[ಲೆಬನಾನ್‌ನಲ್ಲಿ ತನ್ನ ಅನೇಕ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲಿ ಸೈನ್ಯ ಒಪ್ಪಿಕೊಂಡಿದೆ
ಇಸ್ರೇಲಿ ಸೈನ್ಯವು ದಕ್ಷಿಣ ಲೆಬನಾನ್ ಪ್ರವೇಶಿಸಿ 48 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಕೇವಲ 500 ಮೀಟರ್‌ಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಹಿಜ್ಬುಲ್ಲಾ ಹೋರಾಟಗಾರರು ಅವರ ಮುಂದೆ ನಿಂತಿದ್ದಾರೆ, ಇಸ್ರೇಲ್ ಸೈನಿಕರ ಮೇಲೆ ರಾಕೆಟ್‌ಗಳಿಂದ ದಾಳಿ ಮಾಡುತ್ತಿದ್ದಾರೆ.
ಹಿಜ್ಬುಲ್ಲಾ (Hezbollah) ಜೊತೆಗಿನ ಭೂ ಯುದ್ಧದಲ್ಲಿ ಇಸ್ರೇಲ್ (Israel) ಭಾರಿ ಹಿನ್ನಡೆ (Major Setback) ಅನುಭವಿಸಿದೆ. ಹಿಜ್ಬುಲ್ಲಾ ಹೋರಾಟಗಾರರು 14 ಇಸ್ರೇಲಿ ಸೈನಿಕರನ್ನು (Soldiers) ಕೊಂದಿದ್ದಾರೆ. ಇನ್ನೂ ಹಲವು ಯೋಧರು ಹುತಾತ್ಮರಾಗಿರುವುದು (Martyred) ಬೆಳಕಿಗೆ ಬರುತ್ತಿದೆ. 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ (Injured). ಆಕ್ರಮಣದ ಆರಂಭದ ನಂತರ ಲೆಬನಾನ್‌ನಲ್ಲಿ (Lebanon) ಇದೇ ಮೊದಲ ಘಟನೆಯಾಗಿದೆ. ಆದರೆ, ಇಸ್ರೇಲಿ ಸೈನ್ಯವನ್ನು ಸೋಲಿಸುವ ಮೂಲಕ ಹಿಜ್ಬುಲ್ಲಾ ಈ ಯುದ್ಧವನ್ನು ಗೆಲ್ಲಲು ಸಾಧ್ಯವಾಗುತ್ತದೆಯೇ?
ಇಸ್ರೇಲಿ ಸೈನ್ಯವು ದಕ್ಷಿಣ ಲೆಬನಾನ್‌ಗೆ ಪ್ರವೇಶಿಸಿ 48 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಕೇವಲ 500 ಮೀಟರ್‌ಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಹಿಜ್ಬುಲ್ಲಾ ಹೋರಾಟಗಾರರು ಅವರ ಮುಂದೆ ನಿಂತಿದ್ದಾರೆ, ಅವರು ರಾಕೆಟ್‌ಗಳಿಂದ ದಾಳಿ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಅಡೈಸೆಹ್ ಪಟ್ಟಣದಲ್ಲಿ ಇಸ್ರೇಲಿ ಪಡೆಗಳನ್ನು ಓಡಿಸಿರುವುದಾಗಿ ಹಿಜ್ಬುಲ್ಲಾ ಹೇಳಿಕೊಂಡಿದೆ. ಆದಾಗ್ಯೂ, ಅವರ ಅನೇಕ ಹೋರಾಟಗಾರರು ಈ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಇಸ್ರೇಲಿ ಪಡೆಗಳು ಲೆಬನಾನ್‌ಗೆ ಸುಮಾರು 400 ಮೀಟರ್‌ಗಳಷ್ಟು ಮುನ್ನಡೆದು ನಂತರ ಹಿಮ್ಮೆಟ್ಟಿದವು ಎಂದು ಲೆಬನಾನ್ನ ಸೇನೆಯು ಹೇಳಿಕೊಂಡಿದೆ.
ಇದನ್ನೂ ಓದಿ: ಇಸ್ರೇಲ್ ಗುಪ್ತಚರ ಸೇವೆ ಮೊಸಾದ್ನ ಪ್ರಧಾನ ಕಚೇರಿ ಮುಂದೆಯೇ ಭೀಕರ ಕ್ಷಿಪಣಿ ದಾಳಿ; ಬೃಹತ್ ಹಳ್ಳದ ವಿಡಿಯೋ ವೈರಲ್
ಇಸ್ರೇಲ್ ಸೈನಿಕರ ಮೇಲೆ ಮಾರಣಾಂತಿಕ ದಾಳಿ?
