Home Cleaning Tips: ಮನೆಯ ತುಂಬೆಲ್ಲಾ ಇಲಿಗಳೇ ಓಡಾಡ್ತಿದ್ಯಾ? ಈ ಟ್ರಿಕ್ಸ್ ಟ್ರೈ ಮಾಡಿ, ಓಡಿ ಹೋಗ್ತವೆ!


 ಸಾಂದರ್ಭಿಕ ಚಿತ್ರ

ಹಳ್ಳಿ ಕಡೆಯಲ್ಲಂತೂ, ಇವು ಭತ್ತ, ರಾಗಿ, ಗೋಧಿಯಂತಹ ದವಸ ಧಾನ್ಯಗಳನ್ನು ಬಿಡೋದೆ ಇಲ್ಲ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ಒಂದು ಬೆಕ್ಕು ಸಾಕುತ್ತಾರೆ, ಇಲ್ಲಾ ಇಲಿಗಳನ್ನು ಕೊಲ್ಲುವ ಬೋನ್‌ ಮಾಡಿಕೊಂಡಿರುತ್ತಾರೆ. ಸಾಮಾನ್ಯವಾಗಿ ಇಲಿಗಳನ್ನು ಮನೆಯಿಂದ ಓಡಿಸಲು ಜನರು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ.ಮನೆಯಲ್ಲಿ ಈ ಜಿರಳೆ (Cockroach) , ಜೇಡರ ಬಲೆ, ಇಲಿ (Rat) ಇವುಗಳ ಕಾಟ ತಪ್ಪಿದ್ದಲ್ಲ ನೋಡಿ. ಇತ್ತೀಚೆಗೆ ಇವುಗಳ ಜೊತೆಗೆ ತಿಗಣೆ (BedBug) ಕಾಟ ಕೂಡ ಲಿಸ್ಟ್‌ನಲ್ಲಿದೆ. ಜಿರಳೆಯಂತಹ ಸಣ್ಣಪುಟ್ಟ ಹುಳ, ಹಪ್ಪಟೆಗಳನ್ನು ಅದು ಇದು ಸ್ಪ್ರೇ ಮಾಡಿ, ಔಷಧಿ ಹಾಕಿ ಕಡಿಮೆ ಮಾಡಿಬಿಡಬಹುದು, ಆದರೆ ಈ ಇಲಿಗಳನ್ನು ಮನೆಯಿಂದ ಓಡಿಸೋದು ಭಾರೀ ಕಷ್ಟ. ಈ ಇಲಿಗಳು ಮನೆಯಲ್ಲಿ ಇರೋದು ಆರೋಗ್ಯಕ್ಕೆ (Health) ಮಾತ್ರವಲ್ಲದೇ, ನಾವು ತೊಡುವ ಬಟ್ಟೆ-ಬರೇಗಳನ್ನೆಲ್ಲಾ ಕಡಿದು ಚೂರು, ಚೂರು ಮಾಡಿ ಬಿಡುತ್ತವೆ. ಒಮ್ಮೊಮ್ಮೆ ರಾತ್ರಿ ಮಲಗಿದಾಗಲೂ ಮೈಮೇಲೆ ಓಡಾಡುವುದು, ಕಾಲಬೆರಳುಗಳನ್ನು ಕಚ್ಚುವುದು ಸೇರಿದಂತೆ ಇನ್ನಿಲ್ಲದ ತೊಂದರೆ ಕೊಡುತ್ತವೆ.ಇಲಿಗಳ ಕಾಟ

ಹಳ್ಳಿ ಕಡೆಯಲ್ಲಂತೂ, ಇವು ಭತ್ತ, ರಾಗಿ, ಗೋಧಿಯಂತಹ ದವಸ ಧಾನ್ಯಗಳನ್ನು ಬಿಡೋದೆ ಇಲ್ಲ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ಒಂದು ಬೆಕ್ಕು ಸಾಕುತ್ತಾರೆ, ಇಲ್ಲಾ ಇಲಿಗಳನ್ನು ಕೊಲ್ಲುವ ಬೋನ್‌ ಮಾಡಿಕೊಂಡಿರುತ್ತಾರೆ. ಸಾಮಾನ್ಯವಾಗಿ ಇಲಿಗಳನ್ನು ಮನೆಯಿಂದ ಓಡಿಸಲು ಜನರು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಅವುಗಳಲ್ಲಿ ಹೆಚ್ಚಿನವು ರಾಸಾಯನಿಕ ಪರಿಹಾರಗಳೇ ಆಗಿರುತ್ತವೆ. ಭಾರೀ ಸರ್ಕಸ್‌ ಮಾಡಿದ್ರೂ ಇಲಿಗಳನ್ನು ನಿವಾರಿಸೋದು ಒಮ್ಮೊಮ್ಮೆ ಕಷ್ಟಸಾಧ್ಯ. ಈ ಭಾರಿ ಕೆಮಿಕಲ್‌ಗೂ ಇಲಿಗಳು ಮನೆ ಬಿಟ್ಟು ಹೋಗೋದೇ ಇಲ್ಲ.

