MUDA Scam: ಸಿದ್ದರಾಮಯ್ಯ 5 ವರ್ಷವೂ ಸಿಎಂ ಆಗಿ ಇರುತ್ತಾರೆ! ಮುಖ್ಯಮಂತ್ರಿ ಖುರ್ಚಿ ಮೇಲೆ ಕಣ್ಣಿಟ್ಟವರಿಗೆ ಜಮೀರ್ ಟಾಂಗ್


 ಜಮೀರ್ ಖಾನ್, ಸಚಿವ

ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಸತ್ಯ ಏನೆಂದು ದೇವೇಗೌಡರಿಗೆ ತಿಳಿದಿದೆ ಹಾಗಾಗಿ ಅವರು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

 ಬೆಂಗಳೂರು: ಮುಡಾ ಹಗರಣದಲ್ಲಿ ((Muda Scam) ಸಿಲುಕಿರುವ ಸಿಎಂ ಸಿದ್ದರಾಮಯ್ಯನವರು (CM Siddaramaiah) ರಾಜೀನಾಮೆ ಕೊಡಬೇಕೆಂದು ವಿಪಕ್ಷದ ನಾಯಕರು (Opposition Leaders) ಆಗ್ರಹಿಸುತ್ತಿದ್ದಾರೆ. ಈ ನಡುವೆ ಇಂದು ಮೈಸೂರು ದಸರಾ (Mysore Dasara) ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ರಾಜೀನಾಮೆ ಕೇಳ್ತಾ ಇದ್ದ ಸ್ವಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಸತ್ಯ ಏನೆಂದು ದೇವೇಗೌಡರಿಗೆ ತಿಳಿದಿದೆ ಹಾಗಾಗಿ ಅವರು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಿಟಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಜಿಟಿ ದೇವೇಗೌಡರು ಮೈಸೂರಿನವರು ಅವರಿಗೆ ಅಲ್ಲಿನ ಸ್ಥಳೀಯ ವಿಚಾರ ಗೊತ್ತಿದೆ. ಮುಡಾ ಕುರಿತಾದ ಸತ್ಯ ಏನೆಂದು ಗೊತ್ತಿದೆ. ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರ ತಪ್ಪೇನು ಇಲ್ಲ. ಸತ್ಯ ಹೇಳಿದ್ದಕ್ಕೆ ಜಿಟಿ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಆರ್. ಅಶೋಕ್ ರಾಜೀನಾಮೆ ಕೊಡಲಿ

ಇನ್ನೊಂದೆಡೆ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ. ಮುಡಾ ಸೈಟ್ ಕೇವಲ ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ಮಾತ್ರ ಕೊಟ್ಟಿಲ್ಲ, ಬದಲಾಗಿ ಮುಡಾದಲ್ಲಿ 120 ಸೈಟ್ ಕೊಟ್ಟಿದ್ದಾರೆ ಎಂದಿದ್ದಾರೆ. ಬಿಜೆಪಿ ಕಾಲದಲ್ಲೇ ಸೈಟ್ ಕೊಟ್ಟಿರೋದು. ಇನ್ನೂ ವಿಪಕ್ಷದ ನಾಯಕ ಆರ್. ಅಶೋಕ ಅವರು 38 ಗುಂಟೆ ಜಮೀನು ವಾಪಸ್ ಕೊಟ್ಟಿದ್ದಾರೆ. ಅವರು ರಾಜೀನಾಮೆ ಕೊಡಬೇಕು. ಆರ್.ಅಶೋಕ್ ಮೇಲೆ ನೇರವಾದ ಆರೋಪವಿದೆ ಆದ್ರೆ ಸಿಎಂ ನೇರ ಪಾತ್ರ ಇಲ್ಲ. ಸಿದ್ದರಾಮಯ್ಯ ಹೆಸರಲ್ಲಿ ಇಲ್ಲ. ಸಿದ್ದರಾಮಯ್ಯನವರ ಧರ್ಮಪತ್ನಿಗೆ ಅವರ ಸಹೋದರ ಕೊಟ್ಟಿರೋದು. ಹಾಗಾಗಿ ಸಿಎಂ ರಾಜೀನಾಮೆ ಅಗತ್ಯ ಇಲ್ಲ

ಸಿಎಂ ಪಾಪುಲಾರಿಟಿ ಸಹಿಸೋಕಾಗದೆ ಕೆಳಗಿಳಿಸೋಕೆ ಹೊರಟಿದ್ದಾರೆ ಆದ್ರೆ ಅದು ಸಾಧ್ಯವಿಲ್ಲ, ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರ್ತಾರೆ ಎಂದರು.

ಇದನ್ನೂ ಓದಿ: MUDA Scam: ಸಿಎಂ ಅತ್ಯಾಪ್ತ ಬೈರತಿ ಸುರೇಶ್‌ಗೆ ಇಡಿ ನೋಟೀಸ್? ಕಿಡಿಕಾರಿದ ಸಚಿವ!

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ

ಇನ್ನೂ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಎಂದು ಡಿಕೆ ಶಿವಕುಮಾರ್ ಹಾಗೂ ನಮ್ಮ ನಾಯಕರು ಹೇಳಿದ್ದಾರೆ. ನೂರಕ್ಕೆ ನೂರು ಐದು ವರ್ಷ ಅವರೇ ಸಿಎಂ ಆಗಿರ್ತಾರೆ. ಸಿದ್ದರಾಮಯ್ಯನವರ ಪರ ಎಲ್ಲರ ಅಭಿಪ್ರಾಯ ಇದೇ. ಡಿಕೆ ಸುರೇಶ್ ಕೂಡ ಅದನ್ನೇ ಹೇಳಿದ್ದಾರೆ ಎಂದರು. ಬೇರೆ ಬೇರೆ ಕಾರಣಕ್ಕೆ ಸಚಿವರುಗಳು ಮೀಟಿಂಗ್ ಮಾಡಿರ್ತಾರೆ. ನೀವು ಏನೇನೋ ತೋರಿಸಿದರೆ ಏನು ಮಾಡೋಕಾಗಲ್ಲ. ಕುಮಾರಸ್ವಾಮಿ ಬೇಲ್ ನಲ್ಲಿದ್ದಾರೆ. ಹಾಗಿರುವಾಗ ಸಿಎಂ ರಾಜೀನಾಮೆ ಕೊಡಬೇಕು ಅಂತ ಹೇಳೋಕೆ ಅವರು ಯಾರು? ಎಂದು ಪ್ರಶ್ನಿಸಿದರು.

ಮುಂದಿನ ವರ್ಷ ಮತ್ತೆ ಚಾಮುಂಡೇಶ್ವರಿ ಪೂಜೆಗೆ ಶಕ್ತಿ ಕೊಡಲಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಿಮ್ಮದೇ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿಯವರು ಸೈಟ್ ಕೊಟ್ಟಿದ್ದಾರೆ. ಈಗ ರಾಜೀನಾಮೆ ಕೇಳೋಕೆ ನೈತಿಕತೆ ಇಲ್ಲ. ತನಿಖೆ ಆಗಲಿ ಸತ್ಯ ಹೊರಬರುತ್ತೆ ಎಂದರು. ನಮ್ಮ ಟಗರು ಮುಖದ ಮೇಲೆ ಏನಾದರೂ ಭಯ ಕಾಣ್ತಿದ್ಯ? ಟಗರು ಯಾವತ್ತಿದ್ರೂ ಟಗರೇ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

Post a Comment

Previous Post Next Post