ಮುಡಾ ಹಗರಣದಲ್ಲಿ 16 ಸೈಟ್ ನುಂಗಿದ್ದು ಸಿದ್ದರಾಮಯ್ಯ, ಯಾಕೆ ಸೈಟ್ ವಾಪಾಸ್ ಕೊಟ್ಟೆ ನೀನು ? ದಲಿತರ SCP, TSP ಅನುದಾನ ದುರ್ಬಳಕೆ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದರು ಸುಮ್ಮನೆ ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಮಾದ್ಯಮದವರಿಗೆ ಬಿಜೆಪಿ ಏಜೆಂಟ್ ಅಂತಾರೆ. ಹಣೆಗೆ ಅರ್ಚಕರು ಕುಂಕುಮ ಇಡಲು ಹೋದರು, ಸಿದ್ದರಾಮಯ್ಯ ಬೇಡ ಅಂತಾರೆ. ಆದರೆ ಟೋಪಿ ಹಾಕ್ತಾರೆ, ಸಿದ್ದರಾಮಯ್ಯ ರನ್ನು ಯಾರು ನಂಬಲ್ಲಾ.. ಮುಸ್ಲಿಮರು ಪಾಕಿಸ್ತಾನಕ್ಕಿಂತ, ಕರ್ನಾಟಕದಲ್ಲಿ ಆರಾಮಾಗಿ ಇರಬಹುದು ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.
ವಕ್ಫ್ ಆಸ್ತಿ ವಿವಾದಕ್ಕೆ (Waqf Property Dispute) ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು (BJP) ಸೋಮವಾರ ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಿತು. ವಕ್ಫ್ ಆಸ್ತಿ ಕುರಿತು ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ (CBI) ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ (Zameer Ahmed Khan) ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಆಗ್ರಹಗಳನ್ನು ಮುಂದಿಟ್ಟುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕುಗಳ ತಾಲೂಕು ಕಚೇರಿ ಎದುರು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಾಕರ್ತರು ಪಾಲ್ಗೊಳ್ಳಲಿದ್ದರು. ಯಾವ ಯಾವ ಜಿಲ್ಲೆಯಲ್ಲಿ ಹೇಗೆಲ್ಲಾ ಪ್ರತಿಭಟನೆ ಮಾಡಿದ್ರು ಅನ್ನೋದನ್ನ ನೋಡೋಣ…
ವಿಜಯಪುರ: ಜಿಲ್ಲೆಯಲ್ಲಿ ರೈತ ಸಂಘಟನೆಗಳು, ಹಿಂದೂ ಸಂಘಟನೆಗಳು, ಸ್ವಾಮೀಜಿಗಳ ಒಕ್ಕೂಟ ಹಾಗೂ ಬಿಜೆಪಿ ನಾಯಕರು ಸೇರಿ ಪ್ರತಿಭಟನಾ ರ್ಯಾಲಿ ನಡೆಸಿದರು. ಯತ್ನಾಳ್ ನೇತೃತ್ವದಲ್ಲಿ ವಕ್ಫ್ ಬೋರ್ಡ್ ರದ್ದತಿಗೆ ಆಗ್ರಹಿಸಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಇನ್ನು ಇಂದಿನ ಪ್ರತಿಭಟನೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ವಿಶ್ವೇಶರ ಹೆಗಡೆ ಕಾಗೇರಿ, ರಮೇಶ ಜಿಗಜಿಣಗಿ, ಯತ್ನಾಳ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ಕಚೇರಿ ಹೊರ ಭಾಗದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದು, ಅನಿರ್ಧಿಷ್ಟಾವಧಿವರೆಗೆ ಹೋರಾಟ ನಡೆಸುತ್ತಿದ್ದಾರೆ.
