Janardhana Reddy Case: ಏನಿದು ಜನಾರ್ಧನ ರೆಡ್ಡಿ ಅಕ್ರಮ ಗಣಿಗಾರಿಕೆ ಕೇಸ್? 7 ವರ್ಷ ಜೈಲು ವಿಧಿಸಿದ್ದೇಕೆ ಕೋರ್ಟ್?


 ಕಳೆದ 13-14 ವರ್ಷಗಳಿಂದ ಈ ಅಕ್ರಮ ಗಣಿಗಾರಿಕೆ ಬಗ್ಗೆ ಕೋರ್ಟ್‌ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಲೇ ಇತ್ತು. ಈಗಾಗಲೇ 29 ಲಕ್ಷ ಟನ್ ಅಕ್ರಮ...ಇನ್ನಷ್ಟು ಸುದ್ದಿಜನಾರ್ದನ ರೆಡ್ಡಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಹೆಸರು ಮತ್ತೆ ಮುನ್ನೆಲೆ ಬಂದಿದೆ. ಮಾಜಿ ಕರ್ನಾಟಕ ಸಚಿವ ಮತ್ತು ಗಂಗಾವತಿ ಶಾಸಕರಾಗಿದ್ದ ಗಾಲಿ ಜನಾರ್ಧನ ರೆಡ್ಡಿಯವರು (Janardhana Reddy) ಕಳೆದ 14 ವರ್ಷಗಳಿಂದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಕಾನೂನೂ ಹೋರಾಟಗಳನ್ನು ಎದುರಿಸುತ್ತಲೇ ಇದ್ದರು. ಇದೀಗ ಕೊನೆಗೂ ಗಾಲಿ ಜನಾರ್ದನ ರೆಡ್ಡಿಯವರು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ಹೈದ್ರಾಬಾದ್‌ ನಾಂಪಲ್ಲಿ ಸಿಬಿಐ ಕೋರ್ಟ್ (CBI Court) ನೀಡಿದ್ದು, 7 ವರ್ಷ ಜೈಲು ಶಿಕ್ಷೆಯನ್ನು ಕೂಡಾ ವಿಧಿಸಿದೆ. ಇನ್ನು ಈ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತ್ರವಲ್ಲದೆ, ಸಚಿವ ಬಿ ನಾಗೇಂದ್ರ ಕೂಡಾ ಪಾಲ್ಗೊಂಡಿದ್ದರು ಎಂದು ವರದಿಯಾಗಿತ್ತು. 

ಅಕ್ರಮ ಗಣಿಗಾರಿಕೆ ಸಂಬಂಧಿಸಿ ಮಾಜಿ ಸಚಿವ ಮತ್ತು ಹಾಲಿ ಶಾಸಕರಾಗಿದ್ದ ಜನಾರ್ದನ ರೆಡ್ಡಿ ಸೇರಿ ಒಎಮ್‌ಸಿ ಕಂಪನಿ ಸಿಇಒ ಆಗಿರುವ ಶ್ರೀನಿವಾಸ ರೆಡ್ಡಿ ವಿರುದ್ಧ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಕಳೆದ 13-14 ವರ್ಷಗಳಿಂದ ಈ ಅಕ್ರಮ ಗಣಿಗಾರಿಕೆ ಬಗ್ಗೆ ಕೋರ್ಟ್‌ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಲೇ ಇತ್ತು. ಈಗಾಗಲೇ 29 ಲಕ್ಷ ಟನ್ ಅಕ್ರಮ ಅಧಿರು ಲೂಟಿ ಮಾಡಿದ ಆರೋಪದಲ್ಲಿ ಅವರಿಗೆ ಅಪರಾಧಿ ಎಂದು ಹೈದ್ರಾಬಾದ್‌ ಸಿಬಿಐ ಕೋರ್ಟ್‌ ಶಿಕ್ಷೆ ವಿಧಿಸಿದೆ. ಹಾಗಿದ್ರೆ ಏನಿದು ಜನಾರ್ದನ ರೆಡ್ಡಿಯವರ ಅಕ್ರಮ ಗಣಿಗಾರಿಕೆ ಕೇಸ್? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶಾಸಕ ಜನಾರ್ಧನ ರೆಡ್ಡಿಗೆ ಬಿಗ್ ಶಾಕ್! ಒಎಂಸಿ ಗಣಿ ಹಗರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು

Post a Comment

Previous Post Next Post