ಪೌಷ್ಟಿಕತಜ್ಞೆಯಾದ ಪಲಕ್ ನಾಗ್ಪಾಲ್ ಅವರು ತಮ್ಮ ಇತ್ತೀಚಿನ Instagram ಪೋಸ್ಟ್‌ನಲ್ಲಿ, ಫೈಬರ್, ತಾಮ್ರ, ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುವ ತಮ್ಮ ವಿಶೇಷ ಆಮ್ಲಾ ಜ್ಯೂಸ್‌ನ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಬನ್ನಿ, ಹಾಗಾದರೆ ಆ ಆಮ್ಲಾ ಜ್ಯೂಸ್ ಅನ್ನು ಹೇಗೆ ತಯಾರಿಸಬಹುದೆಂದು ಇಲ್ಲಿ ತಿಳಿಯೋಣ.
[ಸಾಮಾನ್ಯವಾಗಿ ಆಮ್ಲಾ ಎಂದೇ ಹಿಂದಿ ಪದದಿಂದ ಚಿರಪರಿಚಿತವಾಗಿರುವ ಭಾರತೀಯ ನೆಲ್ಲಿಕಾಯಿ, ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಅಮೃತವೆಂದು ಪರಿಗಣಿಸಲಾಗಿದೆ ಎಂದರೆ ಇದಕ್ಕಿರುವ ಮಹತ್ವ ಎಷ್ಟೆಂದು ಊಹಿಸಬಹುದು.
ಇದು ಹಲವು ಬಗೆಯ ಸೋಂಕುಗಳು ಮತ್ತು ಜ್ವರದಿಂದ ರಕ್ಷಿಸುತ್ತದೆ
ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಈ ಪೌಷ್ಠಿಕಾಂಶ ಭರಿತವಾದ ಹಣ್ಣು ಬ್ಯಾಕ್ಟೀರಿಯಾ ಮತ್ತು ಉರಿಯೂತ ಶಮಕಾರಿ ಗುಣಗಳನ್ನು ಹೊಂದಿದೆ. ಇದು ಹಲವು ಬಗೆಯ ಸೋಂಕುಗಳು ಮತ್ತು ಕಾಲೋಚಿತವಾಗಿ ಬರು ಜ್ವರದಿಂದ ನಿಮ್ಮನ್ನು ರಕ್ಷಿಸುತ್ತದೆ.
[ಇದರ ಆರ್ಧ್ರಕ ಗುಣಗಳು ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಎಂದು ಹೇಳಲಾಗಿದೆ. ನೆಲ್ಲಿಕಾಯಿಯ ಇಷ್ಟೆಲ್ಲಾ ಪ್ರಯೋಜನಗಳನ್ನು ಪರಿಗಣಿಸಿದರೆ, ಇದೊಂದು ಸೂಪರ್‌ಫುಡ್ ಆಗಿದೆ ಎನ್ನಬಹುದು.
ಆಮ್ಲಾ ಜ್ಯೂಸ್ ನಿಮಗೊಂದು ಆದರ್ಶ ಪಾನೀಯ
ನಿಮಗೆ ಪ್ರತಿನಿತ್ಯ ಚಹಾ ಮತ್ತು ಕಾಫಿ ಸೇವನೆಯ ಅಭ್ಯಾಸವಿದ್ದು ಅದನ್ನು ನೀವು ಏನಾದರೂ ಪೌಷ್ಟಿಕ ಮತ್ತು ಪುನರುಜ್ಜೀವನಗೊಳಿಸುವ ಬೆಳಗಿನ ಪಾನೀಯದೊಂದಿಗೆ ಬದಲಾಯಿಸುವ ಮನಸ್ಸು ಹೊಂದಿದ್ದರೆ, ಆಮ್ಲಾ ಜ್ಯೂಸ್ ನಿಮಗೊಂದು ಆದರ್ಶ ಪಾನೀಯವಾಗಬಹುದು.