ನಿಮ್ಮನೆಯಲ್ಲೂ ಇದೇ ರೀತಿ ಇಲಿಗಳ ಕಾಟವಿದ್ದು ಓಡಿಸಲು ಬೇಸತ್ತಿದ್ದರೆ, ಕೆಮಿಕಲ್‌ ಸೇರಿ ಬೇರೆ ಬೇರೆ ವಿಧಾನ ಪ್ರಯತ್ನಿಸಿ ಸೋತಿದ್ದರೆ ಡೋಂಟ್‌ವರಿ. ಸಿಂಪಲ್‌ ಆಗಿ ಮನೆಯಿಂದ ಇಲಿಗಳು ಕಾಲ್ಕೀಳುವ ಟ್ರಿಕ್ಸ್‌ ಹೇಳ್ತಿವಿ. ಇದನ್ನು ನೀವು ಮಾಡಿದರೆ ಪಕ್ಕಾ ಇಲಿಗಳ ನಿವಾರಣೆಯಾಗುತ್ತದೆ. ಇಲಿಗಳಿಗೆ ಕರ್ಪೂರವೇ ರಾಮಬಾಣ

ಈ ಟ್ರಿಕ್ಸ್‌ಗೆ ನಿಮಗೆ ದುಬಾರಿ ರಾಸಾಯನಿಕಗಳು ಅಥವಾ ಮೌಸ್‌ಟ್ರಾಪ್‌ಗಳ ಅಗತ್ಯವಿಲ್ಲ. ಬದಲಾಗಿ ಕರ್ಪೂರ ಒಂದಿದ್ರೆ ಸಾಕು. ಕರ್ಪೂರ ಬಲವಾದ ಸುವಾಸನೆ ಹೊಂದಿದೆ. ಇದನ್ನು ಹಚ್ಚಿದರೆ ಅಥವಾ ಹಾಗೆ ಇಟ್ರು ಮನೆ ತುಂಬಾ ಘಮ್‌ ಎನ್ನುತ್ತದೆ. ನಮಗೆಲ್ಲಾ ಇಷ್ಟವಾಗುವ ಈ ಘಮ ಇಲಿಗಳಿಗೆ ಆಗೋದೆ ಇಲ್ಲ. ಇಲಿಗಳಿಗೆ ಈ ಸುವಾಸನೆಯನ್ನು ಸಹಿಸಲು ಆಗೋದೆ ಇಲ್ವಂತೆ. ಹೀಗಾಗಿ ಕರ್ಪೂರಗಳ ಸ್ಮೆಲ್‌ ಬಂದ್ರೆ ಇಲಿಗಳು ಮೈಲಿ ದೂರ ಓಡುತ್ತವೆ. ನಿಮ್ಮ ಮನೆಯಿಂದ ಇಲಿಗಳನ್ನು ಓಡಿಸಲು ಕರ್ಪೂರವನ್ನು ಬಳಸೋದು ನೈಸರ್ಗಿಕ, ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಪರಿಹಾರವಾಗಿದೆ. ಇಲಿ ಓಡಿಸಲು ಕರ್ಪೂರ ಬಳಸೋದು ಹೇಗೆ?

ಮನೆ ಒರೆಸುವ ನೀರಿಗೆ ಐದಾರು ಕರ್ಪೂರ ಸೇರಿಸಿ. ಅದರಲ್ಲಿ ನಿಮ್ಮ ಮಾಪ್‌ ಅನ್ನು ಅದ್ದಿ, ಹಿಂಡಿ ಮನೆ ಒರೆಸಿದರೆ ಮುಗೀತು. ಮನೆಯೂ ಸ್ವಚ್ಛ, ಇಲಿ ಕಾಟಾನೂ ಇರಲ್ಲ. ಆದಷ್ಟು ಮನೆಯಲ್ಲಿ, ಇಲಿಗಳು ಹೆಚ್ಚು ಸಕ್ರಿಯವಾಗಿರುವ ಪ್ರದೇಶಗಳಿಗೆ ವಿಶೇಷ ಗಮನ ಕೊಡಿ, ಉದಾಹರಣೆಗೆ ಅಡುಗೆಮನೆ, ಸ್ಟೋರ್ ರೂಂ ಅಥವಾ ಬಾಗಿಲುಗಳ ಬಳಿ ಕರ್ಪೂರದಿಂದ ಕ್ಲೀನ್‌ ಮಾಡಿ.

ಬೇಕಾದರೆ ಈ ಜಾಗಗಳಲ್ಲಿ ಇಡೀ ಕರ್ಪೂರವನ್ನು ಇಡುವುದು ಸಹ ಉತ್ತಮ ವಿಧಾನ. ಹೀಗೆ ಮಾಡೋದರಿಂದ ಸುವಾಸನೆ ಸಹಿಸದೇ ಇಲಿಗಳು ಆ ಜಾಗ ಬಿಟ್ಟು ಹೊರ ನಡೆಯುತ್ತವೆ. ನಿಮ್ಮ ಬಳಿ ಕರ್ಪೂರ ಹೆಚ್ಚಿಲ್ಲದಿದ್ದರೆ, ಇರೋ ಕರ್ಪೂರದ ಜೊತೆ, ನೀವು ಅದರಲ್ಲಿ ಪುದೀನಾ ಎಣ್ಣೆಯನ್ನು ಕೂಡ ಬೆರೆಸಬಹುದು. ನಿಮ್ಮ ಶುಚಿಗೊಳಿಸುವ ದಿನಚರಿಯಲ್ಲಿ ಈ ಪರಿಹಾರವನ್ನು ನಿಯಮಿತವಾಗಿ ಬಳಸುವುದರಿಂದ, ಇಲಿಗಳು ಕ್ರಮೇಣ ನಿಮ್ಮ ಮನೆಯನ್ನು ಬಿಟ್ಟು ಓಡಿ ಹೋಗುತ್ತವೆ. ಇಲಿ ಓಡಿಸಲು ಎಲ್ಲಾ ರೀತಿಯ ವಿಧಾನ ಟ್ರೈ ಮಾಡಿ ಸುಸ್ತಾಗಿದ್ದರೆ, ನಾವಿಂದು ತಿಳಿಸಿರುವ ಈ ಟ್ರಿಕ್ಸ್‌ ಒಮ್ಮೆ ಟ್ರೈ ಮಾಡಿ ನೋಡಿ.

Post a Comment

Previous Post Next Post