ಬೀದರ್: ಬೀದರ್ ಜಿಲ್ಲೆಯಲ್ಲಿ ರೈತರ ಜಮೀನಿನಲ್ಲಿರುವ ವಕ್ಫ್ ಹೆಸರು ತೆಗೆದು ಹಾಕುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನ ತಡೆದರು. ತಹಶೀಲ್ದಾರರನ್ನ ಗೇಟ್ ಹೊರಗೆ ಕರೆದು ಮನವಿ ಸಲ್ಲಿಸಿದರು.
ಪ್ರತಿಭಟನೆ ವೇಳೆ ನಗರಸಭೆ ಸದಸ್ಯರೊಬ್ಬರು, ವಕ್ಫ್ ಸಚಿವ ಜಮ್ಮಿರ್ ಅಹಮ್ಮದ್, ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಸಚಿವ ರಹೀಂಖಾನ್‌ಗೆ ಚಪ್ಪಲಿಯಿಂದ ಹೊಡೆಯಿರಿ ಎಂದ ವಿವಾದಾತ್ಮಕ ಹೇಳಿಕೆ ನೀಡಿದರು. ಈ ಮಂತ್ರಿಗಳನ್ನು ಗ್ರಾಮಕ್ಕೆ ಬರಲು ಬಿಡಬೇಡಿ, ಬಂದಾಗ ಸಚಿವರಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದ ಬಿಜೆಪಿ ಮುಖಂಡ ಶಶಿ ಹೊಸಳ್ಳಿ ಕಿಡಿಕಾರಿದರು.
ಕೋಲಾರ: ಪ್ರತಿಭಟನಾ ಭಾಷಣದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಕೋಲಾರ ಜಿಲ್ಲೆಯಲ್ಲಿ ಹಿಂದೂಗಳ ಜಾಗ ವಕ್ಫ್ ಬೋರ್ಡ್ ಗೆ ವರ್ಗಾವಣೆ ಆಗಿದೆ. ಕೋಲಾರದ ವಾಲ್ಮೀಕಿ ಭವನದ ಸ್ತಳ, ಅನ್ಯಕೋಮಿನ ಖಾಸಗಿ ಚೌಟರಿಗೆ ನೀಡಿದ್ದಾರೆ. ಈ ವೇಳೆ ವಕ್ಫ್ ಬೋರ್ಡ್ ಆಸ್ತಿ ಕುರಿತಾದ ನೋಟೀಸ್ ವಾಪಾಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದರು.
ಮುಡಾ ಹಗರಣದಲ್ಲಿ 16 ಸೈಟ್ ನುಂಗಿದ್ದು ಸಿದ್ದರಾಮಯ್ಯ, ಯಾಕೆ ಸೈಟ್ ವಾಪಾಸ್ ಕೊಟ್ಟೆ ನೀನು ? ದಲಿತರ SCP, TSP ಅನುದಾನ ದುರ್ಬಳಕೆ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದರು ಸುಮ್ಮನೆ ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಮಾದ್ಯಮದವರಿಗೆ ಬಿಜೆಪಿ ಏಜೆಂಟ್ ಅಂತಾರೆ. ಹಣೆಗೆ ಅರ್ಚಕರು ಕುಂಕುಮ ಇಡಲು ಹೋದರು, ಸಿದ್ದರಾಮಯ್ಯ ಬೇಡ ಅಂತಾರೆ. ಆದರೆ ಟೋಪಿ ಹಾಕ್ತಾರೆ, ಸಿದ್ದರಾಮಯ್ಯ ರನ್ನು ಯಾರು ನಂಬಲ್ಲಾ.. ಮುಸ್ಲಿಮರು ಪಾಕಿಸ್ತಾನಕ್ಕಿಂತ, ಕರ್ನಾಟಕದಲ್ಲಿ ಆರಾಮಾಗಿ ಇರಬಹುದು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ನನ್ನ ಕಳಿಸಿರೊದು ಅಂತ ಸಚಿವ ಜಮೀರ್ ಅಹಮದ್ ಹೇಳ್ತಾರೆ. 