Shiggavi By Election: ಶಿಗ್ಗಾವಿ ಬೈ ಎಲೆಕ್ಷನ್​​ನಲ್ಲಿ ಸಿಎಂ ಬದಲಾವಣೆ ಸುಳಿವು ನೀಡಿದ್ರಾ ಸಿದ್ದರಾಮಯ್ಯ? ಏನು ಹೇಳಿದ್ರು ಗೊತ್ತಾ?


 ಸಿಎಂ ಸಿದ್ದರಾಮಯ್ಯ

 Shiggavi By Election: ಇಂದಿನಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಉಪ ಚುನಾವಣಾ ನಿಮಿತ್ತ ಪ್ರಚಾರದ ಅಖಾಡಕ್ಕಿ ಧುಮುಕಿದ್ದಾರೆ. ಇಂದು ಮತ್ತು ನಾಳೆ ಸಿಎಂ ಶಿಗ್ಗಾವಿಯಲ್ಲಿ ಪ್ರಚಾರ ನಡೆಸಲಿದ್ದು, ಕೈ ಅಭ್ಯರ್ಥಿ ಪರ ಸಿಎಂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

 ಹಾವೇರಿ: ರಾಜ್ಯದ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ (By Election) ನಡೆಯಲಿದ್ದು, ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ (Congress) ಕಸರತ್ತು ನಡೆಸುತ್ತಿದೆ. ಈ ನಿಮಿತ್ತ ಇಂದಿನಿಂದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರಚಾರದ ಅಖಾಡಕ್ಕಿ ಧುಮುಕಿದ್ದಾರೆ. ಇಂದು ಮತ್ತು ನಾಳೆ ಸಿಎಂ ಶಿಗ್ಗಾವಿಯಲ್ಲಿ (Shiggavi) ಪ್ರಚಾರ ನಡೆಸಲಿದ್ದಾರೆ. ಇವರಿಗೆ ಇತರ ಸಚಿವರು ಹಾಗೂ ಉಸ್ತುವಾರಿಗಳು ಸಾಥ್ ನೀಡುತ್ತಿದ್ದಾರೆ. ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಪರ ಸಿಎಂ ಇಂದು ಹುಲಗೂರಿನಲ್ಲಿ ಪ್ರಚಾರ ಕಾರ್ಯಕ್ರಮ ಕೈಗೊಂಡಿದ್ದಾರೆ. ಹಲವು ದಿನಗಳಿಂದ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿದ್ದು, ಉಪಚುನಾವಣೆ ಫಲಿತಾಂಶ ಸಿಎಂ ಸ್ಥಾನದ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆ ಮೂಡಿದೆ. ಇನ್ನು ಈ ಸಂಬಂಧ ಇಂದು ಪ್ರಚಾರದ ವೇಳೆ ಸಿದ್ದರಾಮಯ್ಯ ಹೇಳಿದ ಮಾತು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಉಪ ಚುನಾವಣೆ ಪ್ರಯುಕ್ತ ಸ್ವತಃ ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರಚಾರಕ್ಕೆ ದುಮುಕಿರುವುದರಿಂದ ಚುನಾವಣಾ ಕಣ ರಂಗೇರಿದೆ. ಹುಲಗೂರುಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಪ್ರಚಾರದ ವೇಳೆ ಮಾತನಾಡಿದ್ದು, ಇದೀಗ ಸಿಎಂ ಅವರ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಸಿಎಂ ಸ್ಥಾನ ಕಾಂಗ್ರೆಸ್‌ ಅಭ್ಯರ್ಥಿ ಪಠಾಣ್ ಮೇಲೆ ನಿಂತಿದ್ಯಾ ಎಂಬ ಸಂಶಯ ಮೂಡುತ್ತಿದೆ. ನಾನು ಉಳೀಬೇಕಾದ್ರೆ ಪಠಾಣ್ ಗೆಲ್ಲಲೇಬೇಕು. ರಾಜ್ಯದಲ್ಲಿ ಮೂರು ಕಡೆ ಉಪ ಚುನಾವಣೆ ನಡೀತಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಮಗೆ ಇನ್ನೂ ಶಕ್ತಿ ಬರುತ್ತೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ. ನಾವು ಜನ ಪರ ಇದ್ದೇವೆ, ನಮ್ಮನ್ನು ಕೈಬಿಡಬೇಡಿ. ಈ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಅಂತ ತಿಳಿದು ಪಠಾಣ್ ನನ್ನು ಗೆಲ್ಲಿಸಿ ಎಂದು ಸಿಎಂ ಅವರು ಹುಲಗೂರು ನಲ್ಲಿ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ ಈ ಮಾತುಗಳು ಭಾರೀ ಸದ್ದು ಮಾಡುತ್ತಿದೆ. ಸಿಎಂ ಭವಿಷ್ಯ ಶಿಗ್ಗಾವಿ ಉಪಚುನಾವಣೆಯಲ್ಲಿ ಅಡಗಿದ್ಯಾ ಎಂಬ ಸಂಶಯ ಮೂಡುತ್ತಿದೆ. ಉಪ ಚುನಾವಣೆಯ ಫಲಿತಾಂಶವೇ ಇದಕ್ಕೆಲ್ಲ ಉತ್ತರವಾಗಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

