Matrimony Froud: ಹೆಣ್ಣು ಹುಡುಕಿಕೊಡದ ಮ್ಯಾಟ್ರಿಮನಿಗೆ ಶಾಕ್, 60 ಸಾವಿರ ದಂಡ ವಿಧಿಸಿದ ಕೋರ್ಟ್!


  ಸಾಂದರ್ಭಿಕ ಚಿತ್ರMatrimony Froud: ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಇನ್ನು ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎನ್ನುವ ಮಾತಿದೆ. ಅದೇ ರೀತಿ ಹೆಣ್ಣು ಹುಡುಕಿ ಕೊಡುವುದಾಗಿ ಹೇಳಿ ಮೋಸ ಮಾಡಿದ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ.

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ (Life) ಮದುವೆ (Marriage) ಅನ್ನುವ ಹಂತ ಬಂದೇ ಬರುತ್ತೆ, ಶಿಕ್ಷಣ (Education) ಮುಗಿಸಿ ಒಳ್ಳೆಯ ಕೆಲಸ ಸೇರಿದ ಬಳಿಕ ಮನೆಯಲ್ಲಿ ಹಿರಿಯರು ಮದುವೆ ವಿಷಯ ಪ್ರಸ್ತಾಪಿಸುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಹಾಗಾಗಿ ನಾವು ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಕೆಲವೊಮ್ಮೆ ಕೆಲ ಸಂಬಂಧಗಳು ಕೂಡಿ ಬರುವುದಿಲ್ಲ. ಇನ್ನೂ ಕೆಲವೊಮ್ಮೆ ಬೇಡದ ಸಂಬಂಧ ಸಹ ಆಗಿ ಬರುತ್ತದೆ ಮತ್ತು ಸಂಸಾರದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಸಾಮಾನ್ಯವಾಗಿ ಮದುವೆ ಎನ್ನುವುದು ಬಹಳ ಮುಖ್ಯವಾದ ಘಟ್ಟವಾಗಿರುವ ಕಾರಣದಿಂದ ಸುಮ್ಮನೆ ಈ ದಿನವನ್ನ ನಿರ್ಧರಿಸುವುದಿಲ್ಲ. ಅದಕ್ಕೆ ಸೂಕ್ತವಾದ ದಿನ, ಮುಹೂರ್ತಗಳನ್ನ ನೋಡಿ ಮಾಡಲಾಗುತ್ತದೆ. ಇದೀಗ ಈ ವಿಚಾರದಲ್ಲಿ ದೋಖಾ ನಡೆದಿದ್ದು, ಕೋರ್ಟ್‌ 60 ಸಾವಿರ ದಂಡ ಹಾಕಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ.

ಮನೆಯಲ್ಲಿ ವಯಸ್ಸಿಗೆ ಬಂದ ಯುವಕ ಯುವತಿಯರು ಇದ್ದರೆ ಮದುವೆ ವಿಷಯ ಚರ್ಚೆ ಆಗೇ ಆಗುತ್ತೆ. ಇದೇ ಸಂಬಂಧ ತನ್ನ ಪುತ್ರನಿಗೆ ಮದುವೆ ಮಾಡಿಸಲು ವಧು ಹುಡುಕಿಕೊಡಲು ವಿಫಲವಾದ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಕೋರ್ಟ್ 60 ರೂಪಾಯಿ ಸಾವಿರ ದಂಡವನ್ನು ವಿಧಿಸಿದ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಡೆದಿದ್ದಾದರೂ ಏನು?

ಮ್ಯಾಟ್ರಿಮೋನಿ ಪೋರ್ಟಲ್‌ಗೆ ಈ ಮೊತ್ತದ ದಂಡವನ್ನು ಬೆಂಗಳೂರಿನ ಗ್ರಾಹಕ ನ್ಯಾಯಾಲಯ  ವಿಧಿಸಿ ಆದೇಶ ಹೊರಡಿಸಿದೆ. ಎಂಎಸ್‌ನಗರದ ನಿವಾಸಿ ವಿಜಯಕುಮಾ‌ರ್ ಕೆ.ಎಸ್ ಎಂಬುವವರು ತಮ್ಮ ಪುತ್ರ ಬಾಲಾಜಿಗೆ ವಧುವಿನ ಹುಡುಕಾಟದಲ್ಲಿದ್ದರು. ಇವರು ಕಲ್ಯಾಣ್ ನಗರದಲ್ಲಿ ಕಚೇರಿಯನ್ನು ಹೊಂದಿರುವ ದಿಲ್ಕಿಲ್ ಮ್ಯಾಟ್ರಿಮೋನಿ ಪೋರ್ಟಲ್ ಅನ್ನು ಸಂಪರ್ಕಿಸಿದ್ದರು.  ಮಾ.17 ರಂದು ವಿಜಯ ಕುಮಾರ್ ಅವರು ತಮ್ಮ ಪುತ್ರನ ಅಗತ್ಯ ದಾಖಲೆಗಳು ಮತ್ತು ಫೋಟೋಗಳನ್ನು ಸಲ್ಲಿಸಿದ್ದರು. ವಧುವನ್ನು ಹುಡುಕಲು 30 ಸಾವಿರ ರೂಪಾಯಿ ಪಾವತಿಸುವಂತೆ ದಿಲ್ಕಿಲ್ ಮ್ಯಾಟ್ರಿಮೋನಿ ಬೇಡಿಕೆಯಂತೆ ವಿಜಯಕುಮಾರ್‌ ಮುಂಗಡವಾಗಿಯೂ ಪಾವತಿಸಿದ್ದರು. 45 ದಿನಗಳಲ್ಲಿ ಬಾಲಾಜಿಗೆ ವಧುವನ್ನು ಹುಡುಕುವುದಾಗಿ ದಿಲ್ಕಿಲ್ ಮ್ಯಾಟ್ರಿಮೋನಿ ಭರವಸೆಯೂ ನೀಡಿತ್ತು. ಆದರೆ ದಿಲ್ಕಿಲ್ ಮ್ಯಾಟ್ರಿಮೋನಿ ನಿಗದಿತ ಸಮಯಕ್ಕೆ ವಧುವನ್ನು ಹುಡುಕಲು ವಿಫಲವಾಗಿದೆ ಎಂದು ವಿಜಕುಮಾರ್‌ ಹೇಳಿದ್ದಾರೆ.

