Annamalai: ವಿಜಯ್ ರಾಜಕೀಯದಿಂದ ಬಿಜೆಪಿಗೆ ಲಾಭ, 2026ರಲ್ಲಿ ತಮಿಳುನಾಡಲ್ಲಿ ನಮ್ಮದೇ ಸರ್ಕಾರ ಎಂದ ಅಣ್ಣಾಮಲೈ!


 ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕುಪ್ಪುಸ್ವಾಮಿ

ಅಣ್ಣಾಮಲೈ ಟಿವಿಕೆಯ ಸೈದ್ಧಾಂತಿಕ ವಿಧಾನವನ್ನುಅದರ ವಿವಿಧ ರಾಜಕೀಯ ತತ್ವಗಳ ಮಿಶ್ರಣವನ್ನು ಉಲ್ಲೇಖಿಸಿ “ಖಿಚಡಿ ರಾಜಕೀಯ” ಎಂದರು. ಈ ವೇಳೆ ವಿಜಯ್​​ ರಾಜಕೀಯ ಪ್ರವೇಶದಿಂದ 2026ರಲ್ಲಿ ತೆ.ನಾಡಿನಲ್ಲಿ ಎನ್​​ಡಿಎ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಚೆನ್ನೈ (Chennai):  ನಟ ವಿಜಯ್ (Vijay) ಅವರ ರಾಜಕೀಯ ಪ್ರವೇಶದಿಂದ ತಮಿಳುನಾಡಿನಲ್ಲಿ (Tamil Nadu) ಬಿಜೆಪಿಯ ನಿರೀಕ್ಷೆಗೆ ಧಕ್ಕೆಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ (BJP State President) ಕೆ ಅಣ್ಣಾಮಲೈ (K Annamalai) ಹೇಳಿದ್ದಾರೆ. ಭಾನುವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು, ನಟ ವಿಜಯ್ ಅವರು ದ್ರಾವಿಡ ಪಕ್ಷಗಳ (Dravida Party) ಸಿದ್ಧಾಂತಗಳನ್ನು ಪ್ರತಿಧ್ವನಿಸುವಂತೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಎರಡು ದ್ರಾವಿಡ ಪಕ್ಷಗಳು (ಡಿಎಂಕೆ-DMK, ಎಐಎಡಿಎಂಕೆ-AIADMK) ಪಡೆದ ಮತಗಳು ಇನ್ನು ಮುಂದೆ ಮೂರು ಭಾಗಗಳಾಗಿ ವಿಭಜನೆಯಾಗುವುದರೊಂದಿಗೆ ಹೊಸ ರಾಜಕೀಯ ಪ್ರಾರಂಭವಾಗಲಿದೆ. ಇನ್ನು ಖಿಚಡಿ ರಾಜಕೀಯವು ಎಲ್ಲೂ ಗೆದ್ದಿಲ್ಲ, ಮತ್ತೊಂದೆಡೆ, ರಾಷ್ಟ್ರೀಯವಾದಿ ಮತಗಳು ಬಿಜೆಪಿ ಪರವಾಗಿ ಕ್ರೋಢೀಕರಿಸುತ್ತಿವೆ ಎಂದು ಅವರು ಹೇಳಿದರು.

 ತಮಿಳುನಾಡಿನ ಜನರಿಗೆ ಹೆಚ್ಚಿನ ಆಯ್ಕೆ

ಆಕ್ಸ್‌ಫರ್ಡ್‌ನಲ್ಲಿ ಮೂರು ತಿಂಗಳ ಶಿಕ್ಷಣ ಕಾರ್ಯಕ್ರಮದ ನಂತರ ತೆಮಿಳಿನಾಡಿಗೆ ಮರಳಿದ ಅಣ್ಣಾಮಲೈ ಅವರು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮೂಲಕ ವಿಜಯ್ ಅವರ ಪ್ರವೇಶವನ್ನು ಸ್ವಾಗತಿಸುತ್ತೇನೆ. ಆದರೆ ನಾವು ಯಾರಿಗೂ ಹೆದರುವುದಿಲ್ಲ, ತಮಿಳುನಾಡಿನಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದು ಹೇಳಿದರು, ಏಕೆಂದರೆ ಈಗ ತಮಿಳುನಾಡಿನ ಜನರಿಗೆ ಹೆಚ್ಚಿನ ಆಯ್ಕೆಗಳಿವೆ. ವಿಜಯ್ ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿಸಿದಾಗ, ವಿಜಯ್ ಅವರ ಅಭಿಪ್ರಾಯಗಳಿಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ ಎಂದು ಅಣ್ಣಾಮಲೈ ಹೇಳಿದರು. ಆದರೆ ಅವರು ಸಕ್ರಿಯ ರಾಜಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸಿದ ನಂತರ ಅವರ ಟೀಕೆಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

