Contractor Sachin Case: ಪ್ರಿಯಾಂಕ್ ಖರ್ಗೆ ವಿರುದ್ಧ ಎವಿಡೆನ್ಸ್ ಇಲ್ಲ, ರಾಜೀನಾಮೆ ಪಡೆಯಲ್ಲ! ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ


 ಸಿಎಂ ಸಿದ್ದರಾಮಯ್ಯ
 ಸಚಿನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯನವರು, ಸಿಐಡಿ ತನಿಖೆಗೆ ಕೊಡಲಾಗಿದೆ, ವರದಿ ಬರಲಿ ಎವಿಡೆನ್ಸ್ ಇಲ್ಲದೆ ರಾಜೀನಾಮೆ ಪಡೆಯೋಕೆ ಏನಿದೆ. ಇದು ಬಿಜೆಪಿಯವರ ರಾಜಕೀಯ ಪ್ರೇರಿತವಾದ ಆರೋಪ ಎಂದು ಹೇಳಿದರು.
ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ (Contractor Sachin Suicide Case) ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಆಪ್ತ ರಾಜು ಕಪನೂರು (Raju Kapanuru) ಹೆಸರು ಕೇಳಿ ಬಂದಿತ್ತು. ಅಷ್ಟೇ ಅಲ್ಲ ಸಚಿನ್ ಡೆತ್ ನೋಟ್‌ನಲ್ಲಿ (death Note) ರಾಜು ಕಪನೂರು ಅವರ ಹೆಸರು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯನವರು (CM Siddaramaiah) ಪ್ರಿಯಾಂಕ್ ಖರ್ಗೆ ವಿರುದ್ಧದ ಆರೋಪಕ್ಕೆ ಯಾವುದೇ ಆಧಾರವಿಲ್ಲ ಹಾಗಾಗಿ ಅವರ ರಾಜೀನಾಮೆ ಪಡೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಸಚಿನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯನವರು, ಸಿಐಡಿ ತನಿಖೆಗೆ ಕೊಡಲಾಗಿದೆ, ವರದಿ ಬರಲಿ ಎವಿಡೆನ್ಸ್ ಇಲ್ಲದೆ ರಾಜೀನಾಮೆ ಪಡೆಯೋಕೆ ಏನಿದೆ. ಇದು ಬಿಜೆಪಿಯವರ ರಾಜಕೀಯ ಪ್ರೇರಿತವಾದ ಆರೋಪ ಎಂದು ಹೇಳಿದರು.

ಸಂಪುಟ ಪುನರ್ ರಚನೆ ಸುಳಿವು

ಹೊಸ ವರ್ಷ ಹಿನ್ನೆಲೆ ಅಧಿಕಾರಿಗಳ ಜೊತೆ ಸೌಹಾರ್ದ ಸಭೆ ನಡೆಸಿ ಬಳಿಕ ಮಾತನಾಡಿದರು. ಸಂಪುಟ ಪುನರ್ ರಚನೆ ಆಗುತ್ತಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಸಂಪುಟ ಪುನರ್ ರಚನೆ ಕುರಿತು ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎನ್ನುವ ಮೂಲಕ ಸಂಪುಟ ಪುನರ್ ರಚನೆ ಸುಳಿವು ನೀಡಿದರು. ಸಿಟಿ ರವಿ ರಾಜ್ಯಪಾಲರಿಗೆ ದೂರು ಕೊಡಲಿ

