Swachh Bharat Mission: ಯಶಸ್ವಿ 10 ವರ್ಷ ಪೂರೈಸಿದ ಸ್ವಚ್ಛ ಭಾರತ ಅಭಿಯಾನ; ನೈರ್ಮಲ್ಯ ಮುಕ್ತ ಭಾರತದತ್ತ ದಾಪುಗಾಲು


 ಸ್ವಚ್ಚ ಭಾರತ ಅಭಿಯಾನ

ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ದೃಷ್ಟಿಕೋನವನ್ನು ಗೌರವಿಸುವ ಸಲುವಾಗಿ ಇದನ್ನು ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿಯವರು ಪರಿಚಯಿಸಿದರು. ನರೇಂದ್ರ ಮೋದಿ ಅವರು ಮೊದಲ ಅವಧಿಗೆ ಅಧಿಕಾರಕ್ಕೆ ಬಂದ ವೇಳೆ ಸ್ವಚ್ಛ ಭಾರತ ಅಭಿಯಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಯಿತು. ಇಂದಿಗೆ ಈ ಅಭಿಯಾನ ಯಶಸ್ವಿಯಾಗಿ 10 ವರ್ಷ ಪೂರೈಸಿದೆ.

ಸ್ವಚ್ಛ ಭಾರತ ಅಭಿಯಾನವು (Swachh Bharat Mission) ಭಾರತದಲ್ಲಿ (India) ನಡೆದ ಅತ್ಯಂತ ಮಹತ್ವದ ಮತ್ತು ಜನಪ್ರಿಯ ಅಭಿಯಾನಗಳಲ್ಲಿ ಒಂದಾಗಿದೆ. ಭಾರತದ ಎಲ್ಲಾ ನಗರಗಳು (India`s All cities) ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಸಲು ಈ ಅಭಿಯಾನವನ್ನು ಆರಂಭಿಸಲಾಯಿತು. ಮಹಾತ್ಮ ಗಾಂಧಿಯವರ (Mahatma Gandhi) ಸ್ವಚ್ಛ ಭಾರತದ ದೃಷ್ಟಿಕೋನವನ್ನು ಗೌರವಿಸುವ ಸಲುವಾಗಿ ಇದನ್ನು ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಪರಿಚಯಿಸಿದರು. ನರೇಂದ್ರ ಮೋದಿ ಅವರು ಮೊದಲ ಅವಧಿಗೆ ಅಧಿಕಾರಕ್ಕೆ ಬಂದ ವೇಳೆ ಸ್ವಚ್ಛ ಭಾರತ ಅಭಿಯಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಯಿತು. ಎಲ್ಲಾ ಪಟ್ಟಣಗಳು, ಗ್ರಾಮೀಣ ಮತ್ತು ನಗರಗಳನ್ನು ಒಳಗೊಂಡಿದೆ. ಸ್ವಚ್ಛತೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಜಾರಿಗೊಳಿಸಲಾಯಿತು. ಇಂದಿಗೆ ಈ ಅಭಿಯಾನ ಯಶಸ್ವಿಯಾಗಿ 10 ವರ್ಷ ಪೂರೈಸಿದೆ.

ಸ್ವಚ್ಛ ಭಾರತ ಅಭಿಯಾನವು ಭಾರತವನ್ನು ಸ್ವಚ್ಛ ಮತ್ತು ಉತ್ತಮವಾಗಿಸಲು ಸಾಕಷ್ಟು ಗುರಿಗಳನ್ನು ಮುಂದಿಟ್ಟುಕೊಂಡು ಆರಂಭಿಸಲಾಯಿತು. ಈ ಅಭಿಯಾನವು ಕೇವಲ ಕಸ ಗುಡಿಸುವವರು ಮತ್ತು ಕಾರ್ಮಿಕರನ್ನು ಮಾತ್ರವಲ್ಲದೆ ದೇಶದ ಎಲ್ಲಾ ನಾಗರಿಕರನ್ನು ಆಕರ್ಷಿಸಿತು. ಈ ಸಂದೇಶ ದೇಶದ ಎಲ್ಲ ನಾಗರಿಕರನ್ನು ತಲುಪಿತು. ಎಲ್ಲಾ ಮನೆಗಳಿಗೆ ನೈರ್ಮಲ್ಯ ಸೌಲಭ್ಯಗಳನ್ನು ನಿರ್ಮಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಬಯಲು ಶೌಚ ಮಾಡುವುದು, ಅದನ್ನು ಹೋಗಲಾಡಿಸಬೇಕು ಎನ್ನುವುದು ಈ ಅಭಿಯಾನದ ಗುರಿಯಾಗಿದೆ.