 ಅಣ್ಣಾಮಲೈ ಅವರು ವಿಜಯ್​​​ ಅವರ ರಾಜಕೀಯ ಪ್ರವೇಶವನ್ನು ಸ್ವಾಗತಿಸಿ, ಅವರು ರಾಜಕೀಯದಲ್ಲಿ ಸಾರ್ವಕಾಲಿಕ ಸಕ್ರಿಯವಾಗಿರಬೇಕು. ಅವರು ರಾಜಕೀಯಕ್ಕೆ ಬರುವ ಮುಂಚೆಯೇ ನಾವು ಹೇಳುತ್ತಾ ಬಂದಿದ್ದೇವೆ, ಯಾವುದೇ ಹೊಸ ವ್ಯಕ್ತಿ ರಾಜಕೀಯಕ್ಕೆ ಬಂದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಅವರು ಬಹಳ ಫೇಮಸ್ ನಟ. ಅವರ ತಮ್ಮ ಸಿನಿಮಾ ಆಟದಲ್ಲಿ ಅಗ್ರಸ್ಥಾನದಲ್ಲಿರುವ ಮತ್ತು ರಾಜಕೀಯಕ್ಕೆ ಪ್ರವೇಶಿಸಲು ಬಯಸುವ ವ್ಯಕ್ತಿಯಾಗಿದ್ದು, ಅದರಲ್ಲಿ ತಪ್ಪೇನಿಲ್ಲ ಎಂದರು. ಆದರೆ ಅವರು ತಮ್ಮ ಪಕ್ಷದ ಮೊದಲ ಸಮ್ಮೇಳನದ ನಂತರ ಎಷ್ಟು ಬಾರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ?" ಎಂದು ಪ್ರಶ್ನಿಸಿದರು.

 2026ರಲ್ಲಿ ತೆ.ನಾಡಿನಲ್ಲಿ ಎನ್​​ಡಿಎ ಸರ್ಕಾರ

ಮತ್ತೊಂದೆಡೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಅಗಾಧ ಜನಪ್ರಿಯತೆಯನ್ನು ಪ್ರದರ್ಶಿಸಿದೆ. 2026ರ ಚುನಾವಣೆಯಲ್ಲಿ ಬಿಜೆಪಿಯ ತಮಿಳುನಾಡು ಘಟಕವೂ ಆ ಜನಪ್ರಿಯತೆಯಿಂದ ಲಾಭ ಪಡೆಯಲಿದೆ. “ನಾವು ಮೋದಿಯವರ ಜನಪ್ರಿಯತೆಯ ಅಲೆಯ ಮೇಲೆ ಸವಾರಿ ಮಾಡುತ್ತೇವೆ ಮತ್ತು ಬಹುಶಃ 2026 ರಲ್ಲಿ ಟಿಎನ್‌ನಲ್ಲಿ ಎನ್‌ಡಿಎ ಸರ್ಕಾರವನ್ನು ರಚಿಸಬಹುದು” ಎಂದು ಅವರು ಹೇಳಿದರು.

 ತಮಿಳುನಾಡು ರಾಜಕೀಯದಲ್ಲಿ ಇದು ಹೊಸ ಯುಗ ಏಕೆಂದರೆ 2026 ಬಹಳ ಹಿಂದಿನಿಂದಲೂ ಅಧಿಕಾರದಲ್ಲಿ ಇದ್ದ ಪಕ್ವೇ ಅಧಿಕಾರಕ್ಕೆ ಬರುವುದಿಲ್ಲ, ಆದರೊಂದಿಗೆ ಇದು ಸಮ್ಮಿಶ್ರ ಯುಗವಾಗಿರುತ್ತದೆ. ನಾವು ಬಹಳ ಸಮಯದಿಂದ ಹೇಳುತ್ತಾ ಬಂದಿದ್ದೇವೆ. ವಿಜಯ್ ಕೂಡ ಅದನ್ನೇ ಹೇಳುತ್ತಿದ್ದಾರೆ, ಅದೇ ಸಮಯದಲ್ಲಿ, ನಾವು ಈಗ ಪ್ರಮುಖ ದ್ರಾವಿಡ ಪಕ್ಷಗಳನ್ನು ದುರ್ಬಲಗೊಳಿಸುವುದನ್ನು ಸಹ ನೋಡುತ್ತಿದ್ದೇವೆ, ”ಎಂದು ಅವರು ಹೇಳಿದರು.

Post a Comment

Previous Post Next Post