ಗಲಾಟೆ ಬಿಡಿಸಲು ಬಿಡಿಸಲು ಸಂಪಗಿ ಮತ್ತು ಜಯಮ್ಮ ದಂಪತಿ ಮುಂದಾಗಿದ್ದರು. ಈ ವೇಳೆ ಸಂಪಂಗಿ ಮೇಲೆ ಅವರ ದೊಡ್ಡಪ್ಪ ಚಂದ್ರಶೇಖರ್ ಅವರಿಂದ ಫೈರಿಂಗ್ ಆಗಿದೆ. ಸಂಪಗಿಯ ಹೊಟ್ಟೆ, ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಗಾಯಾಳುಗೆ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಸಂಪಗಿಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಭಾನುವಾರ ಸಂಜೆ ಬೆಂಗಳೂರಿನ (Bangalore) ಹೊರವಲಯ ಆನೇಕಲ್ (Anekal) ತಾಲೂಕಿನ ಸಿಡಿಹೊಸಕೋಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕುಟುಂಬದವರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ಬಿಡಿಸಲು ಬಂದವರ ಮೇಲೆಯೇ ಗುಂಡು (Firing) ಹಾರಿಸಲಾಗಿದೆ. ಇಲ್ಲಿ ಗಲಾಟೆ ಬಿಡಿಸಲು ಹೋದವರ ಮೇಲೆ ಫೈರಿಂಗ್ ಆಗಿದೆ. ಗುಂಡು ಬಿದ್ದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.ಗಲಾಟೆ ಬಿಡಿಸಲು ಹೋದವರ ಮೇಲೆ ಫೈರಿಂಗ್!ಕ್ಷುಲ್ಲಕ ಕಾರಣಕ್ಕೆ ತಂದೆ ಮಕ್ಕಳ ಮಧ್ಯೆ ಗಲಾಟೆ ನಡೆದಿದ್ದು, ಗಲಾಟೆ ಬಿಡಿಸಲು ಬಂದಿದ್ದ ಪಕ್ಕದ ಮನೆಯವರ ಮೇಲೆಯೇ ಡಬಲ್ ಬ್ಯಾರೆಲ್ ಬಂದೂಕಿನಿಂದ ಫೈರಿಂಗ್ ಆಗಿದೆ. ಸಂಪಗಿ ಗುಂಡೇಟು ತಿಂದ ವ್ಯಕ್ತಿ, ಚಂದ್ರಶೇಖರ್ ಎನ್ನುವವರು ಡಬಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿದ ಆರೋಪಿಯಾಗಿದ್ದಾರೆ. ನಿನ್ನೆ ಸಂಜೆ ಚಂದ್ರಶೇಖರ್ ಹಾಗೂ ಶ್ರೀನಿವಾಸ್ ಎನ್ನುವವರು ತಮ್ಮ ತಂದೆ ಮುನಿರಾಜು ಎಂಬುವವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ಚಂದ್ರಶೇಖರ್, ಬೇರೊಬ್ಬರ ಮನೆಯಲ್ಲಿ ಬಂದೂಕು ತಂದಿದ್ದರು.ಗಾಯಳು ಆಸ್ಪತ್ರೆಗೆ ದಾಖಲುಗಲಾಟೆ ಬಿಡಿಸಲು ಬಿಡಿಸಲು ಸಂಪಗಿ ಮತ್ತು ಜಯಮ್ಮ ದಂಪತಿ ಮುಂದಾಗಿದ್ದರು. ಈ ವೇಳೆ ಸಂಪಂಗಿ ಮೇಲೆ ಅವರ ದೊಡ್ಡಪ್ಪ ಚಂದ್ರಶೇಖರ್ ಅವರಿಂದ ಫೈರಿಂಗ್ ಆಗಿದೆ. ಸಂಪಗಿಯ ಹೊಟ್ಟೆ, ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಗಾಯಾಳುಗೆ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಸಂಪಗಿಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: Viral Video: ಬಿಜೆಪಿ ಶಾಸಕರಿಗೆ ಧಮ್ಕಿ ಹಾಕಿದ್ರಾ RTO ಅಧಿಕಾರಿ? ಲೈವ್ನಲ್ಲೇ ಶಾಸಕರ ವಿರುದ್ಧ ಗಂಭೀರ ಆರೋಪ!ಆರೋಪಿ ಪರಾರಿಈ ಬಗ್ಗೆ ಮಾತನಾಡಿದ ಗಾಯಾಳು ಸಂಪಂಗಿ ಪತ್ನಿ ಜಯಮ್ಮ ಅವರು, ಮುನಿರಾಜು ಮೇಲೆ ಮಕ್ಕಳಾದ ಚಂದ್ರಶೇಖರ್ ಮತ್ತು ಶ್ರೀನಿವಾಸ್ ರಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಜಗಳ ಬಿಡಿಸಲು ಹೋಗಿದ್ದೇವು. ಯಾಕೆ ಹಲ್ಲೆ ಮಾಡ್ತಿದ್ದೀರಾ ಎಂದು ತಮ್ಮನ ಮಕ್ಕಳನ್ನ ಸಂಪಂಗಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಏಕಾಏಕಿ ಡಬಲ್ ಬ್ಯಾರೆಲ್ ಬಂದೂಕು ತಂದು ಫೈರಿಂಗ್ ಮಾಡಿದ್ದಾರೆ. ನನ್ನ ಮತ್ತು ಪತಿ ಸಂಪಂಗಿ ಮೇಲೆ ಚಂದ್ರಶೇಖರ್ ಫೈರಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪತಿ ಸಂಪಗಿಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಫೈರಿಂಗ್ ಮಾಡಿದ ಚಂದ್ರಶೇಖರ್ ಪರಾರಿಯಾಗಿದ್ದಾನೆ.

Post a Comment