ತಮ್ಮ ಇತ್ತೀಚಿನ Instagram ಪೋಸ್ಟ್‌ನಲ್ಲಿ, ಪೌಷ್ಟಿಕತಜ್ಞೆಯಾದ ಪಲಕ್ ನಾಗ್ಪಾಲ್ ಅವರು ಫೈಬರ್, ತಾಮ್ರ, ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುವ ತಮ್ಮ ವಿಶೇಷ ಆಮ್ಲಾ ಜ್ಯೂಸ್‌ನ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಬನ್ನಿ, ಹಾಗಾದರೆ ಆ ಆಮ್ಲಾ ಜ್ಯೂಸ್ ಅನ್ನು ಹೇಗೆ ತಯಾರಿಸಬಹುದೆಂದು ಇಲ್ಲಿ ತಿಳಿಯೋಣ.
[ಆಮ್ಲಾ ಶಾಟ್ ತಯಾರಿಸಲು ಬೇಕಾದ ಪದಾರ್ಥಗಳು
3 ಭಾರತೀಯ ನೆಲ್ಲಿಕಾಯಿಗಳು
1 ಟೀಸ್ಪೂನ್ ಕಚ್ಚಾ ಜೇನುತುಪ್ಪ (ಐಚ್ಛಿಕ)
2-3 ಕರಿಮೆಣಸು
ಬೆಲ್ಲ
1/4 ಕಪ್ ನೀರು
ಪುದೀನ ಅಥವಾ ಕೊತ್ತಂಬರಿ ಸೊಪ್ಪು (ಸುವಾಸನೆಗಾಗಿ ಐಚ್ಛಿಕ)
[ಮಾಡುವ ವಿಧಾನ
* ಮೇಲಿನ ಎಲ್ಲ ಪದಾರ್ಥಗಳನ್ನು ತುರಿದು, ಕುಟ್ಟಿ ಪುಡಿ ಮಾಡಿ ಚೆನ್ನಾಗಿ ಮಿಶ್ರಣ ಮಾಡಿ.
* ಆ ಎಲ್ಲ ಮಿಶ್ರಣವನ್ನು ನೀರಿನಲ್ಲಿ ಹಾಕಿ ಮಿಶ್ರಣವನ್ನು ಸ್ಟ್ರೈನ್ ಮಾಡಿ.
* ಈಗ ನಿಮ್ಮ ಜ್ಯೂಸ್ ರೆಡಿ
ಇದರ ಜೊತೆಗೆ ಪಲಕ್ ನಾಗ್ಪಾಲ್ ಅವರು ಚಳಿಗಾಲದಲ್ಲಿ ಸಾಮಾನ್ಯವಾಗಿ ಉಂಟಾಗುವ ತಲೆಹೊಟ್ಟನ್ನು ಹೋಗಲಾಡಿಸಲು ಸಹ ಪರಿಹಾರವನ್ನು ಸಹ ಹಂಚಿಕೊಂಡಿದ್ದಾರೆ.