ಭಾರತ ಸರ್ಕಾರವು ಎಲ್ಲಾ ನಾಗರಿಕರ ಮನೆಗಳಿಗೆ ಸರಿಯಾದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದು ನಾಗರಿಕರಲ್ಲಿ ಸ್ವಚ್ಛತೆಯಿಂದ ಇರಲು ಉತ್ಸಾಹಿಸುತ್ತದೆ. ಅಂತೆಯೇ, ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಿಗೆ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ನಾಗರಿಕರಿಗೆ ತ್ಯಾಜ್ಯವನ್ನು ಬುದ್ದಿವಂತಿಕೆಯಿಂದ ವಿಲೇವಾರಿ ಮಾಡಲು ಕಲಿಸುವುದು ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: Swachh Bharat: ಸ್ವಚ್ಛ ಭಾರತ್ ಯೋಜನೆಯಿಂದ ವರ್ಷಕ್ಕೆ 70 ಸಾವಿರ ಶಿಶುಗಳ ಮರಣಕ್ಕೆ ತಡೆ; ಪ್ರಧಾನಿ ಮೋದಿ ಹೇಳಿದ್ದೇನು?

 ಭಾರತಕ್ಕೆ ಸ್ವಚ್ಛ ಭಾರತ ಅಭಿಯಾನದ ಅವಶ್ಯಕತೆ ಇತ್ತೇ?

ಭಾರತದಲ್ಲಿ ಕೊಳೆಯನ್ನು ತೊಡೆದುಹಾಕಿ ಸ್ವಚ್ಛತೆ ನಿರ್ಮಿಸಲು ಸ್ವಚ್ಛ ಭಾರತ ಅಭಿಯಾನದಂತಹ ಸ್ವಚ್ಛತಾ ಅಭಿಯಾನದ ಅವಶ್ಯಕತೆಯಿದೆ. ನಾಗರಿಕರಲ್ಲಿ ಉತ್ತಮ ಆರೋಗ್ಯ ಸೇರಿದಂತೆ ಅನೇಕ ಸದುದ್ದೇಶದಿಂದ ಈ ಅಭಿಯಾನ ಮುಖ್ಯವಾಗಿದೆ. ಭಾರತದ ಬಹುಪಾಲು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ, ಅವರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸುವ ಅವಶ್ಯಕತೆ ಇದೆ. ಏಕೆಂದರೆ, ಸಾಮಾನ್ಯವಾಗಿ ಈ ಪ್ರದೇಶಗಳಲ್ಲಿ ಜನರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಅವರು ವಿಸರ್ಜನೆ ಮಾಡಲು ಹೊಲಗಳಲ್ಲಿ ಅಥವಾ ರಸ್ತೆಗಳಲ್ಲಿ ಹೋಗುತ್ತಾರೆ. ಈ ಅಭ್ಯಾಸವು ನಾಗರಿಕರಿಗೆ ಸಾಕಷ್ಟು ನೈರ್ಮಲ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ, ಈ ಸ್ವಚ್ಛ ಭಾರತ್ ಅಭಿಯಾನ ಈ ಜನರ ಜೀವನ ಪರಿಸ್ಥಿತಿಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಗ್ರಾಮೀಣ ಮಟ್ಟಕ್ಕೂ ತಲುಪಿದ ಅಭಿಯಾನ

