ಕೇಂದ್ರ ಸರ್ಕಾರ 2025ರ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ಮುಂದಾಗಿದೆ. 1931ರ ನಂತರ ಮೊದಲ ಬಾರಿಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜಾತಿ ಗಣತಿ ಸಾಮಾಜಿಕ...ಇನ್ನಷ್ಟು ಸುದ್ದಿ
ಕೇಂದ್ರ ಸರ್ಕಾರ ಮಹತ್ವದ ಬೆಳವಣಿಗೆಯಲ್ಲಿ ಜನಗಣತಿಯೊಂದಿಗೆ (Census) ಜಾತಿ ಗಣತಿ ನಡೆಸಲು ಮುಂದಾಗಿದೆ. ಒಂದೆಡೆ ಈ ಜಾತಿಗಣತಿಯ ಕ್ರೆಡಿಟ್ ಪಡೆಯಲು ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಪಕ್ಷಗಳು ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಜಾತಿ ಗಣತಿಯಂದರೇನು ಹಾಗೂ ಜಾತಿಗಣತಿ ನಡೆಸುತ್ತಿರುವುದರ ಹಿಂದಿನ ಕಾರಣ ಮತ್ತು ಹಿಂದೆ ಯಾವಾಗ ಭಾರತದಲ್ಲಿ ಜಾತಿಗಣತಿ (Caste Census) ನಡೆದಿತ್ತು ಎಂದು ಗೊತ್ತಾ..? ಅದಕ್ಕೆ ಇಲ್ಲಿದೆ ಉತ್ತರ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಪ್ರಮುಖ ಘೋಷಣೆಯೊಂದನ್ನು ಮಾಡಿದ್ದಾರೆ: ಅದುವೇ “2025ರ ಜನಸಂಖ್ಯಾ ಗಣತಿಯ ಜೊತೆಗೆ ಜಾತಿವಾರು ಜನಗಣತಿಯನ್ನು ಸಹ ನಡೆಸಲಾಗುವುದು” ಎಂದು. ಆದ್ದರಿಂದ, ಈ ನಿರ್ಧಾರವು ಭಾರತದಲ್ಲಿ ಜಾತಿಗೆ ಸಂಬಂಧಿಸಿದ ಸಾಮಾಜಿಕ-ಆರ್ಥಿಕ ಚಿತ್ರಣವನ್ನು ಸ್ಪಷ್ಟಗೊಳಿಸುವ ಐತಿಹಾಸಿಕ ಕ್ರಮವಾಗಿದೆ.
ಹಾಗಾದರೆ, ಜಾತಿವಾರು ಜನಗಣತಿಯ ಅಗತ್ಯವೇಕೆ?

Post a Comment