Arvind Kejriwal: ದೆಹಲಿ ಚುನಾವಣೆಗೂ ಮುನ್ನ ಆರ್‌ಎಸ್‌ಎಸ್​ಗೆ ಗುದ್ದು; ಮೋಹನ್ ಭಾಗವತ್​ಗೆ ಕೇಜ್ರಿವಾಲ್ ಪತ್ರ!


  ಮೋಹನ್ ಭಾಗವತ್​ಗೆ ಕೇಜ್ರಿವಾಲ್ ಪತ್ರ
ಕೇಜ್ರಿವಾಲ್ ಅವರು ತಮ್ಮ ಪತ್ರದ ಮೂಲಕ ಹಲವು ಪ್ರಶ್ನೆಗಳನ್ನು ಮೋಹನ್ ಭಾಗವತ್ ಅವರ ಮುಂದಿಟ್ಟಿದ್ದಾರೆ. ಈ ಹಿಂದೆ ಬಿಜೆಪಿ ಮಾಡಿದ ಯಾವುದೇ ತಪ್ಪನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ ಎಂದು ದೆಹಲಿ ಮಾಜಿ ಸಿಎಂ ಕೇಳಿದ್ದಾರೆ.
 ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯವೂ (Politics) ಬಿಸಿ ಏರಿದೆ. ದೆಹಲಿಯ (Delhi) ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರಿಗೆ ಪತ್ರ ಬರೆದು ಭಾರತೀಯ ಜನತಾ ಪಕ್ಷಕ್ಕೆ (BJP) ಸಂಬಂಧಿಸಿದ ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ.

ಕೇಜ್ರಿವಾಲ್ ಅವರು ತಮ್ಮ ಪತ್ರದ ಮೂಲಕ ಹಲವು ಪ್ರಶ್ನೆಗಳನ್ನು ಮೋಹನ್ ಭಾಗವತ್ ಅವರ ಮುಂದಿಟ್ಟಿದ್ದಾರೆ. ಈ ಹಿಂದೆ ಬಿಜೆಪಿ ಮಾಡಿದ ಯಾವುದೇ ತಪ್ಪನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ ಎಂದು ದೆಹಲಿ ಮಾಜಿ ಸಿಎಂ ಕೇಳಿದ್ದಾರೆ.
 ಕೇಜ್ರಿವಾಲ್ ಹಾಕಿದ ಪ್ರಶ್ನೆಗಳೇನು?

ಈ ಹಿಂದೆ ಬಿಜೆಪಿ ಏನೇ ತಪ್ಪು ಮಾಡಿದ್ದರೂ ಆರ್​ಎಸ್ಎಸ್ ಬೆಂಬಲಿಸುತ್ತದೆಯೇ?

ಬಿಜೆಪಿ ನಾಯಕರು ಬಹಿರಂಗವಾಗಿ ಹಣ ಹಂಚುತ್ತಿದ್ದಾರೆ, ಮತ ಖರೀದಿಗೆ ಆರ್​ಎಸ್ಎಸ್ ಬೆಂಬಲವಿದೆಯೇ?

ದಲಿತ ಮತ್ತು ಪೂರ್ವಾಂಚಲಿಗಳ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ಸರಿ ಎಂದು ಆರ್‌ಎಸ್‌ಎಸ್ ಭಾವಿಸುತ್ತದೆಯೇ?

ಬಿಜೆಪಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರ್​ಎಸ್ಎಸ್ ಭಾವಿಸುವುದಿಲ್ಲವೇ?
ಮತ ಖರೀದಿಗೆ ಬಿಜೆಪಿ ಹಣ ಹಂಚುತ್ತಿದೆ ಎಂದ ಎಎಪಿ