ಬೇರೆ ರೀತಿಯಲ್ಲಿ ಹೇಳುವುದಾದರೆ, ಸ್ವಚ್ಛ ಭಾರತ ಅಭಿಯಾನವು ಸರಿಯಾದ ತ್ಯಾಜ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ . ನಾವು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿ ತ್ಯಾಜ್ಯವನ್ನು ಮರುಬಳಕೆ ಮಾಡಿದಾಗ ಅದು ದೇಶವನ್ನು ಅಭಿವೃದ್ಧಿಪಡಿಸುತ್ತದೆ. ಇದರ ಮುಖ್ಯ ಗಮನವು ಒಂದು ಗ್ರಾಮೀಣ ಪ್ರದೇಶವಾಗಿರುವುದರಿಂದ, ಅದರ ಮೂಲಕ ಗ್ರಾಮೀಣ ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಲಾಗುತ್ತದೆ. ಬಹು ಮುಖ್ಯವಾಗಿ, ಇದು ತನ್ನ ಉದ್ದೇಶಗಳ ಮೂಲಕ ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಭಾರತವು ವಿಶ್ವದ ಅತ್ಯಂತ ಕೊಳಕು ರಾಷ್ಟ್ರಗಳಲ್ಲಿ ಒಂದಾಗಿತ್ತು, ಈ ಅಭಿಯಾನದಿಂದ ಮೊದಲಿನ ಸನ್ನಿವೇಶ ಈಗ ಇಲ್ಲ ಅಂತಲೇ ಹೇಳಬಹುದು. ಹಾಗಾಗಿ ಭಾರತಕ್ಕೆ ಸ್ವಚ್ಛ ಭಾರತ ಅಭಿಯಾನದಂತಹ ಸ್ವಚ್ಛತಾ ಅಭಿಯಾನದ ಅಗಶ್ಯಕತೆ ಇದೆ.

ಸ್ವಚ್ಛ ಭಾರತ ಅಭಿಯಾನವು ಭಾರತವನ್ನು ಸ್ವಚ್ಛಂದವಾಗಿಸಲು ಅನುಕೂಲ ಮಾಡಿಕೊಡುತ್ತದೆ. ಎಲ್ಲಾ ನಾಗರಿಕರು ಒಗ್ಗೂಡಿ ಈ ಅಭಿಯಾನದಲ್ಲಿ ಭಾಗವಹಿಸಿದರೆ, ಭಾರತವು ಶೀಘ್ರದಲ್ಲೇ ಅಭಿವೃದ್ಧಿ ಹೊಂದುತ್ತದೆ. ಇದಲ್ಲದೆ, ಭಾರತದ ನೈರ್ಮಲ್ಯ ಪರಿಸ್ಥಿತಿಗಳು ಸುಧಾರಿಸುತ್ತವೆ. ಭಾರತಕ್ಕೆ ಪ್ರತಿ ವರ್ಷ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ವಚ್ಛತೆ ಇದ್ದರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ.

ಸ್ವಚ್ಛ ಭಾರತ್ ಯೋಜನೆಯಿಂದ ವರ್ಷಕ್ಕೆ 70 ಸಾವಿರ ಶಿಶುಗಳ ಮರಣಕ್ಕೆ ತಡೆ

ಸ್ವಚ್ಚ ಭಾರತ್ ಅಭಿಯಾನ ಆರಂಭವಾದ ನಂತರ ದೇಶದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬಂದಿವೆ. ಅಂತರರಾಷ್ಟ್ರೀಯ ಪೀರ್-ರಿವ್ಯೂಡ್ ವೈಜ್ಞಾನಿಕ ಜರ್ನಲ್‌ 2014ರಿಂದ 2020ರವರೆಗೆ ವಾರ್ಷಿಕವಾಗಿ 60,000-70,000 ಶಿಶುಗಳು ಮತ್ತು ಐದು ವರ್ಷದೊಳಗಿನ ಮಕ್ಕಳ ಸಾವುಗಳನ್ನು ತಡೆಯಲು ಈ ಅಭಿಯಾನ ಕೊಡುಗೆ ನೀಡಿದೆ ಎಂದು ಹೇಳಿದೆ.

ಸಂಶೋಧನಾ ಪ್ರಬಂಧವನ್ನು ʻವೈಜ್ಞಾನಿಕ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಈ ಅಧ್ಯಯನವನ್ನು ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ್ದಾರೆ. ಸಂಶೋಧಕರು 20 ವರ್ಷಗಳ ಅವಧಿಗೆ 600 ಜಿಲ್ಲೆಗಳಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರೀಯ ಪ್ರಾತಿನಿಧಿಕ ಸಮೀಕ್ಷೆಗಳಿಂದ ಡೇಟಾವನ್ನು ಅಧ್ಯಯನ ಮಾಡಿದ್ದಾರೆ.

ಶಿಶು ಹಾಗೂ ಮಕ್ಕಳ ಸಾವಿನ ಪ್ರಕರಣದಲ್ಲಿ ಇಳಿಕೆ

ʻಸ್ವಚ್ಛ ಭಾರತ್ ಮಿಷನ್’ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯದ ಪ್ರವೇಶದ ಹೆಚ್ಚಳ ಮತ್ತು 2000 ರಿಂದ 2020 ರವರೆಗೆ ಶಿಶುಗಳು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ಸಾವಿನ ಇಳಿಕೆಯ ನಡುವಿನ ಸಂಬಂಧವನ್ನು ಅಧ್ಯಯನವು ಹೈಲೈಟ್‌ ಮಾಡಿದೆ. ಎಲ್ಲಾ ಗ್ರಾಮೀಣ ಮನೆಗಳಲ್ಲಿ ಶೌಚಾಲಯಗಳನ್ನು ಒದಗಿಸುವ ಮೂಲಕ ಹಳ್ಳಿಗಳಲ್ಲಿ ಬಯಲು ಶೌಚವನ್ನು ನಿವಾರಿಸುವುದು ಅಭಿಯಾನದ ಉದ್ದೇಶಗಳಲ್ಲಿ ಒಂದಾಗಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಭಾರತದಾದ್ಯಂತ ಸುಮಾರು 120 ಮಿಲಿಯನ್ (12 ಕೋಟಿ) ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಅವರು ಹೇಳಿದ್ದಾರೆ.

ಏನು ಹೇಳಿದೆ ಅಧ್ಯಯನ?

ಜಿಲ್ಲಾ ಮಟ್ಟದ ಶೌಚಾಲಯದ ಪ್ರವೇಶವನ್ನು ಶೇಕಡಾ 10ರಷ್ಟು ಸುಧಾರಿಸಿರುವುದು ಶಿಶುಗಳಲ್ಲಿನ ಸಾವಿನ ಪ್ರಮಾಣವನ್ನು 0.9 ಅಂಕಗಳಿಂದ ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 1.1 ಅಂಕಗಳಿಂದ ಕಡಿಮೆಯಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಐತಿಹಾಸಿಕವಾಗಿ, ಶೌಚಾಲಯದ ಪ್ರವೇಶ ಮತ್ತು ಮಕ್ಕಳ ಸಾವುಗಳು ಭಾರತದಲ್ಲಿ ವಿಲೋಮ ಸಂಬಂಧವನ್ನು ಹೊಂದಿವೆ ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ. ಹೆಚ್ಚಿದ ಶೌಚಾಲಯ ಪ್ರವೇಶದ ವಿಶಾಲ ಪ್ರಯೋಜನಗಳು ಸುಧಾರಿತ ಮಹಿಳಾ ಸುರಕ್ಷತೆ, ಕಡಿಮೆ ವೈದ್ಯಕೀಯ ವೆಚ್ಚಗಳಿಂದ ಆರ್ಥಿಕ ಉಳಿತಾಯ ಮತ್ತು ಜೀವನದ ಗುಣಮಟ್ಟದಲ್ಲಿ ಒಟ್ಟಾರೆ ಸುಧಾರಣೆಗೆ ಕಾರಣವಾಗುತ್ತವೆ ಎಂದು ಲೇಖಕರು ಗಮನಿಸಿದ್ದಾರೆ.

‘ಸ್ವಚ್ಛತಾ ಹೀ ಸೇವಾ 2024’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ

 ಈ ಸ್ವಚ್ಛ ಭಾರತ ಅಭಿಯಾನ ಆರಂಭವಾಗಿ ಇಂದಿಗೆ 10 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು, ಸ್ವಚ್ಛತೆಯನ್ನು ‘ಜನ ಆಂದೋಲನ’ವನ್ನಾಗಿ ಮಾಡಿದ ರಾಷ್ಟ್ರದ ಉತ್ಸಾಹಕ್ಕೆ ನಮಸ್ಕರಿಸಿದರು ಮತ್ತು ನಿರಂತರ ಪ್ರಯತ್ನಗಳಿಂದ ಮಾತ್ರ ನಾವು ಭಾರತವನ್ನು ಸ್ವಚ್ಚಗೊಳಿಸಬಹುದು ಎಂದು ಹೇಳಿದ್ದಾರೆ.

ಸ್ವಚ್ಛ ಭಾರತ ಅಭಿಯಾನದ 10ನೇ ವರ್ಷಾಚರಣೆ ಅಂಗವಾಗಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಇಂತಹ ಪ್ರಯತ್ನಗಳು ಅಭಿಯಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ. ಕಳೆದ 10 ವರ್ಷಗಳಲ್ಲಿ, ಕೋಟ್ಯಂತರ ಭಾರತೀಯರು ಈ ಅಭಿಯಾನವನ್ನು ತಮ್ಮ ವೈಯಕ್ತಿಕ ಗುರಿಯಾಗಿಸಿಕೊಂಡಿದ್ದಾರೆ. ಒಂದು ದಶಕದ ಈ ಪ್ರಯಾಣದ ನಂತರ, ಎಲ್ಲಾ ದೇಶವಾಸಿಗಳು, ಸ್ವಚ್ಛತಾ ಕಾರ್ಯಕರ್ತರು, ಧಾರ್ಮಿಕ ಮುಖಂಡರು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಎನ್ಜಿಒಗಳು ಮತ್ತು ಮಾಧ್ಯಮಗಳ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ನೀವೆಲ್ಲರೂ ಸ್ವಚ್ಛ ಭಾರತ ಅಭಿಯಾನವನ್ನು ಜನರ ಕ್ರಾಂತಿಯನ್ನಾಗಿ ಮಾಡಿದ್ದೀರಿ ಎಂದು ವಿಜ್ಞಾನ ಭವನದಲ್ಲಿ ನಡೆದ ‘ಸ್ವಚ್ಛತಾ ಹೀ ಸೇವಾ 2024’ ಕಾರ್ಯಕ್ರಮದಲ್ಲಿ ಪ್ರಧಾನಿ ಹೇಳಿದ್ದಾರೆ.

ಸ್ವಚ್ಚತಾ ಯೋಜನೆಗಳಿಗಾಗಿ 10,000 ಕೋಟಿ ರೂ.

ಈ ಸಂದರ್ಭದಲ್ಲಿ, ಸ್ವಚ್ಚತಾ ಯೋಜನೆಗಳಿಗಾಗಿ 10,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಮಿಷನ್ ಅಮೃತ್ ನ ಭಾಗವಾಗಿ, ವಿವಿಧ ನಗರಗಳಲ್ಲಿ ನೀರು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು. ನಮಾಮಿ ಗಂಗೆ ಅಥವಾ ಕಸದಿಂದ ಜೈವಿಕ ಅನಿಲ ಉತ್ಪಾದಿಸುವ ‘ಗೋವರ್ಧನ್’ ಸ್ಥಾವರಕ್ಕೆ ಸಂಬಂಧಿಸಿದ ಕೆಲಸವಾಗಲಿ, ಇವೆಲ್ಲವೂ ಸ್ವಚ್ಛ ಭಾರತ ಅಭಿಯಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದರು.

