು ಹೇಳಿದ್ದೇ ತಡ ಸೋನು ಸಿಟ್ಟು ನೆತ್ತಿಗೇರಿದೆ ನೋಡಿ. ಹಾಡುತ್ತಿದ್ದ...ಇನ್ನಷ್ಟು ಸುದ್ದಿ

ಬೆಂಗಳೂರಿನ ಕಾಲೇಜುವೊಂದಕ್ಕೆ ಇತ್ತೀಚೆಗೆ ಸೋನು ನಿಗಮ್ (Sonu Nigham) ಬಂದಿದ್ದರು. ಸಾಮಾನ್ಯವಾಗಿ ಯಾರೇ ನಟ, ಸಿಂಗರ್, ನೃತ್ಯಗಾರ ಇಂತಹ ಈವೆಂಟ್‌‌ಗಳಿಗೆ ಹೋದಾಗ ಅಭಿಮಾನಿಗಳು ತಮ್ಮ ಬೇಡಿಕೆಗಳನ್ನು ಇಡೋದು ಸಹಜ. ಅದೇ ರೀತಿ ಸೋನು ನಿಗಮ್‌ ಕೂಡಾ ಕಾಲೇಜಿಗೆ (College) ಬಂದಿದ್ದಾಗ, ಹಾಡು ಹಾಡುತ್ತಿದ್ದರು.ಈ ವೇಳೆ ಯುವಕನೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿಕೊಂಡಿದ್ದನಂತೆ. ಆದರೆ ಇಷ್ಟು ಹೇಳಿದ್ದೇ ತಡ ಸೋನು ಸಿಟ್ಟು ನೆತ್ತಿಗೇರಿದೆ ನೋಡಿ. ಹಾಡುತ್ತಿದ್ದ ಹಾಡನ್ನೇ ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್, ‘ಕನ್ನಡ, ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್‌ನಲ್ಲಿ ದಾಳಿಯಾಗಿದ್ದು’ ಎಂದು ಹೇಳಿಯೇ ಬಿಟ್ಟಿದ್ದಾರೆ. ಈ ಮೂಲಕ ಸೋನು ನಿಗಮ್ ಮತ್ತೆ ವಿವಾದಕ್ಕೆ (Contraversy) ಗುರಿಯಾಗಿದ್ದಾರೆ. ಇದೀಗ ಗಾಯಕ ಸೋನು ನಿಗಮ್‌ ವಿರುದ್ಧ ದೂರು ನೀಡಿದ ಕರವೇ (ಕರ್ನಾಟಕ ರಕ್ಷಣಾ ವೇದಿಕೆ)

ಕರವೇ ಕಾರ್ಯಕರ್ತರಿಂದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡಿಗರ ಭಾಷಾ ಹೋರಾಟವನ್ನು ಭಯೋತ್ಪಾದನೆ ಹೋಲಿಕೆ ಮಾಡಿರುವ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕರವೇ ನಗರ ಅಧ್ಯಕ್ಷ ಧರ್ಮರಾಜ್ ಗೌಡ ಅವರಿಂದ ದೂರು ಸಲ್ಲಿಕೆ ಆಗಿದೆ.

Post a Comment

Previous Post Next Post