Ramya: ಯುದ್ಧ ಬೇಡ ಎಂದ ರಮ್ಯಾ! ಯುದ್ಧವಾದ್ರೆ ಸಾಯೋದು ನಮ್ಮ ಸೈನಿಕರೇ ಎಂದ ನಟಿ!


  Ramya: ಸಂದರ್ಶನವೊಂದರಲ್ಲಿ ರಮ್ಯಾ ಮಾತನಾಡಿದ್ದು ಎಲ್ಲದಕ್ಕೂ ಯುದ್ಧ ಒಂದೇ ಪರಿಹಾರ ಅಲ್ಲ ಎಂದು ಹೇಳಿದ್ದಾರೆ. ಯುದ್ಧ ಬೇಡ ಯುದ್ದದಿಂದ ಯಾರು ಉದ್ದಾರ ಕೂಡ ಆಗುವುದಿಲ್ಲ...ಇನ್ನಷ್ಟು ಸುದ್ದಿ

ಪೆಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ (Pakistan) ವಿರುದ್ಧ ಭಾರತ ಯುದ್ಧ ಘೋಷಿಸಬೇಕು ಎನ್ನುವ ಮಾತುಗಳನ್ನು ಅನೇಕರು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ (Social Media) ಯುದ್ದದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇವೆ. ಸಂದರ್ಶನವೊಂದರಲ್ಲಿ ರಮ್ಯಾ ಮಾತನಾಡಿದ್ದು ಎಲ್ಲದಕ್ಕೂ ಯುದ್ಧ ಒಂದೇ ಪರಿಹಾರ ಅಲ್ಲ ಎಂದು ಹೇಳಿದ್ದಾರೆ. ಯುದ್ಧ ಬೇಡ ಯುದ್ದದಿಂದ ಯಾರು ಉದ್ದಾರ ಕೂಡ ಆಗುವುದಿಲ್ಲ ಎಂದು ಹೇಳಿದ್ದಾರೆ. ಯುದ್ಧವಾದರೆ (Army) ಸಾಯುವುದು ನಮ್ಮ ಸೈನಿಕರೇ, ಹಿಂಸೆಯನ್ನು ಬೆಂಬಲಿಸಲ್ಲ ಎಂದಿದ್ದಾರೆ ನಟಿ ರಮ್ಯಾ.

ಪಹಲ್ಗಾಮ್‌ನಲ್ಲಿ ದಾಳಿ ಸಂಭವಿಸಿದ್ದು ಗುಪ್ತಚರ ವೈಫಲ್ಯ ಮತ್ತು ಭದ್ರತಾ ದೋಷಗಳ ಕಾರಣ. ಉಗ್ರರು ಹೇಗೆ ಒಳಗೆ ಬಂದರು, ಏನು ದೋಷಗಳಿದ್ದವು ಎಂಬುದನ್ನು ತಿಳಿದುಕೊಳ್ಳಬೇಕು.

Post a Comment

Previous Post Next Post