ಆಹಾರ ಸಚಿವ ಮುನಿಯಪ್ಪ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಶೋಷಿತ ವರ್ಗಗಳ ಪರವಾಗಿ ಮಾತನಾಡಿ, ಖರ್ಗೆಯವರು ಸಿಎಂ ಆಗಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುನಿಯಪ್ಪ
ಬೆಂಗಳೂರಿನ ಅರಮನೆ ಮೈದಾನದಲ್ಲಿ (Palace Ground) ನಡೆದ ಪೌರ ಕಾರ್ಮಿಕರ ದಿನಾಚರಣೆ (Civil Workers Day) ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಸಚಿವ ಕೆ ಹೆಚ್ ಮುನಿಯಪ್ಪನವರು (KH Muniyappa) ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಟಾಂಗ್ ನೀಡಿದ್ದಾರೆ.
ಖರ್ಗೆಯವರಿಗೆ ಒಮ್ಮೆ ಕೂಡ ಸಿಎಂ ಆಗಲು ಆಗಿಲ್ಲ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೋಷಿತ ವರ್ಗಗಳ ಪರ ಮಾತನಾಡಿದ ಕೆ ಹೆಚ್ ಮುನಿಯಪ್ಪ, ಸಿಎಂ ಎದುರಲ್ಲೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಖರ್ಗೆಯವರು ಎಷ್ಟೆಲ್ಲ ಹೋರಾಟ ಮಾಡಿಕೊಂಡು ಬಂದಿದ್ರೂ ಕೂಡ ಅವರಿ ಮುಖ್ಯಮಂತ್ರಿ ಆಗಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Post a Comment