ಸಿ ಟಿ ರವಿ ರಾಜ್ಯಪಾಲರರಿಗೆ ದೂರು ನೀಡಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ದೂರು ಕೊಡಲಿ. ಸಿಟಿ ರವಿ ಕೇಸ್ ಸಿಐಡಿಗೆ ಕೊಟ್ಟಿದ್ದೆವೆ. ಇವರು ಹೇಳಿದ್ದಾರಾ ಇಲ್ವಾ ಅಂತ ಎಫ್ ಎಸ್ ಎಲ್ ರಿಪೋರ್ಟ್ ಬರಬೇಕು, ಮಹಿಳೆಗೆ ಅವಮಾನ ಆಗೋ ರೀತಿಯಲ್ಲಿ ಮಾತಾಡಿದ್ದಾರೆ ಅಂತ ಆರೋಪ ಇದೆ. ಈ ಆರೋಪದ ಆಧಾರದಲ್ಲಿ ಎಫ್‌ಐಆರ್ ಆಗಿದೆ. ಅದೂ ಕೂಡ ಸಿಐಡಿಗೆ ರೆಫರ್ ಆಗಿದೆ ಎಂದರು.
 ಮಾರ್ಚ್‌ನಲ್ಲಿ ಬಜೆಟ್ ಮಂಡನೆ

ಮಾರ್ಚ್ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡುತ್ತೇವೆ. ಆದ್ರೆ ಆ ಬಗ್ಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದರು. ಪ್ರಿಯಾಂಕ್ ‌ಖರ್ಗೆ ರಾಜೀನಾಮೆ ನೀಡುವಂತೆ ಬಿಜೆಪಿ ಹೋರಾಟ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ದಾಖಲಾತಿ ಇಟ್ಟು ಹೋರಾಟ ಮಾಡಬೇಕಲ್ವಾ? ಡೆತ್ ನೋಟ್ ಬರ್ದಿದ್ದಾನೆ. ಅದ್ರಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದ್ಯಾ? ಮತ್ತೆ ಏನಂತ ರಾಜೀನಾಮೆ ಕೊಡಬೇಕು. ಅವರ ಹೆಸರು ಇಲ್ಲ. ಅವರದ್ದೇನು ಪಾತ್ರ ಇಲ್ಲ. ಯಾವುದೇ ಸಾಕ್ಷಿ ಇಲ್ಲ, ರಾಜೀನಾಮೆ ಯಾಕೆ ಕೊಡಬೇಕು? ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಹೆಸರು ಡೆತ್‌ ನೋಟ್‌ನಲ್ಲಿ ಉಲ್ಲೇಖವಿಲ್ಲ

ಈಶ್ವರಪ್ಪ ಕೇಸ್‌ನಲ್ಲಿ ಡೆತ್ ನೋಟ್‌ನಲ್ಲಿ ಹೆಸರು ಬರ್ದಿದ್ರು, ಡೆತ್ ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಇದ್ಯಾ? ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಇಲ್ಲ. ಅವರು ಯಾವುದೇ ತನಿಖೆಗೆ ತಯಾರಿದ್ದೀನಿ ಅಂತ ಹೇಳಿದ್ದಾರೆ. ನಾವೀಗ ದೂರನ್ನು ದಾಖಲಿಸಿಕೊಂಡು ಸಿಐಡಿ ತನಿಖೆಗೆ ಕೊಟ್ಟಿದ್ದೆವೆ. ಸಿಐಡಿ ವರದಿ ಕೊಡಲಿ, ಬಳಿಕ ತಪ್ಪು ಯಾರು ಮಾಡಿದ್ದಾರೆಂದು ಗೊತ್ತಾಗಬೇಕು ಅಲ್ವಾ. ಸಿಬಿಐಗೆ ಕೊಡುವಂತೆ ಬಿಜೆಪಿ ಒತ್ತಾಯ ವಿಚಾರ, ಅವರು ಯಾವಾಗ ಸಿಬಿಐಗೆ ಕೊಟ್ಟಿದ್ರು. ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ? ಅವರು ಅಧಿಕಾರದಲ್ಲಿರುವಾಗ ಒಂದೇ ‌ಒಂದು ಮ್ಯಾಟರ್‌ನ ಸಿಬಿಐಗೆ ಕೊಟ್ಟಿದ್ರಾ? ಕೊಟ್ಟಿಲ್ಲ, ಅವರಿಗೆ ಯಾವ ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Post a Comment

Previous Post Next Post