ಅವರು ಹೇಳುವಂತೆ “ನಿಮ್ಮ ನೆತ್ತಿಗೆ ಆಮ್ಲಾ ರಸವನ್ನು ಹಚ್ಚಿ. 1 ಗಂಟೆಯ ನಂತರ ಅದು ಒಣಗಿದಾಗ ನೀರಿನಿಂದ ತೊಳೆಯಿರಿ (ದಾದಿ ಕಾ ನುಸ್ಕಾ),” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಗೊತ್ತಾಯ್ತಲ್ಲ, ಇನ್ನು ಮುಂದೆ ಬೆಳಗಿನ ಪಾನೀಯವನ್ನು ಆಮ್ಲಾ ಜ್ಯೂಸ್ ಮೂಲಕ ಪ್ರಾರಂಭಿಸಿ ಹುರುಪಾಗಿರಿ ಹಾಗೂ ಚಳಿಗಾಲದ ಹೊಟ್ಟು ನಿವಾರಣೆಗೆ ತಪ್ಪದೆ ಆಮ್ಲಾ ರಸ ಹಚ್ಚಿಕೊಂಡು ಕ್ಲೀನ್ ಕ್ಲೀನ್ ಆಗಿರಿ
ಬೋನಸ್ ಆಗಿ ಮತ್ತೊಂದು ಪಾಕ ವಿಧಾನ
ಇನ್ನು ಬೆಳಗಿನ ಪಾನೀಯ , ತಲೆ ಹೊಟ್ಟು ನಿವಾರಕದ ಬಗ್ಗೆ ತಿಳಿದಿರುವಿರಿ ಅಲ್ಲವೆ…ಬನ್ನಿ ಹೊಟ್ಟೆಗಿಷ್ಟು ರುಚಿ ನೀಡುವ ಇನ್ನೊಂದು ಪಾಕ ವಿಧಾನ ನಿಮಗಾಗಿ ಬೋನಸ್ ರೂಪದಲ್ಲಿ ತಿಳಿಸುತ್ತಿದ್ದೇವೆ.
ಪಲಕ್ ಅವರು ತಮ್ಮ ಹಿಂದಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಹಂಜಾ ಸಮುದಾಯದಿಂದ ಪ್ರೇರಿತವಾದ ತಝಮಿಕ್ ಆಲೂಗಡ್ಡೆಯ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ.
ಬೇಕಾಗುವ ಪದಾರ್ಥಗಳು:
1/2 ಕಪ್ ನೀರು
4 ಬೇಬಿ ಆಲೂಗಡ್ಡೆ, ಬೇಯಿಸಿದ ಮತ್ತು ಸಿಪ್ಪೆ ಸುಲಿದ ಅಥವಾ ಒಂದು ಆಲೂಗಡ್ಡೆಯನ್ನು 4 ತುಂಡುಗಳಾಗಿ ಕತ್ತರಿಸಿ
1 ಕಪ್ ಏಪ್ರಿಕಾಟ್ ಕರ್ನಲ್ ಹಾಲು / ಬಾದಾಮಿ ಹಾಲು
ಸಣ್ಣದಾಗಿ ಕೊಚ್ಚಿದ 2 ಟೇಬಲ್ಸ್ಪೂನ್ ಹಸಿರು ಈರುಳ್ಳಿ,
ಸಣ್ಣದಾಗಿ ಕೊಚ್ಚಿದ 2 ಟೇಬಲ್ಸ್ಪೂನ್ ಕೆಂಪು ಈರುಳ್ಳಿ,
ಸಣ್ಣದಾಗಿ ಕೊಚ್ಚಿದ 2-3 ಬೆಳ್ಳುಳ್ಳಿ, ಪುಡಿಮಾಡಿದ ಲವಂಗ
ರುಚಿಗೆ ತಕ್ಕಷ್ಟು ಉಪ್ಪು
ತಾಜಾ ಕೊತ್ತಂಬರಿ ಸೊಪ್ಪು, ಕತ್ತರಿಸಿದ (ಅಲಂಕಾರಕ್ಕಾಗಿ)
ವಿಧಾನ:
1. ಒಂದು ಪ್ಯಾನ್ ನಲ್ಲಿ, ನೀರು, ಏಪ್ರಿಕಾಟ್ ಕರ್ನಲ್ ಹಾಲು ಮತ್ತು ಆಲೂಗಡ್ಡೆ ಸೇರಿಸಿ. 2-3 ನಿಮಿಷ ಬೇಯಿಸಿ ಮತ್ತು ಹಸಿರು ಈರುಳ್ಳಿ, ಕೆಂಪು ಈರುಳ್ಳಿ, ಬೆಳ್ಳುಳ್ಳಿ ಮತ್ತು ಉಪ್ಪು ಸೇರಿಸಿ.
2. ಮಿಶ್ರಣವು ಸ್ವಲ್ಪ ದಪ್ಪವಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
3. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಡಿಸಿ.

Post a Comment