ಉಚ್ಚಾಟನೆ ಆಗ್ತಾರಾ ಯತ್ನಾಳ್?
ವಕ್ಪ್ ಬಗ್ಗೆ ಮಾತಾಡಿ ಬೇಡ ಎನ್ನೋದಿಲ್ಲ. ಆದರೆ ರಾಜ್ಯಾಧ್ಯಕ್ಷರ ಬಗ್ಗೆ ಟೀಕೆ ಮಾಡೋದು ಸರಿಯಲ್ಲ. ರಾಜ್ಯಾಧ್ಯಕ್ಷರಿಗೆ ಅವಮಾನ ಆಗೋಹಾಗೆ ಮಾಡಬಾರದು. ಕರ್ನಾಟಕದ 21 ಜಿಲ್ಲೆಯವರು ಬಂದಿದ್ದಾರೆ. ತರುಣ್ ಜುಗ್ ಅವರು ನಾಳೆ ಬರ್ತಾರೆ. ಅವರಿಗೆ ಸಮಸ್ಯೆಯನ್ನ ಬಗೆಹರಿಸಿ ಎಂದು ಕೇಳ್ತೇವೆ ಅಂತ ಅವರು ಹೇಳಿದರು.
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಗುಡುಗುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಶಿಸ್ತುಕ್ರಮ ಫಿಕ್ಸಾ? ಹೌದು, ಇಂದು ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಅತ್ತ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಕೂಡ ಯತ್ನಾಳ್‌ಗೆ ನೋಟಿಸ್ ನೀಡಿದೆ.
ಯತ್ನಾಳ್ ವಿರುದ್ಧ ವಿಜಯೇಂದ್ರ ಬಲ ಪ್ರದರ್ಶನ
ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತೀವ್ರಗೊಂಡಿದೆ. ಯತ್ನಾಳ್‌ಗೆ ನೋಟೀಸ್ ಬೆನ್ನಲ್ಲೇ ವಿಜಯೇಂದ್ರ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಜಿಲ್ಲಾಧ್ಯಕ್ಷರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು, ರಾಮನಗರ, ಶಿವಮೊಗ್ಗ, ರಾಯಚೂರು ಸೇರಿದಂತೆ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಭಾಗಿಯಾಗಿದ್ದರು.
ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆಗೆ ನಿರ್ಧಾರ
ಶಾಸಕ ಯತ್ನಾಳ್ ಉಚ್ಚಾಟನೆ ಮಾಡಬೇಕು ಅಂತ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನಾಳೆ ಬೆಂಗಳೂರಿಗೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್‌ರಿಗೆ ಯತ್ನಾಳ್ ಉಚ್ಚಾಟನೆಗೆ ಮನವಿ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಯತ್ನಾಳ್‌ರನ್ನು ಪಕ್ಷದಿಂದ ಹೊರಕ್ಕೆ ಹಾಕಿ
ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್ ಮಾತನಾಡಿ, ರಾಜ್ಯಾಧ್ಯಕ್ಷರಿಗೆ ಬೈದರೆ ಜಿಲ್ಲಾಧ್ಯಕ್ಷರಿಗೆ ಬೈದಂತೆ. ನಾಳೆ ಸಭೆಗೂ ಮುನ್ನ ತರುಣ್ ಚುಗ್ ಅವರಿಗೆ ಮನವಿ ಕೊಡ್ತೇವೆ. ಯತ್ನಾಳ್ ಅವರ ವಿರುದ್ಧ ಕ್ರಮಕ್ಕೆ ಮನವಿ ಮಾಡ್ತೇವೆ. ಎರಡಲ್ಲೊಂದು ಆಗಬೇಕು, ಅವರನ್ನು ಪಕ್ಷದಿಂದ ಹೊರಗೆ ಹಾಕಬೇಕು, ಮುಲಾಜೇ ನೋಡಬಾರದು. ಇದು ನಮ್ಮ ಆಗ್ರಹ ಅಂತ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ ಅಪಮಾನವಾಗಿದೆ
ಇನ್ನು ಸಭೆ ಬಳಿಕ ಮಾತನಾಡಿದ ಬೆಂಗಳೂರಿನ ಜಯನಗರ ಶಾಸಕ ಹಾಗೂ ಬಿಜೆಪಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಸಿಕೆ ರಾಮಮೂರ್ತಿ, 39 ಜಿಲ್ಲಾ ಅಧ್ಯಕ್ಷರ ಸಭೆ ಕರೆದಿದ್ದೆವು. 21ಜಿಲ್ಲಾಧ್ಯಕ್ಷರು ಸೇರಿ ಸಭೆ ಮಾಡಿದ್ದೇವೆ. ಉಳಿದವರು ಮಳೆ ಹಾಗೂ ವೈಯಕ್ತಿಕ ಕಾರಣಕ್ಕೆ ಬಂದಿಲ್ಲ. ಸಂಘಟನೆ ನಾವು ಹೋದಾಗ ಕಾರ್ಯಕರ್ತರು ಪ್ರಶ್ನೆ ಮಾಡ್ತಿದ್ದಾರೆ. ಬಿಜೆಪಿಯ ಕಚ್ಚಾಟ ಇದೆ, ಇದರಿಂದ ಪಕ್ಷಕ್ಕೆ ಹಿನ್ನಡೆಯಾಗ್ತಿದೆ. ಇದರಿಂದ ಅನೇಕ ಕಟ್ಟಕಡೆಯ ಕಾರ್ಯಕರ್ತರಿಗೆ ಅವಮಾನವಾಗಿದೆ ಅಂತ ಹೇಳಿದ್ರು.