ದೆಹಲಿಯಲ್ಲಿ ಮತಗಳನ್ನು ಖರೀದಿಸಲು ಬಿಜೆಪಿ ಹಣ ಹಂಚುತ್ತಿದೆ ಎಂದು ಎಎಪಿ ಆರೋಪಿಸಿದ ಕೆಲವು ದಿನಗಳ ನಂತರ ಕೇಜ್ರಿವಾಲ್ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಅತಿಶಿ ಸೇರಿದಂತೆ ಹಲವು ಎಎಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ ವರ್ಮಾ ಅವರ ಅಧಿಕೃತ ನಿವಾಸ 20 ವಿಂಡ್ಸರ್ ಪ್ಲೇಸ್‌ನಲ್ಲಿ ಹಣ ಹಂಚಿರುವ ಆರೋಪ ಮಾಡಿದ್ದರು. ಪರ್ವೇಶ್ ವರ್ಮಾ ಮತ್ತು ಇತರ ಹಿರಿಯ ಬಿಜೆಪಿ ನಾಯಕರ ಫೋಟೋಗಳನ್ನು ಹೊಂದಿರುವ ಬಿಜೆಪಿ ಕರಪತ್ರಗಳು ಮತ್ತು ನಗದು ಒಳಗೊಂಡ ಲಕೋಟೆಗಳನ್ನು ಹೊಂದಿರುವ ಮಹಿಳೆಯರು ಆವರಣದಿಂದ ಹೊರಹೋಗುವುದನ್ನು ತೋರಿಸಿರುವ ಘಟನೆಯ ವಿಡಿಯೋ ಸಾಕ್ಷ್ಯವನ್ನು ಹಲವಾರು ವರದಿಗಾರರು ಸೆರೆಹಿಡಿದಿದ್ದಾರೆ ಎಂದು ಅತಿಶಿ ಹೇಳಿದ್ದರು.

ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ ಎಎಪಿ

ಕೇಜ್ರಿವಾಲ್ ಹಾಲಿ ಶಾಸಕರಾಗಿರುವ ನವದೆಹಲಿ ಕ್ಷೇತ್ರದ ಮತದಾರರಿಗೆ ಬಿಜೆಪಿ ಮುಖಂಡರಾದ ಪರ್ವೇಶ್ ವರ್ಮಾ ಮತ್ತು ಮಂಜಿಂದರ್ ಸಿಂಗ್ ಸಿರ್ಸಾ ಹಣ ಹಂಚಿದ್ದಾರೆ ಎಂದು ಆರೋಪಿಸಿ ಆಪ್ ಸಂಸದ ಸಂಜಯ್ ಸಿಂಗ್ ದೂರು ದಾಖಲಿಸಿದ್ದಾರೆ. ಬಿಜೆಪಿ ನಾಯಕರ ಈ ಕ್ರಮವು ರಾಜಕೀಯ ವಾತಾವರಣವನ್ನು ಕೆಡಿಸುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೆಹಲಿಯಲ್ಲಿ ಪತ್ರ ರಾಜಕಾರಣ ನಿರಂತರವಾಗಿ ನಡೆಯುತ್ತಿದೆ. ಕೇಜ್ರಿವಾಲ್‌ಗೂ ಮುನ್ನ ದೆಹಲಿ ಮುಖ್ಯಮಂತ್ರಿ ಅತಿಶಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಅವರು ದೇವಾಲಯಗಳು ಮತ್ತು ಬೌದ್ಧ ಧಾರ್ಮಿಕ ಸ್ಥಳಗಳ ಧ್ವಂಸ ವಿಷಯವನ್ನು ಪ್ರಸ್ತಾಪಿಸಿದರು. ಲೆಫ್ಟಿನೆಂಟ್ ಗವರ್ನರ್ ಅವರ ಆದೇಶದ ಮೇರೆಗೆ ದೆಹಲಿಯ ದೇವಾಲಯಗಳು ಮತ್ತು ಬೌದ್ಧ ಧಾರ್ಮಿಕ ಸ್ಥಳಗಳನ್ನು ಕೆಡವಲು ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ದಲಿತ ಸಮುದಾಯದ ನಂಬಿಕೆಯು ಬೌದ್ಧ ಧಾರ್ಮಿಕ ಸ್ಥಳಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Post a Comment

Previous Post Next Post