Bangalore: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಯುರಿದ ಐಷಾರಾಮಿ ಶೋರೂಂ! ಲಕ್ಷಾಂತರ ಮೌಲ್ಯದ ಬೈಕ್‌ಗಳು ಸುಟ್ಟು ಕರಕಲು


 ಬೆಂಕಿ ಇಡೀ ಶೋರೂಂಗೆ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಬೈಕ್ ಗಳು ಸುಟ್ಟು ಕರಕಲಾಗಿವೆ. ಶೋರೂಂನಲ್ಲಿದ್ದ ಸುಮಾರು 30 ಬೈಕ್, ಹಿಂಭಾಗ ಸರ್ವೀಸ್ ಸೆಂಟರ್ ನಲ್ಲಿದ್ದ ಹತ್ತಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮವಾಗಿವೆ.

ಬೆಂಗಳೂರು: ನಗರದಲ್ಲಿ ಮತ್ತೊಂದು ಐಷಾರಾಮಿ ಬೈಕ್ ಶೋರೂಂಗೆ (Luxury Bike Showroom) ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳು (Bike) ಸುಟ್ಟು ಕರಕಲಾಗಿವೆ. ಮಹದೇವಪುರ (Mahadevapur) ವ್ಯಾಪ್ತಿಯ ಬಿ.ನಾರಾಯಣಪುರದಲ್ಲಿ ಈ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ (Short circuit) ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾದ ಬೈಕ್ ಗಳು 

ನಿನ್ನೆ ಸಂಜೆ 7:30ರ ಸುಮಾರಿಗೆ ಯಮಹಾ ಬೈಕ್ ಶೋರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಇಡೀ ಶೋರೂಂಗೆ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಬೈಕ್ ಗಳು ಸುಟ್ಟು ಕರಕಲಾಗಿವೆ. ಶೋರೂಂನಲ್ಲಿದ್ದ ಸುಮಾರು 30 ಬೈಕ್, ಹಿಂಭಾಗ ಸರ್ವೀಸ್ ಸೆಂಟರ್ ನಲ್ಲಿದ್ದ ಹತ್ತಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮವಾಗಿವೆ.

ಪಕ್ಕದ ಶೋರೂಂಗೂ ವ್ಯಾಪಿಸಿದ ಬೆಂಕಿ

ಆನಂತರ ಪಕ್ಕದಲ್ಲೇ ಇದ್ದ ಟ್ರಂಪ್ ಶೋರೂಂ ಕಡೆ ಬೆಂಕಿ ವ್ಯಾಪಿಸಿದೆ. ಕೂಡಲೇ ಎಚ್ಚೇತ್ತ ಸಿಬ್ಬಂದಿ ಬೈಕ್ ಗಳನ್ನು ಶಿಫ್ಟ್ ಮಾಡಿದ್ದಾರೆ. ಯಮಹಾ ಶೋರೂಂನಲ್ಲಿದ್ದ ಲಕ್ಷಾಂತರ ಮೌಲ್ಯದ ಬೈಕ್ ಗಳು ಮಾತ್ರ ಬೆಂಕಿಗಾಹುತಿಯಾಗಿವೆ.

ಎರಡು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಬಾರಿ ಬೆಲೆಯ ಬೈಕ್ ಗಳಿದ್ದ ಎರಡು ಶೋರೂಂಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಇತ್ತೀಚೆಗೆ ಬೆಂಗಳೂರಿನ ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಬೆಂಗ್ಲಿಂಗ್ ಎಂಬ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಶಾರ್ಟ್‌‌ ಸರ್ಕ್ಯೂಟ್‌ ಉಂಟಾಗಿ ಇಡೀ ಶೋ ರೂಂ ಸುಟ್ಟು ಭಸ್ಮವಾಗಿತ್ತು. ಈ ದುರಂತದಲ್ಲಿ ನೋಡ ನೋಡ್ತಿದ್ದಂತೆ ಶೋ ರೂಂ ಒಳಗಿದ್ದ ಎಲ್ಲಾ ಬೈಕ್‌‌ಗಳು ಬೆಂಕಿಗೆ ಸುಟ್ಟು ಹೋಗಿದ್ದವು.

ಎಲ್ಲಾ ಬೈಕ್‌‌ಗಳು ಸುಟ್ಟು ಭಸ್ಮ

ಇನ್ನು ಎಲೆಕ್ಟ್ರಿಕ್‌ ಶೋ ರೂಂಗೆ ಶಾರ್ಟ್‌‌ ಸರ್ಕ್ಯೂಟ್‌‌ನಿಂದಾಗಿ ಬೆಂಕಿ ಹತ್ತುದ್ದಿದ್ದಂತೆ, ಅಲ್ಲಿದ್ದ ಬೈಕ್‌ಗಳಿಗೂ ತಕ್ಷಣ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಅಲ್ಲಿದ್ದ ಎಲ್ಲಾ ಬೈಕ್‌ಗಳು ಬೆಂಕಿಗೆ ಉರಿದು ಭಸ್ಮವಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಯುವತಿ ಸಜೀವ ದಹನ!

ಈ ಘಟನೆಯಲ್ಲಿ ಕೇವಲ ಬೈಕ್‌ಗಳು ಭಸ್ಮವಾಗಿದ್ದಲ್ಲದೇ, ಓರ್ವ ಯುವತಿಯೂ ಸಜೀವ ದಹನವಾಗಿದ್ದಳು. ಮೃತ ಯುವತಿ 25 ವರ್ಷದ ಪ್ರಿಯಾ. ಅದೇ ಶೋ ರೂಂನಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದರು. ಒಟ್ಟು ಇಬ್ಬರು ಯುವತಿಯರು ಬೆಂಕಿಗೆ ಸಿಲುಕಿದ್ದರು. ಆದ್ರೆ ಒಬ್ಬಳನ್ನು ಅಲ್ಲಿದ್ದ ಮೆಕಾನಿಕ್‌ ಗ್ಲಾಸ್‌ ಹೊಡೆದು ರಕ್ಷಿಸಿದ್ದರು. ಆದರೆ ನಂತರ ಬೆಂಕಿ ಹೆಚ್ಚಾಗಿದ್ದಕ್ಕೆ ಪ್ರಿಯ ಬೆಂಕಿಗೆ ಸುಟ್ಟು ಕರಕಲಾಗಿದ್ದಳು.

ವರದಿ ಪ್ರಕಾರ, ಶೋರೂಂ ನಲ್ಲಿ ಆರು ಜನ ಇದ್ದರು. ಈ ವೇಳೆ ಮೃತ ಪ್ರಿಯಾ ಕ್ಯಾಷಿಯರ್ ರೂಂ ನಲ್ಲಿ ಒಳಗೆ ಹೋಗಿ ಡೋರ್ ಲಾಕ್ ಮಾಡ್ಕೊಂಡಿದ್ದರು. ನಂತರ ಹೆಚ್ಚಿನ ಹೊಗೆ ಹಾಗೂ ಬೆಂಕಿಯ ತೀವ್ರತೆಯಿಂದಾಗಿ ಯುವತಿ ಸ್ಥಳದಲ್ಲಿ ಸಾವನ್ನಪ್ಪಿದ್ದಳು.

Post a Comment

Previous Post Next Post