Siddaramaiah: ಉಳಿಯೋಕೆ ಮನೆಯಿಲ್ಲ, ಶಾಸಕ ಜಯಚಂದ್ರಗೆ ಮನವಿ ಮಾಡಿದ್ರೂ ಸ್ಪಂದಿಸಿಲ್ಲ! ಸಿಎಂ ಸಿದ್ದರಾಮಯ್ಯ ಎದುರು ಮಹಿಳೆ ರೋಷಾವೇಷ


 ಸಿಎಂ ಸಿದ್ದರಾಮಯ್ಯ

ಇಂದು ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. ಇನ್ನು ಸಮಾರಂಭದ ವೇಳೆ ಮಹಿಳೆ ಒಬ್ಬಳು ರಂಪಾಟ ನಡೆಸಿದೆ ಸನ್ನಿವೇಶ ಕಂಡುಬಂದಿದೆ.

ತುಮಕೂರು: ಸರ್ಕಾರಿ (Government) ಜ್ಯೂನಿಯರ್ ಕಾಲೇಜು ಮೈದಾನದಲ್ಲಿ (Collage Ground) ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಾಗರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖಾ ಯೋಜನೆಗಳ ಫಲಾನುಭಾವಿಗಳ ಸವಲತ್ತು ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಿತು. ಇನ್ನು ಸಿಎಂ ಸಿದ್ದರಾಮಯ್ಯ ಅವರ ಈ ಕಾರ್ಯಕ್ರಮದಲ್ಲಿ‌ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಕಾರ್ಯಕ್ರಮದಲ್ಲಿ ಕಿರುಚಾಡಿದ್ದಾಳೆ. ಸಿಎಂ ಭಾಷಣ ಮುಗಿಸಿ ಹೋಗುವಾಗ ಮಹಿಳೆ ಅಸಭ್ಯವಾಗಿ ವರ್ತಿಸಿದ್ದಾಳೆ. ಸಿಎಂ ವಿರುದ್ಧ ಮಹಿಳೆ ರಂಪಾಟ

ಶಾಸಕರ ವಿರುದ್ಧ ಮಹಿಳೆ ಆರೋಪ

ಶಿರಾ ಶಾಸಕರಿಗೆ ಎಷ್ಟು ಹೇಳಿದರೂ ಕೇಳಲಿಲ್ಲ ಎಂದು ಮಹಿಳೆ ಶಾಸಕರ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾಳೆ. ಒಂದೂವರೆ ವರ್ಷ ದಿಂದ ಮನವಿ ಮಾಡ್ತಿದ್ದೇನೆ. ಆದರೆ ಏನೂ ಪ್ರಯೋಜನ ಆಗಿಲ್ಲ. ಇದೀಗ ಸಿಎಂ ಭರವಸೆ ನೀಡಿದ್ದಾರೆ. ಮನೆ ಕೊಡುವ ಜವಾಬ್ದಾರಿಯನ್ನ ಜಿಲ್ಲಾಧಿಕಾರಿಗೆ ವಹಿಸಿದ್ದಾರೆ ಎಂದು ರಾಬಿಯಾ ತಿಳಿಸಿದ್ದಾಳೆ.

ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ - ಸಿಎಂ

ಈ‌ ಹಿಂದೆ ಸುಮಾರು 700 ಕೋಟಿ ರೂಪಾಯಿಗಳ ಸವಲತ್ತುಗಳನ್ನ ಈ ಜಿಲ್ಲೆ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿತ್ತು. ಇಂದು ಅದಕ್ಕಿಂತ ಹೆಚ್ಚು ವಿತರಣೆ ಮಾಡ್ತಿದ್ದೇವೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅಭಿವೃದ್ಧಿ ಆಗಬೇಕಾದರೇ ಹಳ್ಳಿ ಹೋಬಳಿ ತಾಲೂಕು ಜಿಲ್ಲೆ ಅಭಿವೃದ್ಧಿ ಆದರೆ ಮಾತ್ರ ‌ಸಾಧ್ಯ. ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಪರಸ್ಪರ ಹೊಂದಾಣಿಕೆಯಿಂದ ಅಭಿವೃದ್ಧಿ ಮಾಡಲು ಸಾಧ್ಯ. ಜಿಲ್ಲೆ ತಾಲೂಕು ಅಭಿವೃದ್ಧಿ ಆಗಬೇಕು. ಸಮಾಜದಲ್ಲಿರುವ ಬಡವರು ದಲಿತರು ಅಲ್ಪ ಸಂಖ್ಯಾತರಿಗೆ ಸಾಮಾಜಿಕ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಇದನ್ನೇ ಬಾಬ ಸಾಹೇಬ ಅಂಬೇಡ್ಕರ್ ಹೇಳಿದ್ದು ಎಂದು ಸಿಎಂ ಭಾಷಣದಲ್ಲಿ ಹೇಳಿದ್ದಾರೆ.

