Waqf Board Ban: ವಕ್ಫ್ ಬೋರ್ಡ್ ರದ್ದತಿಗೆ ಆಗ್ರಹ! ವಿಜಯಪುರದಲ್ಲಿ ಸತ್ಯಾಗ್ರಹಕ್ಕೆ ಮುಂದಾದ ರೈತರು, ಹಿಂದೂಪರ ಸಂಘಟನೆಗಳು!


 ರೈತರು ಕರಾಳ ದೀಪಾವಳಿ ಆಚರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಆ ಬಳಿಕ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ವಕ್ಫ್ ನೀಡಿದ್ದ ನೋಟಿಸ್ ರದ್ದತಿಗೆ ಆದೇಶ ನೀಡಿದ್ದರು. ಈಗ ವಕ್ಫ್ ಬೋರ್ಡ್ ರದ್ದತಿಗೆ ಆಗ್ರಹಿಸಿ ಎರಡನೇ ಹಂತದ ಹೋರಾಟ ನಡೆಸುತ್ತಿದ್ದಾರೆ. ಇಂದಿನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲು ಭಾರತೀಯ ಕಿಸಾನ್ ಮೋರ್ಚಾ, ಹಿಂದೂ ಪರ ಸಂಘಟನೆಗಳು ನಿರ್ಧಾರ ಮಾಡಿವೆ.

ವಿಜಯಪುರ: ರೈತರು, ಸಂಘ-ಸಂಸ್ಥೆಗಳ, ಮಠಗಳು, ಮತ್ತು ಸರ್ಕಾರಿ ಜಮೀನುಗಳ ಪಹಣಿಯಲ್ಲಿ ವಕ್ಪ್ ಆಸ್ತಿ (Waqf) ಎಂದು ನಮೂದಾಗಿರುವ ವಿಚಾರವಾಗಿ ವಿಜಯಪುರದಲ್ಲಿ ಆಕ್ರೋಶ ಬುಗಿಲೆದ್ದಿದ್ದು, ವಕ್ಫ್ ಬೋರ್ಡ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ರೈತರು, ಸ್ವಾಮೀಜಿಗಳು ಹಾಗೂ ಹಿಂದೂ ಸಂಘಟನೆಗಳು ಸಜ್ಜಾಗಿವೆ.

ವಕ್ಫ್ ಬೋರ್ಡ್ ರದ್ದತಿಗೆ ಆಗ್ರಹ

ರೈತರು ಕರಾಳ ದೀಪಾವಳಿ ಆಚರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಆ ಬಳಿಕ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ವಕ್ಫ್ ನೀಡಿದ್ದ ನೋಟಿಸ್ ರದ್ದತಿಗೆ ಆದೇಶ ನೀಡಿದ್ದರು. ಈಗ ವಕ್ಫ್ ಬೋರ್ಡ್ ರದ್ದತಿಗೆ ಆಗ್ರಹಿಸಿ ಎರಡನೇ ಹಂತದ ಹೋರಾಟ ನಡೆಸುತ್ತಿದ್ದಾರೆ. ಇಂದಿನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲು ಭಾರತೀಯ ಕಿಸಾನ್ ಮೋರ್ಚಾ, ಹಿಂದೂ ಪರ ಸಂಘಟನೆಗಳು ನಿರ್ಧಾರ ಮಾಡಿವೆ.ಯತ್ನಾಳ ನೇತೃತ್ವದಲ್ಲಿ ಸತ್ಯಾಗ್ರಹ

ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ನೇತೃತ್ವದಲ್ಲಿ ಈ ಸತ್ಯಾಗ್ರಹ ನಡೆಯುತ್ತಿದೆ. ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇಗುಲದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ. ಈ ಪ್ರತಿಭಟನಾ ರ್ಯಾಲಿಯ ನೇತೃತ್ವವನ್ನು ಮಹಾರಾಷ್ಟ್ರದ ಕನ್ನೇರಿ ಶ್ರೀಗಳ ವಹಿಸಲಿದ್ದಾರೆ. ಪ್ರತಿಭಟನೆ ರ್ಯಾಲಿ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳಿಗೆ ರೈತ ಹಾಗೂ ಹಿಂದೂಪರ ಸಂಘಟನೆಗಳು ಮನವಿ ಪತ್ರ ಕೊಡುತ್ತಾರೆ. ಆ ಬಳಿಕ ಬಳಿಕ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗುತ್ತದೆ.

