ಸಬರಮತಿ ರಿಪೋರ್ಟ್ ಸಿನಿಮಾ ವೀಕ್ಷಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ದಿ ಸಬರಮತಿ ರಿಪೋರ್ಟ್ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಎನ್‌ಡಿಎ ಸಂಸದರು ಮತ್ತು ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಕಿರಣ್ ರಿಜಿಜು, ಜಿತನ್ ರಾಮ್ ಮಾಂಝಿ, ಅಶ್ವಿನಿ ವೈಷ್ಣವ್ ಮತ್ತಿತರರು ಕೂಡ ಸ್ಕ್ರೀನಿಂಗ್ ವೇಳೆ ಹಾಜರಿದ್ದರು.
ನವದೆಹಲಿ: ದಿ ಸಬರಮತಿ ರಿಪೋರ್ಟ್ (The Sabarmati Report) ಸಿನಿಮಾ ವೀಕ್ಷಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಅಭಿಪ್ರಾಯಗಳನ್ನು (Thoughts) ಹಂಚಿಕೊಂಡಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಕ್ರೀನಿಂಗ್‌ನಿಂದ ಫೋಟೋಗಳನ್ನು ಹಂಚಿಕೊಂಡು, ಸಿನಿಮಾ ಬಗ್ಗೆ ವಿಮರ್ಶೆಯನ್ನು review ಬರೆದಿದ್ದಾರೆ. ವಿಕ್ರಾಂತ್ ಮಾಸ್ಸೆ (Vikrant Massey) ಅವರು ಸಿನಿಮಾದಿಂದ ನಿವೃತ್ತಿ ಘೋಷಿಸಿದ ದಿನವೇ ಪ್ರಧಾನಿ ಮೋದಿಯವರ ವಿಶೇಷ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಿದ್ದಾರೆ.
ಎನ್‌ಡಿಎಗೆ ಸೇರಿದ ಸಹವರ್ತಿ ಸಂಸದರ ಜೊತೆ ‘ದಿ ಸಬರಮತಿ ರಿಪೋರ್ಟ್’ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ. ಅವರ ಪ್ರಯತ್ನಕ್ಕಾಗಿ ನಾನು ಚಿತ್ರದ ನಿರ್ಮಾಪಕರನ್ನು ಶ್ಲಾಘಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಪ್ರದರ್ಶನದ ಸಮಯದಲ್ಲಿ ಪ್ರಧಾನಿ ಅಮಿತ್ ಶಾ ಪಕ್ಕದಲ್ಲಿ ಕುಳಿತಿದ್ದರು. ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನ ನಡೆದಿದೆ.
ಪ್ರಧಾನಿಗೆ ಕೇಂದ್ರ ಸಚಿವರು ಸಾಥ್
ಎನ್‌ಡಿಎ ಸಂಸದರು ಮತ್ತು ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಕಿರಣ್ ರಿಜಿಜು, ಜಿತನ್ ರಾಮ್ ಮಾಂಝಿ, ಅಶ್ವಿನಿ ವೈಷ್ಣವ್ ಮತ್ತಿತರರು ಕೂಡ ಸ್ಕ್ರೀನಿಂಗ್ ವೇಳೆ ಹಾಜರಿದ್ದರು. ವಿಕ್ರಾಂತ್ ಮಾಸ್ಸೆ, ರಿದ್ಧಿ ಡೋಗ್ರಾ, ನಿರ್ದೇಶಕ ಧೀರಜ್ ಸರ್ನಾ, ನಿರ್ಮಾಪಕಿ ಏಕ್ತಾ ಕಪೂರ್ ಅವರ ತಂದೆ ಮತ್ತು ಹಿರಿಯ ನಟ ಜಿತೇಂದ್ರ ಸೇರಿದಂತೆ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ಪ್ರದರ್ಶನದ ಸಮಯದಲ್ಲಿ ಉಪಸ್ಥಿತರಿದ್ದರು.
ಸಂತಸ ವ್ಯಕ್ತಪಡಿಸಿದ ನಟ ವಿಕ್ರಾಂತ್ ಮಾಸ್ಸೆ
ಎಎನ್‌ಐ ಜೊತೆ ಮಾತನಾಡಿದ ವಿಕ್ರಾಂತ್, ‘ನಾನು ಪ್ರಧಾನಿ ಮತ್ತು ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ಮತ್ತು ಅನೇಕ ಸಂಸದರೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದೆ. ಅದೊಂದು ವಿಶೇಷ ಅನುಭವ. ನಾನು ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ನನ್ನ ಚಲನಚಿತ್ರವನ್ನು ಪ್ರಧಾನ ಮಂತ್ರಿಯೊಂದಿಗೆ ವೀಕ್ಷಿಸಿದ್ದೇನೆ. ಇದು ನನ್ನ ವೃತ್ತಿಜೀವನದ ಅತ್ಯುನ್ನತ ಅಂಶವಾಗಿದೆ’, ಎಂದು ಹೇಳಿದ್ದಾರೆ
ನಟನಾ ನಿವೃತ್ತಿ ಘೋಷಿಸಿದ ಮಾಸ್ಸೆ
ಕಾಕತಾಳೀಯವಾಗಿ, ವಿಕ್ರಾಂತ್ ಅವರು 2025ರ ನಂತರ ನಟನೆಯಿಂದ ಹಿಂದೆ ಸರಿಯಲು ಯೋಜಿಸಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ರು. ‘ಕಳೆದ ಕೆಲವು ವರ್ಷಗಳು ಮತ್ತು ಅದರಾಚೆಗೆ ಅದ್ಭುತವಾಗಿದ್ದವು. ಎಂದೂ ಬದಲಾಯಿಸಲಾಗದ, ಅಳಿಸಲಾಗದ ನಿಮ್ಮ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದಕ್ಕೆ ಹೋದಂತೆ ಇದು ಮನೆಗೆ ಹಿಂತಿರುಗುವ ಇದು ಸಮಯ ಎಂದು ನಾನು ಅರಿತುಕೊಂಡೆ. ಪತಿಯಾಗಿ, ತಂದೆ ಮತ್ತು ಮಗನಾಗಿ. ಮತ್ತು ನಟನಾಗಿ ಸಹ’ ಎಂದು ವಿಕ್ರಾಂತ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಗೋಧ್ರಾದ ಘಟನೆ ಆಧಾರಿತ ಸಿನಿಮಾ
ಧೀರಜ್ ಸರ್ನಾ ನಿರ್ದೇಶನದ ‘ದಿ ಸಬರಮತಿ ರಿಪೋರ್ಟ್’ ಫೆಬ್ರವರಿ 27, 2002 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಬೆಂಕಿಯ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತದೆ. ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಭಕ್ತರನ್ನು ರೈಲಿನಲ್ಲಿಯೇ ಸಜೀವ ದಹನ ಮಾಡಲಾಯಿತು. ವಿಕ್ರಾಂತ್ ಮಾಸ್ಸೆ ಜೊತೆಗೆ ರಾಶಿ ಖನ್ನಾ ಮತ್ತು ರಿದ್ಧಿ ಡೋಗ್ರಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರತಿಪಕ್ಷಗಳು ಇದನ್ನು ಬಿಜೆಪಿಯ ಹಿಂದುತ್ವದ ಅಜೆಂಡಾ ಎಂದು ಕರೆಯುತ್ತಿವೆ.

Post a Comment