15 ದಿನದಲ್ಲಿ ರೈತರನ್ನ ಹೊಲದಿಂದ ಹೊರದೊಬ್ಬುವಂತೆ ಹೇಳಿದ್ದಾರಂತೆ.. ಈಗ ಸಿಎಂ ಸಿದ್ದರಾಮಯ್ಯರನ್ನ ರೈತರು ವಿಧಾನಸಭೆಯಿಂದ ಹೊರಕಳಿಸಬೇಕು. ಸಿದ್ದರಾಮಯ್ಯ ರನ್ನ ಪಾಕಿಸ್ತಾನಕ್ಕೆ ಟ್ರೈನಿಂಗ್ ಗೆ ಕಳಿಸಬೇಕು. ವಕ್ಪ್ ಬೋರ್ಡ್ ಡೈರೆಕ್ಟರ್ ವಿಧಾನಸೌಧ ನಮ್ಮದು ಎಂದರು ಏನೂ ಕ್ರಮ ಕೈಗೊಂಡಿಲ್ಲ. ವಕ್ಫ್ ಬೋರ್ಡ್ ಅವರನ್ನು ರೈತರ ತೋಟಗಳಿಗೆ ಬಿಡಬೇಡಿ, ನಾವು ನಿಮ್ಮೊಂದಿಗೆ ಇರ್ತೀವಿ.. ವಕ್ಪ್ ಬೋರ್ಡ್ ವಜಾ ಮಾಡಬೇಕು, ರಾಕ್ಷಸರು, ಲೂಟಿ ಕೋರರು ಎಂದು ಆಕ್ರೋಶ ಹೊರಹಾಕಿದರು.
ಬಳ್ಳಾರಿ: ವಕ್ಪ್ ಬೋರ್ಡ್ ನಿಂದ ರೈತರಿಗೆ ನೋಟಿಸ್ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಮದ ನೆತ್ತಿಗೆ ಏರಿದೆ. ಸಿದ್ದರಾಮಯ್ಯ ಜಮೀರ್ ಮೂಲಕ ರೈತರಿಗೆ ನೋಟಿಸ್ ಕೊಡಿಸುತ್ತಿದ್ದಾರೆ. ಹದಿನೈದು ಸಾವಿರ ರೈತರಿಗೆ ನೋಟಿಸ್ ನೀಡಿದ್ದಾರೆ. ಮಠಮಾನ್ಯಗಳನ್ನ ಕಿತ್ತಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾರಜೋಳ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ವರದಿ ನೀಡಿದೆ. ನೋಟಿಸ್ ವಾಪಾಸ್ ಪಡೆಯುವುದು ಕಣ್ಣು ಒರೆಸುವ ತಂತ್ರವಾಗಿದೆ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ಧಾರವಾಡ: ನಗರದ ಸಾಧನಕೇರಿ ಬಡಾವಣೆಯಲ್ಲಿರುವ ಜಿಲ್ಲಾ ವಕ್ಫ್ ಕಚೇರಿಗೆ ರೈತರು ಮುತ್ತಿಗೆ ಹಾಕಿದರು. ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತ್ರತ್ವದಲ್ಲಿ ಮುತ್ತಿಗೆ ಧಾರವಾಡ ತಾಲೂಕಿನ ಗ್ರಾಮದ ರೈತರು ಕಚೇರಿಗೆ ಮುತ್ತಿಗೆ ಹಾಕಿ ವಕ್ಫ್ ಬೋರ್ಡ್ ಅಧಿಕಾರಿ ತಾಜುದ್ದೀನ್ ಶೇಖ್ aವರನ್ನು ತರಾಟೆ ತರಾಟೆಗೆ ತೆಗೆದುಕೊಂಡರು.
ರಾಯಚೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸಚಿವ ಜಮೀರ್ ಅಹ್ಮದ್ ರಾಜೀನಾಮೆಗೆ ಆಗ್ರಹಿಸಿ ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಹಾಸನ: ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಜಮೀರ್ ಅಹಮದ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಉಚ್ಛಾಟಿಸಬೇಕು. ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಇನ್ನೂ ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು. ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯ ಅಂಗೀಕರಿಸಿ ಕೇಂದ್ರ ಕಳುಹಿಸಬೇಕು ಎಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
ಬಳ್ಳಾರಿ: ಡಿಸಿ ಕಚೇರಿಯಲ್ಲಿ ಪ್ರತಿಭಟನೆ ವೇಳೆ ಮಾಜಿ ಸಚಿವ ಜನಾರ್ಧನರೆಡ್ಡಿ ಮಾತನಾಡಿ, ವಿಜಯಪುರದಲ್ಲಿ 16000 ಎಕರೆ ರೈತರ ಆಸ್ತಿಯನ್ನು ವಕ್ಫ್ ಹೆಸರಿಗೆ ನೋಂದಣಿ ಮಾಡಲಾಗಿದೆ. ಬಳ್ಳಾರಿಯಲ್ಲಿ 4 ಸಾವಿರ ಎಕರೆ ಹೀಗೆ ವಕ್ಫ ಹೆಸರಿಗೆ ಆಗಿದೆ. ಸಿದ್ದರಾಮಯ್ಯನವರು ಜಮೀರ್ ಎನ್ನುವ ಜೋಕರ್ ನ ಬಿಟ್ಟು ಈ ಹಗರಣ ಮಾಡಿಸ್ತಾ ಇದಾರೆ. ರಾಜ್ಯದ 30 ಜಿಲ್ಲೆಗಳಲ್ಲಿ ಇದು ನಡೆದಿದೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದ್ರು. ಅವರು ರೈತರ ಹಿತಕ್ಕೆ ಬದ್ದರಾಗಿ ಕೆಲಸ ಮಾಡಿದರು. ಆದರೆ ಕಾಂಗ್ರೆಸ್ ಸರಕಾರ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡಿದೆ. ಸದ್ಯ ಮತಗಳ ವೊಲೈಕೆಗೆ ನೋಟಿಸ್ ವಾಪಸ್ ಪಡೆದಿದ್ದಾರೆ. ಇದು ನಾಟಕ ಶಾಶ್ವತ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಮಂಡ್ಯ : ಬಿಜೆಪಿ ಜಿಲ್ಲಾಧ್ಯಕ್ಷ ಡಾ ಇಂದ್ರೇಶ್ ಮಾತನಾಡಿ, ಲಜ್ಜೆಗೆಟ್ಟ ಜಮೀರ್‌ನನ್ನ ವಜಾ ಮಾಡಿ ಸಚಿವ ಜಮೀರ್ ವಿರುದ್ದ ವಾಗ್ದಾಳಿ ನಡೆಸಿದರು. ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಬಂದಮೇಲೆ ಒಂದಿಲ್ಲೊಂದು ಹಗರಣ ನಡೆಯುತ್ತಿವೆ. ಅಲ್ಪ ಸಂಖ್ಯಾತರ ಓಲೈಕೆಗಾಗಿ ಜಮೀರ್‌ನನ್ನ ಸಚಿವನನ್ನಾಗಿ ಕೂರಿಸಿದೆ. ಲಜ್ಜೆಗೆಟ್ಟ ಸಚಿವ ಜಮೀರ್ ಪ್ರತಿ ಜಿಲ್ಲೆಗೆ ಹೋಗಿ ಡಿಸಿ ಮೂಲಕ ಸರ್ಕಾರದ ಜಾಗವನ್ನ ವಕ್ಫ್ ಗೆ ಸೇರಿಸ್ತಿದ್ದಾರೆ. ಈ ರೀತಿ ಮಾಡೋದು ಯಾವ ನ್ಯಾಯ? ಜಮೀರ್ ಅಹಮದ್ ರನ್ನ ಸಂಪುಟದಿಂದ ವಜಾ ಮಾಡಿ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment