MUDA Scam| Bairati Suresh GED Notice? what did he say
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್‌ಗೆ ಜಾರಿ ನಿರ್ದೇಶನಾಲಯ (ED) ಶಾಕ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ ಆದರೆ ಬೈರತಿ ಸುರೇಶ್ ಈ ವಿಚಾರವಾಗಿ ಕಿಡಿಕಾರಿದ್ದಾರೆ. ಬೆಂಗಳೂರು)ರಾಜ್ಯ ರಾಜಕಾರಣದಲ್ಲಿ (State Politics) ಭಾರಿ ಸದ್ದು ಮಾಡಿರುವ ಮುಡಾ ಹಗರಣ (MUDA Scam) ವಿಚಾರದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಈವರೆಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕುಟುಂಬಕ್ಕೆ ಮಾತ್ರ ಕಂಟಕವಾಗಿದ್ದ ಮುಡಾ ಹಗರಣ ಇದೀಗ ಅವರ ಆಪ್ತರನ್ನೂ ಕಾಡುತ್ತಿದೆಯಾ ಎನ್ನುವ ಅನುಮಾನಗಳು ಮೂಡಲು ಆರಂಭವಾಗಿವೆ. ಹೌದು, ಈ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್‌ಗೆ (Bairati Suresh) ಜಾರಿ ನಿರ್ದೇಶನಾಲಯ (ED) ಶಾಕ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ ಆದರೆ ಬೈರತಿ ಸುರೇಶ್ ಈ ವಿಚಾರವಾಗಿ ಕಿಡಿಕಾರಿದ್ದಾರೆ.
ಇಡಿ ಅಧಿಕಾರಿಗಳು ಬೆಳಿಗ್ಗೆ ಹೆಬ್ಬಾಳ ನಿವಾಸಕ್ಕೆ ತೆರಳಿ ಸಚಿವ ಭೈರತಿ ಸುರೇಶ್ ಗೆ ನೋಟಿಸ್ ನೀಡಿದ್ದಾರೆ ಎಂದು ವರದಿಗಳು ಬಂದಿವೆ. ನವರಾತ್ರಿ ಬಳಿಕ ವಿಚಾರಣೆಗೆ ಬರುವುದಾಗಿ ಸಚಿವ ಭೈರತಿ ಸುರೇಶ್ ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ದ ಇಸಿಐಆರ್ ದಾಖಲಿಸಿದೆ. ಇದೀಗ ಸಚಿವ ಭೈರತಿ ಸುರೇಶ್ ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: BJP-JDS ಮೈತ್ರಿಗೆ ಶಾಕ್ ಕೊಟ್ಟ ದೇವೇಗೌಡ! ದಸರಾ ವೇದಿಕೆಯಲ್ಲೇ ಸಿದ್ದರಾಮಯ್ಯಗೆ ಬಹುಪರಾಕ್! ಸಿಎಂ ಫುಲ್ ಖುಷ್!
ಸಚಿವರ ಹೇಳಿದ್ದೇನು?
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ನನಗೆ ಈವರೆಗೂ ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದೆ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ.
ಜೋವಧೆ ಪ್ರಯತ್ನ ನಡೆಯುತ್ತಿದೆ
ಈ ಕುರಿತು ಮಾತನಾಡಿದ ಅವರು, ಇಡಿ ನನಗೆ ಯಾವುದೇ ನೋಟಿಸ್ ನೀಡಿಲ್ಲ. ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ಮನೆಗೂ ಇಡಿ ನೋಟಿಸ್ ಅಂಟಿಸಿಲ್ಲ ಇಡಿ ನೋಟಿಸ್ ಕೊಟ್ಟಿದೆ ಅನ್ನೋದು ಸುಳ್ಳು ಎಂದು ಹೇಳಿದ್ದಾರೆ.
ಸುಮ್ಮನೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮನೆಗೆ ನೋಟಿಸ್ ಅಂಟಿಸೋಕೆ ಅದೇನೋ ಪೋಸ್ಟ್ ಆಫೀಸಾ? ಮನೆಯಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ ಈ ರೀತಿ ಒಬ್ಬ ವ್ಯಕ್ತಿಯ ತೇಜೋವಧೆ ಮಾಡಬಾರದು ಎಂದು ಸಚಿವ ಭೈರತಿ ಸುರೇಶ್ ಕಿಡಿಕಾರಿದ್ದಾರೆ.

Post a Comment