 ಕೈ ಅಭ್ಯರ್ಥಿಗೆ ಸಿಎಂ ಸಲಹೆ

ಸಿಎಂ ಸಿದ್ದರಾಮಯ್ಯ ಅವರು ಹುಲಗೂರು ಪ್ರಚಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಕೆಲವಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ನೀನು ಏನು ಮಾಡುತ್ತಿಯೋ ಗೊತ್ತಿಲ್ಲ. ಈ ಚುನಾವಣೆಯಲ್ಲಿ ಗೆಲ್ಲಲೇಬೇಕು. ಬಿಜೆಪಿ ಅಭ್ಯರ್ಥಿಯನ್ನು ಹಿಟ್ ಮಾಡಿ ನೀವು ಗೆಲ್ಲಬೇಕು. ಇನ್ನು ಭರತ್‌ಗೂ ಈ ಕ್ಷೇತ್ರಕ್ಕೂ ಏನು ಸಂಬಂಧವಿಲ್ಲ. ಅವರ ತಂದೆ, ತಾತ ಇಬ್ಬರೂ ಸಿಎಂ ಆಗಿದ್ದವರು. ಅವರ ಮೊಮ್ಮಗ ಈಗ ಅಭ್ಯರ್ಥಿಯಾಗಿದ್ದಾರೆ. ಆದರೆ ಪಠಾಣ್ ಅವರು ಕುಸ್ತಿ ಪಟು ಅಂತ ಗೊತ್ತಿರಲಿಲ್ಲ. ಈಗ ನೀನು ಯಾವ ಡೌವ್ ಅಪ್ ಮಾಡ್ತೀಯೋ ಗೊತ್ತಿಲ್ಲ. ಭರತ್ ನನ್ನ ಸೋಲಿಸಲೇಬೇಕು. ಈ ಶಿಗ್ಗಾವಿ ಅಖಾಡದಲ್ಲಿ ನೀನು ಗೆಲುವು ಸಾಧಿಸಲೇಬೇಕು ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: Sandur By Election: ನೀವು 5 ವರ್ಷಕ್ಕೊಮ್ಮೆ ಬರ್ತೀರಿ ಎಂದ ವ್ಯಕ್ತಿ, ಚುನಾವಣಾ ಪ್ರಚಾರದ ವೇಳೆ ಸಂತೋಷ್ ಲಾಡ್ ಗರಂ!

