Shivamogga Airport: ಇನ್ನೂ 2 ವರ್ಷ ಪೂರೈಸದ ಶಿವಮೊಗ್ಗ ಏರ್‌ಪೋರ್ಟ್‌ಗೆ ಬಿತ್ತು ಭಾರೀ ದಂಡ! ಮೋದಿ ಉದ್ಘಾಟಿಸಿದ ವಿಮಾನ ನಿಲ್ದಾಣದಲ್ಲಿ ಆಗಿದ್ದೇನು?

ಶಿವಮೊಗ್ಗ ವಿಮಾನನಿಲ್ದಾಣ

 ಕೆಲ ತಿಂಗಳ ಹಿಂದೆ ಅಂದರೆ ಕಳೆದ ಜುಲೈ 10ರಿಂದ 12ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಆಗ ಅಧಿಕಾರಿಗಳಿಗೆ ಅಲ್ಲಿ ನಿರ್ವಹಣೆ ಕೊರತೆ ಗಮನಕ್ಕೆ ಬಂದಿತ್ತು.

ಶಿವಮೊಗ್ಗ: ಪ್ರಸ್ತುತ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂದು ಕರೆಯಲ್ಪಡುವ ಶಿವಮೊಗ್ಗ (Shivamogga) ವಿಮಾನ ನಿಲ್ದಾಣ ಕಾಮಗಾರಿಗೆ 15 ಜೂನ್ 2020 ರಂದು ರಾಜ್ಯದ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yadiyurappa) ಶಂಕು ಸ್ಥಾಪನೆ ಮಾಡಿದ್ದರು. ಒಟ್ಟು ಎರಡು ಹಂತದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣದ ಮೊದಲ ಹಂತವನ್ನು 27 ಫೆಬ್ರವರಿ 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಈ ನಿಲ್ದಾಣಕ್ಕೆ ಕನ್ನಡ ಶ್ರೇಷ್ಠ ಕವಿ ಕುವೆಂಪು (Kuvempu) ಅವರ ಹೆಸರನ್ನಿಟ್ಟು ನಾಮಕರಣ ಮಾಡಲಾಗಿತ್ತು. ಆದರೆ ಇದೀಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರೋಬ್ಬರಿ 20 ಲಕ್ಷ ದಂಡ ವಿಧಿಸಲಾಗಿದೆ.

ಇನ್ನು ಎರಡು ವರ್ಷವೂ ಪೂರೈಸದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗ ಒಂದು ಸಂಕಷ್ಟ ಎದುರಾಗಿದೆ. ವಿಮಾನ ನಿಯಮ ಕಾಯ್ದೆ ಉಲ್ಲಂಘಿಸಿದ್ದಕ್ಕೆ ವಿಮಾನಯಾನ ನಿರ್ದೇಶನಾಲಯವು ನೋಟಿಸ್‌ ಜಾರಿ ಮಾಡಿದೆ 20 ಲಕ್ಷ ರೂ ದಂಡ ವಿಧಿಸಿದೆ. ಹಾಗೆಯೇ ಈ ದಂಡವನ್ನು 30 ದಿನಗಳ ಒಳಗೆ ಪಾವತಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Savarkar Row: ಸಾವರ್ಕರ್ ಗೋಮಾಂಸ ತಿಂತಿದ್ದರು ಎಂದ ದಿನೇಶ್ ಗುಂಡೂರಾವ್, ಬ್ರಾಹ್ಮಣ ತಂದೆ ಹೇಳಿದ್ದೋ? ಮುಸ್ಲಿಂ ಪತ್ನಿ ಹೇಳಿದ್ದೋ? ಅಂತ ಬಿಜೆಪಿ ಕೆಂಡ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳಿಂದ ತಪಾಸಣೆ

ಕೆಲ ತಿಂಗಳ ಹಿಂದೆ ಅಂದರೆ ಕಳೆದ ಜುಲೈ 10ರಿಂದ 12ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಆಗ ಅಧಿಕಾರಿಗಳಿಗೆ ಅಲ್ಲಿ ನಿರ್ವಹಣೆ ಕೊರತೆ ಗಮನಕ್ಕೆ ಬಂದಿತ್ತು. ಅಗತ್ಯ ಸಂಖ್ಯೆಯ ಉಸಿರಾಟದ ಉಪಕರಣಗಳು, ರಕ್ಷಣಾ ಉಡುಪು ಇಲ್ಲದಿರುವುದು ಹಾಗೂ ಅಗ್ನಿಶಾಮಕ ವಿಭಾಗದಲ್ಲಿ 18 ಸಿಬ್ಬಂದಿ ಇದ್ದಾರೆ ಎಂದು ವರದಿ ಮಾಡಲಾಗಿತ್ತು. ಹಾಗೆಯೇ ಹಾಜರಾತಿ ಪುಸ್ತಕದ ಪರಿಶೀಲನೆ ವೇಳೆ 13 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಕ್ರಾಶ್ ಫೈರ್, ಟೆಂಡರ್ ಫೈರ್ ಇಂಜಿನ್ ನಿರ್ವಹಣೆಗೆ ಸಿಬ್ಬಂದಿ ಇಲ್ಲ. ಸಿಎಫ್‌ಟಿ ವಾಹನ ಟೆಸ್ಟಳ ರೆಕಾರ್ಡ್ ಇರಲಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

