ಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆ ಶಾಕ್ (Milk Price Hike) ದೊಡ್ಡ ಹೊರೆಯಾಗಿದೆ. ಸಚಿವ ಸಂಪುಟದಲ್ಲಿ ಹಾಲಿನ ದರ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ (Demand) ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 4ರ ಹೆಚ್ಚಳ ಮಾಡಲಾಗಿದೆ. ಹಾಲಿನ ದರ ಏರಿಕೆಗೆ ಸಚಿವ ಸಂಪುಟ (Cabinet) ಒಪ್ಪಿಗೆ ಸೂಚಿಸಿದೆ.
ಗಾಯದ ಮೇಲೆ ಬರೆ ಎಳೆದ ಸರ್ಕಾರ!
ಪ್ರತಿ ಲೀಟರ್ ಹಾಲಿನ ಬೆಲೆ ಒಂದಲ್ಲ, ಎರಡಲ್ಲ, ನಾಲ್ಕು ರೂಪಾಯಿ ಹೆಚ್ಚಿದೆ. ಹಾಲಿನ ದರ ಹೆಚ್ಚಳಕ್ಕೆ ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಈಗಾಗಲೇ ಸಾರಿಗೆ ಬಸ್ ದರ, ವಿದ್ಯುತ್, ಮೆಟ್ರೋ ಪ್ರಯಾಣ ದರಗಳು ಏರಿಕೆಯಾಗಿದ್ದು, ಹಾಲಿನ ದರ ಏರಿಕೆಯೂ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಸಚಿವ ಸಂಪುಟದಿಂದ ಗ್ರೀನ್ ಸಿಗ್ನಲ್!
ಹಾಲಿನ ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಹಾಗೂ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ್ರು. ಈ ಸಭೆಯಲ್ಲಿ ಹಾಲಿನ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
5 ರೂ ಬದಲು 4 ರೂಪಾಯಿ ಹೆಚ್ಚಳಕ್ಕೆ ಒಪ್ಪಿಗೆ!
ಕೆಎಂಎಫ್ ಸಲ್ಲಿಸಿರುವ 5 ರೂ. ಹಾಲಿನ ದರ ಏರಿಕೆ ಬದಲು ಪ್ರತಿ ಲೀಟರ್‌ಗೆ 4ರೂ. ದರ ಹೆಚ್ಚಳ ಮಾಡಲು ಈ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇನ್ಮುಂದೆ ಪ್ರತಿ ಲೀಟರ್ ಹಾಲಿನ ದರ 4 ರೂ ಹೆಚ್ಚಲಿದೆ.
ಹೊಸ ಹಾಲಿನ ದರ ಹೇಗಿದೆ?
ಹೋಮೋಜಿನೆಸ್ಟ್ ಟೋನ್ಡ್ ಹಾಲು : 45 ರೂಪಾಯಿ ಇದ್ದ ಹಾಲು 49 ರೂಪಾಯಿ ಆಗಲಿದೆ.
ನೀಲಿ ಪ್ಯಾಕೆಟ್ ಹಾಲು - 44 ರೂ.ನಿಂದ 48 ರೂಪಾಯಿಗೆ ಏರಿಕೆ ಆಗಿದೆ.
ಆರೆಂಜ್ ಪ್ಯಾಕೆಟ್ ಹಾಲು - 54 ರೂ. ನಿಂದ 58 ರೂಪಾಯಿಗೆ ಏರಿಕೆ ಆಗಿದೆ.
ಸಮೃದ್ಧಿ ಹಾಲಿನ ಪ್ಯಾಕೆಟ್: 56 ರೂ. ನಿಂದ 60 ರೂಪಾಯಿಗೆ ಏರಿಕೆ ಆಗಿದೆ.
ಗ್ರೀನ್ ಸ್ಪೇಷಲ್ ಹಾಲು: 54 ರೂ. ನಿಂದ 58 ರೂಪಾಯಿಗೆ ಏರಿಕೆ ಆಗಿದೆ.
ನಾರ್ಮಲ್ ಗ್ರೀನ್ ಹಾಲು: 52 ರೂ. ನಿಂದ 56 ರೂಪಾಯಿಗೆ ಏರಿಕೆ ಆಗಿದೆ.
ಮೊಸರಿನ ಬೆಲೆ ಕೂಡ ಏರಿಕೆ ಆಗಿದ್ದು, 50 ರೂ ಇದ್ದ ಪ್ರತಿ ಲೀಟರ್ 54 ರೂಪಾಯಿ ಆಗಿದೆ.
(ವರದಿ: ಕಾರ್ತಿಕ್, ನ್ಯೂಸ್18 ಕನ್ನಡ, ಬೆಂಗಳೂರು)

Post a Comment