ಗ್ಯಾರಂಟಿ ಯೋಜನೆ ಎಲ್ಲರಿಗಾಗಿ ಮಾಡಿದ್ದು

ನಾವು ಅಭಿವೃದ್ಧಿ ಮಾಡುವಾಗ ಜಾತಿ ಧರ್ಮವನ್ನ ನೋಡಲ್ಲ. ಈಗ ಮಾಡಿರುವ ಗ್ಯಾರಂಟಿ ಯೋಜನೆ ಎಲ್ಲರಿಗೂ ಮಾಡಿದ್ದೇವೆ. ಎಲ್ಲಾ ಜಾತಿ ಧರ್ಮದವರು ಉಪಯೋಗಿಸುತ್ತಿದ್ದಾರೆ. ವರ್ಣ, ಧರ್ಮ, ಜಾತಿ ಬೇದ ಇಲ್ಲಿ ಇಲ್ಲ. ಬಡವರಿಗೆ ಸಾಮಾಜಿಕ ಶಕ್ತಿ ‌ನೀಡಿದರೆ ಮಾತ್ರ ಎಲ್ಲರ ಅಭಿವೃದ್ಧಿ ಆಗುತ್ತೆ. ನಮ್ಮನ್ನ ತುಂಬಾ ಜನ ಟೀಕೆ ಮಾಡ್ತಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ  ಮಾಡಿದ ಮೇಲೆ ಅಭಿವೃದ್ಧಿಗೆ ದುಡ್ಡಿಲ್ಲ ಅಂತಾರೆ. ಎಲ್ಲರಿಗೂ ಕೊಟ್ಟಿದ್ದೇವೆ. ಈ ವರ್ಷದಲ್ಲಿ ಎರಡು ಬಾರಿ ಕೊಟ್ಟಿದ್ದೇವೆ. ಟೀಕೆಗಳು ಸ್ವಾಗತ ಮಾಡ್ತಿವಿ, ಅದು ರಚನಾತ್ಮಕ ವಾಗಿ ಇರಬೇಕು. ಇಲ್ಲಾಂದ್ರೆ ಜನರು ತಿರಸ್ಕಾರ ಮಾಡ್ತಾರೆ ಎಂದರು.

 ದೇಶದಲ್ಲೇ ಕರ್ನಾಟಕ ಮಾದರಿ, we are number 1

3 ಲಕ್ಷದ. 71. ಸಾವಿರ ಬಜೆಟ್. ಅದರಲ್ಲಿ ಅಭಿವೃದ್ಧಿಗೆ ಇಟ್ಟ 1.20 ಸಾವಿರ ಕೋಟಿ, 52 ಸಾವಿರದ 32 ಕೋಟಿ ಗ್ಯಾರಂಟಿ ಗೆ ಬಳಸಲಾಗುತ್ತಿದೆ. ಸುಮಾರು 68 ಸಾವಿರ. ಕೋಟಿಯನ್ನು ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ. ಇಡಿ ದೇಶದಲ್ಲಿ‌ we are number -1. ಕರ್ನಾಟಕದ ಜಿಡಿಪಿ 10.2 ಇದೆ. ದೇಶದಲ್ಲಿ ಕರ್ನಾಟಕ ಮಾದರಿಯಾಗಿದೆ. ಎಲ್ಲಾ ರಾಜ್ಯಗಳಿಗಿಂತ ಮುಂದೆ ಇದಿವಿ. ಇದನ್ನ ಜನರ ಮುಂದೆ ಇಡುವ ಪ್ರಯತ್ನ ಮಾಡ್ತಿದ್ದೇವೆ. ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ  ಹಿಂದೆ ಬಿದ್ದಿಲ್ಲ. ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡ್ತಿದ್ದಾರೆ.  ಉಚಿತವಾಗಿ ಅಕ್ಕಿ ನೀಡ್ತಿದ್ದೇವೆ. ಅನ್ನಭಾಗ್ಯ ಕಾರ್ಯಕ್ರಮ ಆರಂಭ ಮಾಡಿದ್ದು ನಾನು. ಇವತ್ತು 39 ಸಾವಿರ 214 ಕೋಟಿ scp tsp ಯೋಜನೆಗೆ  ಖರ್ಚು ಮಾಡ್ತಿದ್ದೆವೆ. ಕೇಂದ್ರದಲ್ಲಿ ಇಷ್ಟು ಯಾಕಿಲ್ಲ. ನಮ್ಮ ಸರ್ಕಾರ ಬಡವರ ಹಿಂದುಳಿದ. ದಲಿತರ ಪರ ಇರುವ ಸರ್ಕಾರ. ನಾನು ದಲಿತರ ಹಿಂದುಳಿದವರ ಮಹಿಳೆಯರ ಪರ ಇದಿನಿ. ಈ‌ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದ‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Post a Comment

Previous Post Next Post