ಇದಾದ ನಂತರ ಇಸ್ರೇಲಿ ಆರ್ಮಿ IDF ಪರಿಸ್ಥಿತಿ 2006 ರಂತೆ ಇರಬಾರದು ಎಂದು ಸ್ಪಷ್ಟೀಕರಣವನ್ನು ನೀಡಿತು. ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಹಿಜ್ಬುಲ್ಲಾ ಜೊತೆಗಿನ ಭೂಯುದ್ಧವು ಮುಂದುವರೆಯುತ್ತಿದೆ. ವೀಡಿಯೊದಲ್ಲಿ, ಸೈನಿಕರು ಮುಂದೆ ಸಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ವಲ್ಪ ಸಮಯದ ನಂತರ, ಹಿಜ್ಬುಲ್ಲಾ ಮೂರು ಇಸ್ರೇಲಿ ಟ್ಯಾಂಕ್ಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿತು. ಗಡಿಯ ಪೂರ್ವ ಭಾಗದಲ್ಲಿರುವ ಮರೂನ್ ಅಲ್-ರಾಸ್ ಗ್ರಾಮದ ಬಳಿ ಇರುವ ಈ ಮೆರ್ಕಾವಾ ಟ್ಯಾಂಕ್‌ಗಳನ್ನು ರಾಕೆಟ್‌ಗಳಿಂದ ಗುರಿಯಾಗಿಸಲಾಯಿತು. ಈ ಹಿಂದೆ ಇದೇ ಪ್ರದೇಶದಲ್ಲಿ ಇಸ್ರೇಲ್ ಸೈನಿಕರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿಕೊಂಡಿತ್ತು.ಭೂದಾಳಿಯಲ್ಲಿ ಹಿಜ್ಬುಲ್ಲಾ ಮೇಲುಗೈ?
ಮಧ್ಯಪ್ರಾಚ್ಯದ ಯಾವುದೇ ಪ್ರದೇಶದ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದು ಇಸ್ರೇಲಿ ಸೇನಾ ವಕ್ತಾರರು ಎಚ್ಚರಿಸಿದ್ದಾರೆ. ಇದನ್ನು ಇನ್ನೂ ಅರ್ಥಮಾಡಿಕೊಳ್ಳದ ನಮ್ಮ ಶತ್ರುಗಳು ಶೀಘ್ರದಲ್ಲೇ ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಆದರೆ, ಭೂದಾಳಿಯಲ್ಲಿ ಹಿಜ್ಬುಲ್ಲಾ ಮೇಲುಗೈ ಸಾಧಿಸುತ್ತಿರುವ ರೀತಿಯಲ್ಲಿ, ಇಸ್ರೇಲ್ ಹಿಜ್ಬುಲ್ಲಾದಿಂದ ಸೋಲನ್ನು ಎದುರಿಸಬೇಕಾದಾಗ 2006ರಂತಹ ಪರಿಸ್ಥಿತಿ ಉದ್ಭವಿಸಬಹುದು ಎಂದು ಭಯಪಡಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಹಿಜ್ಬುಲ್ಲಾಗೆ ಲೆಬನಾನ್ ಜನರ ಬೆಂಬಲ!
ಅಲ್ಜಜೀರಾ ವರದಿಯ ಪ್ರಕಾರ, ಇಸ್ರೇಲಿ ಸೈನ್ಯವು ಲೆಬನಾನ್‌ನಲ್ಲಿ ಉಳಿದುಕೊಂಡರೆ, ಇಸ್ರೇಲ್ ರಾಕೆಟ್ ದಾಳಿಗಳನ್ನು ನಡೆಸುವುದಿಲ್ಲ ಅಥವಾ ಆ ಪ್ರದೇಶಗಳಲ್ಲಿ F-35 ಯುದ್ಧ ವಿಮಾನಗಳನ್ನು ಬಳಸುವುದಿಲ್ಲ ಎಂದು ಹಿಜ್ಬುಲ್ಲಾಗೆ ತಿಳಿದಿದೆ. ಏಕೆಂದರೆ ಇಂತಹ ಬಾಂಬ್ ದಾಳಿ ನಡೆಸಿದರೆ ಇಸ್ರೇಲಿ ಸೈನಿಕರ ಪ್ರಾಣಕ್ಕೇ ಅಪಾಯವಿದೆ. ಮತ್ತೊಂದೆಡೆ, ಹಿಜ್ಬುಲ್ಲಾ ವಿಮಾನ ವಿರೋಧಿ ಕ್ಷಿಪಣಿಗಳನ್ನು ಹೊಂದಿದ್ದು, ಅದು ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು. ಇದಲ್ಲದೆ, ಹಿಜ್ಬುಲ್ಲಾ ಹೋರಾಟಗಾರರಿಗೆ ಈ ಪ್ರದೇಶಗಳು ಹೆಚ್ಚು ಪರಿಚಿತವಾಗಿವೆ. ಅವರು ಗೆರಿಲ್ಲಾ ಯುದ್ಧದಲ್ಲಿ ತರಬೇತಿ ಪಡೆದಿದ್ದಾರೆ. ಆದ್ದರಿಂದ ಅವರು ಇಸ್ರೇಲಿ ಸೈನಿಕರನ್ನು ಮೀರಿಸಬಹುದು. ಅವರು ಇಸ್ರೇಲ್ ಅನ್ನು ಎದುರಿಸಿದರೆ, ಲೆಬನಾನ್ ಜನರ ಬೆಂಬಲವೂ ಸಿಗುತ್ತದೆ.
ಈ ನಡುವೆ ಇರಾನ್ ಮಂಗಳವಾರ ತಡರಾತ್ರಿ, ಇಸ್ರೇಲ್‌ನ ಎರಡು ಮಿಲಿಟರಿ ನೆಲೆಗಳು ಮತ್ತು ಇಸ್ರೇಲ್‌ನ ಗುಪ್ತಚರ ಸೇವೆಯಾದ ಮೊಸಾದ್‌ನ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಸುಮಾರು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತು. ಮಿಸೆಲ್ಸ್ ದಾಳಿಯಿಂದ ಮೊಸ್ಸಾದ್‌ನ ಪ್ರಧಾನ ಕಚೇರಿಯ ಹೊರಗೆ ದೊಡ್ಡ ಹಳ್ಳ ಬಿದ್ದಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Post a Comment