ಹಾಗೆಯೇ ಇಷ್ಟು ದಿನದಲ್ಲಿ ವಿಜಯ ಕುಮಾ‌ರ್ ಅವರನ್ನು ಮ್ಯಾಟ್ರಿಮೊನಿ ಕಚೇರಿಗೆ ಅಲೇದಾಡುವಂತೆಯೂ ಮಾಡಲಾಗಿತ್ತು ಎಂಬ ಗಂಭೀರ ಆರೋಪವೂ ಇದೆ. ಇದರಿಂದ ನೊಂದು ಕೋರ್ಟ್ ಮೆಟ್ಟಿಲು ಹತ್ತಿದಾಗ, ವಿಚಾರಣೆ ನಡೆಸಿದ ನ್ಯಾಯಾಲಯ ಮ್ಯಾಟ್ರಿಮೊನಿಗೆ ದಂಡ ವಿಧಿಸಿದೆ.

ಇದನ್ನೂ ಓದಿ: Singer: ಒಂದು ಹಾಡಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ! ದೇಶದ ಅತೀ ದುಬಾರಿ ಗಾಯಕ ಇವರೇ!

ದಾಂಪತ್ಯದಲ್ಲಿ ಹೊಂದಾಣಿಕೆಯೇ ಮುಖ್ಯ

ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ ಅಂದ್ರೆ ತಪ್ಪಾಗಲ್ಲ. ಗಂಡು-ಹೆಣ್ಣು ಸೇರುವ ಅದ್ಭುತ ಸಮಯವದು. ಹಿಂದೂ ಸಂಪ್ರದಾಯದಲ್ಲಿ ಮದುವೆ ಬಹಳ ಪ್ರಾಮುಖ್ಯತೆ ಇದೆ. ಮದುವೆ ಅಂದರೆ ಕೆಲ ಆಚರಣೆಗಳನ್ನು ಮಾಡಲೇಬೇಕು. ಗಂಡು  ಹಾಗೂ ಹೆಣ್ಣಿನ ಕುಟುಂಬದವರು ಬಹಳ ಸಂತೋಷದಿಂದ ಈ ಮದುವೆ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಮದುವೆ ಯಶಸ್ವಿಯಾಗಬೇಕೆಂದರೆ, ಸಂಗಾತಿಗಳು ಸಂತೋಷದಿಂದ ದಾಂಪತ್ಯ ನಡೆಸಬೇಕೆಂದರೆ ಅದರಲ್ಲಿ ಹೊಂದಾಣಿಕೆ, ಸಾಮರಸ್ಯ, ಅನ್ಯೋನ್ಯತೆ ಮುಖ್ಯವಾಗುತ್ತದೆ.

ಹಾಗೆಯೇ ದೀರ್ಘಕಾಲದ ದಾಂಪತ್ಯಕ್ಕೆ ಮುಖ್ಯವಾಗಿ ಬೇಕಿರುವುದು ನಂಬಿಕೆ ಹಾಗೂ ನಿಷ್ಠೆ. ಸಂಗಾತಿಗೆ, ಅವರ ಪ್ರೀತಿಗೆ ನಿಷ್ಠರಾಗಿದ್ದಾಗ ಮಾತ್ರ ಮದುವೆ ಯಶಸ್ವಿಯಾಗಲು ಸಾಧ್ಯ… ಬದುಕಿರುವವರೆಗೂ ಸಂಗಾತಿಗಳು ಜೊತೆಯಾಗಿರಲು ಸಾಧ್ಯ. ನಿಷ್ಠೆಯ ವಿಷಯದಲ್ಲಿ ಅನೇಕ ಸಂಬಂಧಗಳು ಮುರಿದುಹೋಗುವುದನ್ನು ನಾವು ಕಾಣುತ್ತೇವೆ. ಸಂಗಾತಿಗೆ ಮೋಸವಾದರೆ ದೂರವಾಗುವುದು ಸಹಜ. ಹಾಗಾಗಿಯೇ ಸಂಬಂಧಗಳು ಸರಿಯಾಗಿರಬೇಕಾದರೆ ನಿಷ್ಠರಾಗಿರುವುದು ಬಹಳ ಮುಖ್ಯ.

Post a Comment

Previous Post Next Post