ಖಾದ್ರಿ ಪರ ಸಿಎಂ ಮಾತು

ನಮ್ಮ ಖಾದ್ರಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಮೊದಲು ನಾವು ಅಜ್ಜಪಿರ್ ಖಾದ್ರಿ ಹೆಸರು ಕಳಿಸಿದ್ದೆವು. ಇನ್ನು ಎರಡನೇ ಹೆಸರು ಪಠಾಣ್ ದಾಗಿತ್ತು. ಖಾದ್ರಿ ನನಗೆ ಬಹಳ ಬೇಕಾದವರು. 1999 ರಲ್ಲಿ ಖಾದ್ರಿ ಮತ್ತು ಶಿವಣ್ಣ ಗೆದ್ದರು. ಆದರೆ ನಾನು ಸೋತಿದ್ದೆ, ಆಗ ಕ್ಷೇತ್ರ ಬಿಟ್ಟು ಕೊಡಲು ಖಾದ್ರಿ ಮುಂದಾಗಿದ್ದರು. ನಾಲ್ಕು ಬಾರಿ ಕಡಿಮೆ ಅಂತರದಿಂದ ಖಾದ್ರಿ ಸೋತಿದ್ದರು. ಮೊನ್ನೆ ಬಂಡಾಯ ಅಭ್ಯರ್ಥಿಯಾಗಿದ್ದರು. ನಮ್ಮ ಮನವೊಲಿಕೆ ನಂತರ ಹಿಂದೆ ಸರಿದಿದ್ದಾರೆ. ಈಗ ಅವರು ಪಠಾಣ್ ಅವರನ್ನು ಗೆಲ್ಲಿಸೋ ಪಣ ತೊಟ್ಟಿದ್ದಾರೆ. ಇನ್ನು ಖಾದ್ರಿ ಅವರು ಎಲ್ಲ ಧರ್ಮದವರಿಗೂ ಬೇಕಾದ ವ್ಯಕ್ತಿ. ಕುರುಬ ಸಮುದಾಯಕ್ಕೆ ಖಾದ್ರಿ ಗುರುಗಳಾಗಿದ್ದರು. ನೆನಪಿರಲಿ ಬಿಜೆಪಿ ಅಂದ್ರೆ ಭ್ರಷ್ಟಾಚಾರ ಜನತಾ ಪಾರ್ಟಿ. 40 ಪರ್ಸೆಂಟ್ ಪದ ಅವರಿಂದಲೇ ಬಂದಿದ್ದು. ಕೋವಿಡ್ ಹೆಣಗಳಿಂದಲೂ ಬಿಜೆಪಿ ಲಂಚ ಪಡೆದಿದ್ದಾರೆ. ಸತ್ತ ಹೆಣದ ಮೂಲಕ ಲಂಚ ಪಡೆದ ರಾಜಕಾರಣಿ ಇದ್ರೆ ಅದು ಬಸವರಾಜ್ ಬೊಮ್ಮಾಯಿ ಮಾತ್ರ. ಈಗ ಉಪಚುನಾವಣೆಯಲ್ಲಿ ಬೊಮ್ಮಾಯಿ ಅವರ ಮಗ ಗೆಲ್ಲಬೇಕಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸಿಎಂಗೆ ಇತರ ಸಚಿವರ ಸಾಥ್‌

ಇಂದು ಸಿಎಂ ಸಿದ್ದರಾಮಯ್ಯ ಶಿಗ್ಗಾವಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇನ್ನು ಸಿಎಂ ಅವರಿಗೆ ಸಚಿವರಾದ ಶಿವಾನಂದ ಪಾಟೀಲ, ಎಚ್. ಕೆ ಪಾಟೀಲ, ಆರ್. ಬಿ. ತಿಮ್ಮಾಪುರ, ಈಶ್ವರ್ ಖಂಡ್ರೆ, ರಹೀಮ್ ಖಾನ್, ಮತ್ತಿತರರು ಸಾಥ್‌ ನೀಡಿದ್ದಾರೆ.

Post a Comment

Previous Post Next Post