: ಕಿಸ್ತಾನ : ಭಾರತದ ಸೇನಾ ದಾಳಿಗೆ ಹೆದರಿ ನೆರೆಯ ರಾಷ್ಟ್ರ ಪಾಕಿಸ್ತಾನ ರಾತ್ರೋರಾತ್ರಿ ಅಧಿಕಾರಿಗಳಿಗೆ ಹೆಚ್ಚಿನ ಹೊಣೆ ನೀಡಿ ಆದೇಶ ಹೊರಡಿಸಿದೆ.
: ತನ್ನ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಸಿಮ್ ಮಲಿಕ್ ಅವರಿಗೆ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರನ ಹೆಚ್ಚುವರಿ ಜವಾಬ್ದಾರಿ ನೀಡಿದೆ
: ಇನ್ನೆರಡು ದಿನದಲ್ಲಿ ಭಾರತ ಪಾಕ್ ಮೇಲೆ ದಾಳಿ ನಡೆಸಲಿದೆ ಎಂದು ಪಾಕ್ ಹೇಳಿಕೆ ನೀಡಿದ ಬೆನ್ನಲ್ಲೇ ಏಪ್ರಿಲ್ 30 ಮಧ್ಯರಾತ್ರಿಯೇ ಹೊಸ ನೇಮಕಾತಿ ಮಾಡಿಕೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐಎಸ್‌ಐ ನಾಯಕತ್ವ ವಹಿಸಿಕೊಂಡಿದ್ದ ಮಲಿಕ್‌ಗೆ ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರನ ಪಟ್ಟ ನೀಡಿದೆ
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಭಾರತದ ಪ್ರತೀಕಾರದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭಾರತವು 24 ರಿಂದ 36 ಗಂಟೆಗಳ ಒಳಗೆ ದಾಳಿ ನಡೆಸಬಹುದು ಎಂದು ಮಾಹಿತಿ ಸಚಿವ ಅತ್ತಾಉಲ್ಲಾ ತರಾರ್ ಅವರು ಹೇಳಿಕೆ ನೀಡಿದ್ದರು. ಅದಲ್ಲದೆ ಭಾರತದ ಯಾವುದೇ ಆಕ್ರಮಣಕಾರಿ ಕ್ರಮಕ್ಕೆ ಪಾಕ್ ತಕ್ಕ ಪ್ರತಿಕ್ರಿಯೆಯನ್ನು ನೀಡಲಿದೆ ಎಂದೂ ಹೇಳಿದ್ದರು
ದಾಳಿಯ ನಂತರ ಭಾರತವು ದಾಳಿಯ ಬಗ್ಗೆ ಮಾತನಾಡಿ " ವಾಕ್ಚಾತುರ್ಯ" ಪ್ರದರ್ಶನ ಮಾಡಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಟೀಕಿಸಿದ್ದು, ಘಟನೆಯ ಬಗ್ಗೆ ತಟಸ್ಥ ತನಿಖೆಗೆ ಒತ್ತಾಯಿಸಿದೆ.
ರಾಯಿಟರ್ಸ್ ಜೊತೆ ಮಾತನಾಡಿದ ರಕ್ಷಣಾ ಸಚಿವ ಖವಾಜಾ ಆಸಿಫ್, ಈಗಾಗಲೇ ಪಾಕಿಸ್ತಾನವು ಜಾಗರೂಕತೆಯಿಂದ ಇದ್ದು, ಭಾರತ ಹೀಗೆಯೇ ಬೆದರಿಕೆ ಮುಂದುವರೆಸಿದರೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದಿದ್ದಾರೆ.
ಈಗಾಗಲೇ ಪಾಕಿಸ್ತಾನ ಇಸ್ಲಾಮಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಪಾಕ್ ಉನ್ನತ ಮಿಲಿಟರಿ ಅಧಿಕಾರಿಗಳನ್ನು ನಿಯೋಜಿಸಿದೆ

Post a Comment