ಹೋರಾಟಕ್ಕಿಳಿದ ಸ್ವಾಮೀಜಿಗಳು, ಮಠಾಧೀಶರು

ಮಠ ಮಾನ್ಯಗಳ ಜಮೀನುಗಳನ್ನು ಬಿಡದ ವಕ್ಫ ಬೋರ್ಡ್ ವಿರುದ್ಧ ಇದೀಗ ಜಿಲ್ಲೆಯ ಸ್ವಾಮೀಜಿಗಳು, ಮಠಾಧೀಶರು ಹೋರಾಟಕ್ಕೆ ಮುಂದಾಗಿದ್ದಾರೆ. ಮಠ ಮಾನ್ಯಗಳ ಪಹಣಿಯಲ್ಲಿ ಸೇರ್ಪಡೆಯಾಗಿರೋ ವಕ್ಫ್‌ ಹೆಸರು ಡಿಲಿಟ್ ಮಾಡುವಂತೆ ಆಗ್ರಹಿಸಿ ಸ್ವಾಮೀಜಿಗಳ ಒಕ್ಕೂಟ ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ವಕ್ಫ್‌ ಅವಾಂತರಕ್ಕೆ ಜನಾಕ್ರೋಶ ಭುಗಿಲೆದ್ದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ವಕ್ಫ್ ನೋಟಿಸ್ ಹಿಂಪಡೆಯುವಂತೆ ಖಡಕ್ ಸೂಚನೆ ನೀಡಿದ್ದರು. ಇಷ್ಟಾದರೂ ವಕ್ಫ್‌ನಿಂದ ಆಗಿರೋ ಅವಾಂತರ ನಿಂತಿಲ್ಲ. ಇದರ ನಡುವೆಯೇ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದ ಐತಿಹಾಸಿಕ ಸ್ಮಾರಕ ಗೋಲ್ ಗುಂಬಜ್‌ಗೂ ವಕ್ಫ್ ನೋಟಿಸ್ ಕೊಟ್ಟಿದ್ದಾಗಿ ಜಿಗಜಿಣಗಿ ದಾಖಲೆ ರಿಲೀಸ್ ಮಾಡಿದ್ದಾರೆ.

ವಕ್ಫ್ ವಿರುದ್ಧ ರಮೇಶ್ ಜಿಗಜಿಣಗಿ ಆಕ್ರೋಶ

ರೈತರ ಜಮೀನು, ಸಂಘ ಸಂಸ್ಥೆಗಳ ಜಾಗ, ಮಠ ಮಾನ್ಯಗಳ ಆಸ್ತಿ ಬಳಿಕ ಪುರಾತನ‌ ಸ್ಮಾರಕಗಳತ್ತ ವಕ್ಪ್ ಕಣ್ಣು ಬಿದ್ದಿದೆ. ವಕ್ಪ್ ಬೋರ್ಡ್ ಅಧಿಕಾರಿಗಳಿಂದ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ ಅಂತ ಸಂಸದ ರಮೇಶ್ ಜಿಗಜಿಗಣಿ ಆಕ್ರೋಶ ವ್ಯಕ್ತಪಡಿಸಿದ್ರು.

ಪುರಾತತ್ವ ಇಲಾಖೆಗೆ ನೀಡಿದ ನೋಟಿಸ್ ವಾಪಸ್ ಪಡೆಯಿರಿ

ರೈತರಿಗೆ ‌ನೀಡಿರೋ ನೊಟೀಸ್ ವಾಪಸ್ ಪಡೆದಿದ್ದು, ಪಹಣಿಯಲ್ಲಿ ವಕ್ಪ್ ಬೋರ್ಡ್ ಎಂದು ನಮೂದು ಮಾಡಿದ್ದನ್ನು ತೆರವು ಮಾಡಲು ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ. ಆದರೆ ಇದೇ ಮಾದರಿಯಲ್ಲಿ‌ ಪುರಾತತ್ವ ಇಲಾಖೆಗೆ ನೀಡಿದ ನೊಟೀಸ್ ವಾಪಸ್ ಪಡೆಯ ಬೇಕು ಅಂತ ಅವರು ಆಗ್ರಹಿಸಿದ್ದಾರೆ.

ವಿಶ್ವವಿಖ್ಯಾತ ಗೋಲ್ ಗುಂಬಜ್‌ಗೂ ವಕ್ಫ್ ನೋಟಿಸ್

ವಿಜಯಪುರದ ವಿಶ್ವವಿಖ್ಯಾತ ಗೋಲ್ ಗುಂಬಜ್‌ಗೂ ವಕ್ಫ್ ನೋಟಿಸ್ ನೀಡಲಾಗಿದೆ. ಜೊತೆಗೆ ಬಾರಾಕಮಾನ್, ಇಬ್ರಾಹಿಂ ರೋಜಾ ಸೇರಿದಂತೆ 43ಕ್ಕೂ ಅಧಿಕ ಸ್ಮಾರಕಗಳು ವಕ್ಪ್ ಬೋರ್ಡಿಗೆ ಸೇರಿವೆ ಅಂತ ನೋಟಿಸ್ ನೀಡಲಾಗಿದೆ ಅಂತ ಜಿಗಜಿಣಗಿ ಹೇಳಿದ್ದಾರೆ.

ಆದಿಲ್ ಶಾಹಿ ಕಾಲದ ಸ್ಮಾರಕಗಳಿಗೆ ನೋಟಿಸ್

ವಿಜಯಪುರ ಜಿಲ್ಲೆಯಲ್ಲಿ ಆದಿಲ್ ಶಾಹಿಗಳ ಕಾಲದಲ್ಲಿ 400 ವರ್ಷಗಳ ಹಿಂದೆ ನಿರ್ಮಾಣ ಆಗಿರೋ ಸ್ಮಾರಕಗಳು ಸೇರಿ ಒಟ್ಟು 43 ಸ್ಮಾರಕಗಳು ವಕ್ಪ್‌ಗೆ ಸೇರಿವೆ ಎಂದು ನೋಟಿಸ್ ನೀಡಲಾಗಿದೆ. ಪ್ರವಾಸಿ ತಾಣಗಳಾಗಿರೋ ಸ್ಮಾರಕಗಳು ವಕ್ಪ್ ಆಸ್ತಿ ಎಂದು ನೊಟೀಸ್ ನೀಡಿದ್ದನ್ನು ವಾಪಸ್ ಪಡೆಯಬೇಕು ಅಂತ ಸಂಸದ ರಮೇಶ್ ಜಿಗಜಿಣಗಿ ಆಗ್ರಹಿಸಿದ್ದಾರೆ.

Post a Comment

Previous Post Next Post