ಸ್ವಚ್ಚ ಭಾರತ್ ಭಾಗವಾಗಿ ಗಂಗಾ ಶುದ್ಧೀಕರಣ

ಅಮೃತ್ ಮತ್ತು ಅಮೃತ್ 2.0 ಅಡಿಯಲ್ಲಿ ನಗರ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸುವ/ಹೆಚ್ಚಿಸುವ ಗುರಿಯನ್ನು ಹೊಂದಿರುವ ಯೋಜನೆಗಳಿಗಾಗಿ 6,800 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ. ಗಂಗಾ ಜಲಾನಯನ ಪ್ರದೇಶಗಳಲ್ಲಿನ ನೀರಿನ ಗುಣಮಟ್ಟ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು 1550 ಕೋಟಿ ರೂಪಾಯಿ ಮೌಲ್ಯದ 10 ಯೋಜನೆಗಳು ಮತ್ತು ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಅಡಿಯಲ್ಲಿ 15 ಸಂಕುಚಿತ ಜೈವಿಕ ಅನಿಲ (ಸಿಬಿಸಿ) ಸ್ಥಾವರ ಯೋಜನೆಗಳು ಹಾಗೂ ಗೋಬರ್ ಧನ್ ಯೋಜನೆಯಡಿಯಲ್ಲಿ 1332 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಕೂಡ ಒಳಗೊಂಡಿರುತ್ತದೆ.

ಸ್ವಚ್ಛತೆಯೇ ಸೇವೆ ( ಸ್ವಚ್ಛತಾ ಹೈ ಸೇವಾ) 2024 ಇದರ ಪರಿಕಲ್ಪನೆ, ‘ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ’, ವೈಯಕ್ತಿಕ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸುಸ್ಥಿರತೆಗೆ ತನ್ನ ಬದ್ಧತೆಯಲ್ಲಿ ಮತ್ತೊಮ್ಮೆ ರಾಷ್ಟ್ರವನ್ನು ಏಕೀಕೃತಗೊಳಿಸಿ ಒಂದುಗೂಡಿಸುತ್ತದೆ. ಸ್ವಚ್ಛತೆಯೇ ಸೇವೆ ( ಸ್ವಚ್ಛತಾ ಹೈ ಸೇವಾ) 2024 ಇದರ ಅಡಿಯಲ್ಲಿ, 17 ಕೋಟಿಗೂ ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ 19.70 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಸುಮಾರು 6.5 ಲಕ್ಷ ಸ್ವಚ್ಛತೆ ಗುರಿ ಘಟಕಗಳಲ್ಲಿ ಈಗಾಗಲೇ ಪರಿವರ್ತನೆಯನ್ನು ಸಾಧಿಸಲಾಗಿದೆ. ಸುಮಾರು 1 ಲಕ್ಷ ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳನ್ನು ಸಹ ಆಯೋಜಿಸಲಾಗಿದ್ದು, 30 ಲಕ್ಷಕ್ಕೂ ಹೆಚ್ಚು ಸಫಾಯಿ ಕರ್ಮಚಾರಿಗಳಿಗೆ ಪ್ರಯೋಜನವಾಗಿದೆ. ಇದಲ್ಲದೆ, ತಾಯಿ ಹೆಸರಿನಲ್ಲಿ ಒಂದು ಮರ (ಏಕ್ ಪೆಡ್ ಮಾ ಕೆ ನಾಮ್ ) ಅಭಿಯಾನದ ಅಡಿಯಲ್ಲಿ 45 ಲಕ್ಷ ಸಸಿಗಳನ್ನು ಈಗಾಗಲೇ ನೆಡಲಾಗಿದೆ.

Post a Comment

Previous Post Next Post