 ಸುರಕ್ಷತಾ ಕ್ರಮ ನಿರ್ಲಕ್ಷಿಸಿದ ಅಧಿಕಾರಿಗಳು!

ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನಾಗರಿಕ ವಿಮಾಯಾನ ನಿರ್ದೇಶನಾಲಯ ದಂಡ ವಿಧಿಸಿದ್ದು, ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ಏಕೈಕ ವಿಮಾನ ನಿಲ್ದಾಣ ಆಗಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗ ದಂಡದ ಬಿಸಿ ತಟ್ಟಿದೆ. ಇನ್ನು ಜುಲೈ ತಿಂಗಳಲ್ಲಿ ನಡೆದ ಡಿಜಿಸಿಎ ಅಧಿಕಾರಿಗಳ ತಪಾಸಣೆಯಲ್ಲಿ ರನ್ ವೇ ಸೇರಿದಂತೆ ಅನೇಕ ಸುರಕ್ಷತೆ ಕ್ರಮಗಳನ್ನು ಅನುಸರಿಸದೇ ಇರುವುದು ಕಂಡುಬಂದಿದೆ. ತಪಾಸಣೆ ಬಳಿಕ ಡಿಜಿಸಿಎ ಅಧಿಕಾರಿಗಳು ನ್ಯೂನತೆ ಕುರಿತು ಉತ್ತರ ನೀಡುವಂತೆ ಹೇಳಿದ್ದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಪೈಸ್‌ಜೆಟ್ ಸೇವೆ ಆರಂಭ

ವಿಶೇಷವೇನೆಂದರೆ ಸ್ಪೈಸ್‌ಜೆಟ್ ಸೇವೆಯು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಎರಡು ನಗರಗಳಿಗೆ ಸಂಪರ್ಕ ಕಲ್ಪಿಸುವುದು ದೃಢಪಟ್ಟಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡಾ ಶುರುವಾಗಿದೆ. ಇನ್ನು ಈ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು ಚೆನೈ ಮತ್ತು ಹೈದರಾಬಾದ್ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುತ್ತಿದೆ. ಹೊಸ ವಿಮಾನದ ಸಂಚಾರವು ಅಕ್ಟೋಬರ್ 10ರಿಂದ ಪ್ರಾರಂಭವಾಗಲಿದೆ. ಇದರ ಪ್ರಯಾಣ ದರ 4,123 ರೂಪಾಯಿಯಿಂದ ಆರಂಭವಾಗಲಿದೆ.

ಇದನ್ನೂ ಓದಿ: BJP-JDS ಮೈತ್ರಿಗೆ ಶಾಕ್ ಕೊಟ್ಟ ದೇವೇಗೌಡ! ದಸರಾ ವೇದಿಕೆಯಲ್ಲೇ ಸಿದ್ದರಾಮಯ್ಯಗೆ ಬಹುಪರಾಕ್! ಸಿಎಂ ಫುಲ್ ಖುಷ್!

 ಸಂಸದ ಬಿವೈ ರಾಘವೇಂದ್ರ ಹೇಳಿದ್ದೇನು?

ನಿಗದಿಪಡಿಸಿರುವ ಮಾನದಂಡದ ಅನ್ವಯ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಹಾಗೂ ಭದ್ರತಾ ಸವಲತ್ತುಗಳನ್ನು ಕಲ್ಪಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯನ್ನು ಇತ್ತೀಚೆಗೆ ಭೇಟಿ ಮಾಡಿ ಈ ಬಗ್ಗೆ ತಿಳಿಸಿದ್ದೇನೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.

 ಕೆಲ ತಿಂಗಳ ಹಿಂದೆ ಅಂದರೆ ಕಳೆದ ಜುಲೈ 10ರಿಂದ 12ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಆಗ ಅಧಿಕಾರಿಗಳಿಗೆ ಅಲ್ಲಿ ನಿರ್ವಹಣೆ ಕೊರತೆ ಗಮನಕ್ಕೆ ಬಂದಿತ್ತು.

Post a Comment

Previous Post Next Post