ರಾಜ್ಯಾಧ್ಯಕ್ಷರ ಬಗ್ಗೆ ಟೀಕೆ ಸರಿಯಲ್ಲ
ವಕ್ಪ್ ಬಗ್ಗೆ ಮಾತಾಡಿ ಬೇಡ ಎನ್ನೋದಿಲ್ಲ. ಆದರೆ ರಾಜ್ಯಾಧ್ಯಕ್ಷರ ಬಗ್ಗೆ ಟೀಕೆ ಮಾಡೋದು ಸರಿಯಲ್ಲ. ರಾಜ್ಯಾಧ್ಯಕ್ಷರಿಗೆ ಅವಮಾನ ಆಗೋಹಾಗೆ ಮಾಡಬಾರದು. ಕರ್ನಾಟಕದ 21 ಜಿಲ್ಲೆಯವರು ಬಂದಿದ್ದಾರೆ. ತರುಣ್ ಜುಗ್ ಅವರು ನಾಳೆ ಬರ್ತಾರೆ. ಅವರಿಗೆ ಸಮಸ್ಯೆಯನ್ನ ಬಗೆಹರಿಸಿ ಎಂದು ಕೇಳ್ತೇವೆ ಅಂತ ಅವರು ಹೇಳಿದರು.
ನೀವು ದೊಡ್ಡವರೋ? ಪಾರ್ಟಿ ದೊಡ್ಡದೋ?
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ನಾಲ್ಕು ತಂಡವಾಗಿ ನಾವು ವಕ್ಪ್ ಹೋರಾಟಕ್ಕೆ ಸಿದ್ದವಾಗಿದ್ದೇವೆ. ಆದರೆ ಇವರೇ ಒಂದು ತಂಡವಾಗಿ ರಾಜ್ಯಾಧ್ಯಕ್ಷರಿಗೆ ಬೈತಿದ್ದಾರೆ. ಸದಾನಂದ ಗೌಡರಿಗೆ ಆರಿದ ದೀಪ ಎಂದು ಬಯ್ಯೋದು, ನಳಿನ್ ಕಟೀಲ್ ಗೂ ಈ ಹಿಂದೆ ಬೈದಿದ್ರು. ಶೋಭಾ ಕರಂದ್ಲಾಜೆ ಸೇರಿ ಎಲ್ಲರಿಗೂ ಬೈದಿದ್ದಾರೆ. ನೀವು ದೊಡ್ಡವರ ಅಥವ ಪಾರ್ಟಿ ದೊಡ್ಡದಾ ಎನ್ನೋದು ಗೋತ್ತಾಗಬೇಕು ಅಂತ ಗರಂ ಆದರು.
ಹೀಗೆ ಮುಂದುವರೆದ್ರೆ ಚುನಾವಣೆಯಲ್ಲಿ ಸೋಲು
ಇವರ ಹೋರಾಟದಲ್ಲಿ ಪಾರ್ಟಿಯ ಪ್ರೋಟೋಕಾಲ್ ಫಾಲೋ ಮಾಡಿಲ್ಲ. ಕಾರ್ಯಕರ್ತರ ಉಳಿಸಿ ಎಂದು ತರುಣ್ ಜುಗ್ ಅವರಿಗೆ ಮನವಿ ಮಾಡ್ತೇವೆ. ದಯಮಾಡಿ ಇದನ್ನು ಇಲ್ಲೇ ಬಿಟ್ಬಿಡಿ. ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಬರ್ತಿದೆ. ಇದನ್ನ ಹೀಗೆ ಮುಂದುವರೆಸಿ ಚುನಾವಣೆಯಲ್ಲಿ ಸೋತ್ರೆ. ರಾಜ್ಯಾಧ್ಯಕ್ಷರನ್ನ ಸೋಲಿಗೆ ಹೊಣೆ ಮಾಡ್ತಾರೆ. ಇದಾಗ ಬಾರದು ನಾಳೆ ಮನವಿ ಮಾಡ್ತೇವೆ ಅಂತ ರಾಮಮೂರ್ತಿ ಹೇಳಿದ್ರು.

Post a Comment