ಡಿಕೆ ಶಿವಕುಮಾರ್
ಡಿಸೆಂಬರ್ 5ರಂದು ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮದ ಸ್ಥಳವನ್ನು ವೀಕ್ಷಿಸಲು ಬಂದಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹಾಸನ: ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಸ್ನೇಹಿತರು ಟೀಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಟೀಕೆಗಳು (Comment) ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಅವರಿಗೆ ಹೇಳುತ್ತೇನೆ. ಈಗ ಟೀಕೆಯೆಲ್ಲ ಸತ್ತೋಗಿ ನಮ್ಮ ಮತದಾರರು ಮೂರು ಎಲೆಕ್ಷನ್‌ಗಳಲ್ಲೂ ಏನೂ ತೀರ್ಪು ಕೊಡಬೇಕು ಕೊಟ್ಟಿದ್ದಾರೆ. ಮತದಾರರೇ ದೇವರುಗಳು ಅವರ ಕೊಟ್ಟ ತೀರ್ಪಿಗೆ ತಲೆಗೆ ಬಾಗುತ್ತೇವೆ ಎಂದು ಹಾಸನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜನಕಲ್ಯಾಣ ಸಮಾವೇಶ
ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಮುಖಂಡತ್ವದಲ್ಲಿ ಈ ಸಮಾವೇಶ ನಡೆಯುತ್ತಿದೆ. ನಮ್ಮ ಹಿತೈಷಿಗಳು ಸ್ವಾಭಿಮಾನಿಗಳ ಒಕ್ಕೂಟಗಳು ಸಿಎಂ ಕೆಲಸ ಮೆಚ್ಚಿ ಸಿಎಂ ಜೊತೆ ಇದ್ದೇವೆ ಎಂದು ಗುರುತಿಸಿಕೊಂಡಿದ್ದಾರೆ ಮತ್ತು ಬೆಂಬಲ ನೀಡಿದ್ದಾರೆ. ಒಬ್ಬ ಇರಲಿ ಒಂದು ಲಕ್ಷ ಜನ ಇರಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದು ಜನಕಲ್ಯಾಣ ಸಮಾವೇಶ, ಜನತೆಗೋಸ್ಕರ, ಜನರ ಕಲ್ಯಾಣಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ. ಇಪ್ಪತ್ತೈದು ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ ಸಂಸದ ಇರಲಿಲ್ಲ. ಈಗ ಲೋಕಸಭಾ ಸದಸ್ಯರನ್ನು ಕೊಟ್ಟಿದ್ದಾರೆ. ಮುಂದೆ ಲೋಕಲ್ ಬಾಡಿ ಎಲೆಕ್ಷನ್ ಬರ್ತಿದೆ. ಹಾಗೆಯೇ 2028 ಕ್ಕೆ ವಿಧಾನ ಸಭೆ ಚುನಾವಣೆ ಬರುತ್ತೆ ಎಂದು ಡಿಸಿಎಂ ತಿಳಿಸಿದ್ದಾರೆ.
ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ
ಲೋಕಸಭಾ ಚುನಾವಣೆ ವೇಳೆ ಹಾಸನದ ಬಹಳ ಕುಟುಂಬಗಳ ನೋವು ಕಂಡಿದ್ದಾರೆ. ಈ ಬಗ್ಗೆ ಇಡೀ ದೇಶದಾದ್ಯಂತ ಚರ್ಚೆ ನಡೆದಿದೆ. ಇದೀಗ ಅವರಿಗೆ ಧೈರ್ಯ ಹೇಳಲು ಸಮಾವೇಶ ಹಮ್ಮಿಕೊಂಡಿದ್ದೇನೆ. ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಯಾವ ಉದ್ದೇಶಕ್ಕೆ ಸಮಾವೇಶ ಎಂದು ಪಾಪ ಅಶೋಕ್ ಪ್ರಶ್ನೆ ಮಾಡ್ತಾರೆ. ನೀವು ಭಾವನೆ ಮೇಲೆ ರಾಜಕಾರಣ ಮಾಡ್ತಿರಾ. ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡ್ತೇವೆ. ನೀವ್ಯಾಕೆ ಪ್ರಧಾನಮಂತ್ರಿ ಕರೆಸಿ ಸಮಾರಂಭ ಮಾಡಿದ್ದೀರಾ ಎಂದು ಬಿಜೆಪಿಗೆ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಜನಕಲ್ಯಾಣ ಸಮಾವೇಶ
ಹಾಸನದಲ್ಲಿ ಕಾಂಗ್ರೆಸ್ ಆಶ್ರಯದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಸಮಾವೇಶದ ಪೂರ್ವ ತಯಾರಿಯನ್ನು ವೀಕ್ಷಿಸಲು ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಡಿ.5ರಂದು ಅರಸೀಕೆರೆ ರಸ್ತೆಯ ಕೃಷ್ಣಾ ನಗರದಲ್ಲಿ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಪೂರ್ವ ತಯಾರಿಯನ್ನು ಡಿಸಿಎಂ ಅವರು ಪರಿಶೀಲಿಸಿದ್ದಾರೆ. ಮೊದಲು ಸ್ವಾಭಿಮಾನಿ ಸಮಾವೇಶ ಎಂಬ ಹೆಸರಿನಿಂದ ಪ್ರಾರಂಭವಾಗಿದ್ದ ಕಾರ್ಯಕ್ರಮವನ್ನು ಹೈಕಮಾಂಡ್ ಈಗ ಕಾಂಗ್ರೆಸ್ ಕಾರ್ಯಕ್ರಮವಾಗಿ ಪರಿವರ್ತಿಸಿದೆ. ಇನ್ನು ಕಾಂಗ್ರೆಸ್ ಆಶ್ರಯದಲ್ಲಿ ಜನಕಲ್ಯಾಣ ಸಮಾವೇಶ ಎಂಬ ಹೆಸರಿನಲ್ಲಿ ಆಯೋಜನೆಗೊಳ್ಳಲಿದೆ ಈ ಸಮಾವೇಶ.
ಸಿಎಂ ಕಾರ್ಯ ಓವರ್‌ಟೇಕ್ ಮಾಡಿದ ಡಿಸಿಎಂ
ಪೂರ್ವಭಾವಿ ಸಭೆ ನಡೆಸಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರು, ಹಾಸನ ಸಮಾವೇಶದ ರೂಪುರೇಶೆಯನ್ನು ಸಂಪೂರ್ಣ ಬದಲಾಯಿಸಿದ್ದಾರೆ. ಹಾಸನ ಸಮಾವೇಶದ ರೂಪುರೇಷೆ ಪಕ್ಷದ ಕಾರ್ಯಕ್ರಮದಂತೆ ಟೇಕ್ ಓವರ್ ಮಾಡಿದ್ದಾರೆ. ಸಿದ್ದರಾಮಯ್ಯ ಪರ ಮಾಡಲು ಕೆಲ ಸಚಿವರುಗಳು ನಿರ್ಧರಿಸಿದ್ದ ಸ್ವಾಭಿಮಾನಿ ಸಮಾವೇಶವನ್ನು ಪಕ್ಷ ಸಂಘಟನೆಯಡಿ ತರುವಲ್ಲಿ ಡಿಸಿಎಂ ಡಿಕೆಶಿವಕುಮಾರ್ ಯಶಸ್ವಿಯಾಗಿದ್ದಾರೆ
ಪಕ್ಷದ ಕಾರ್ಯಕ್ರಮ ಎಂದ ಡಿಸಿಎಂ
ಇದಕ್ಕೂ ಮೊದಲು ಸಿದ್ದರಾಮಯ್ಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ ಎಂದು ಸಿದ್ದರಾಮಯ್ಯ ಅಪ್ತರು ಸಮಾವೇಶ ಮಾಡಲು ಹೊರಟಿದ್ದರು. ಆದ್ರೆ, ಹಾಸನ ಸೇರಿ ಹಳೇ ಮೈಸೂರು ಭಾಗದ ಶಾಸಕರ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಹಾಸನ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನೇ ಹೈಲೇಟ್ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸಿಎಂ ಮತ್ತು ಕಾಂಗ್ರೆಸ್ ಗ್ಯಾರಂಟಿ ಎನ್ನುವ ಮೂಲಕ ಸಮಾವೇಶದ ಕಂಟ್ರೋಲ್ ತಗೆದುಕೊಂಡಿದ್ದಾರೆ.

Post a Comment