Murder Case: ಪ್ರಿಯಕರನ ಜೊತೆ ಡಿಂಗ್ ಡಾಂಗ್, ಅಡ್ಡ ಬಂದ ಪತಿ ಮರ್ಡರ್! ಕಥೆ ಕಟ್ಟಿದ ಐನಾತಿ ಲೇಡಿಗೆ ಖಾಕಿ ಶಾಕ್!


 ಸಾಂದರ್ಭಿಕ ಚಿತ್ರ

ಪಾತಕಿ ಸಲ್ಮಾ ಎನ್ನುವವಳು ಜಾಫರ್ ಎಂಬುವವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸಲ್ಮಾ - ಜಾಫರ್ ಸರಸ ಸಲ್ಲಾಪ ನೋಡಿ ಸಾಧಿಕ್ ಬೇಸತ್ತಿದ್ದನು. ಪತ್ನಿ ಸಲ್ಮಾಗೆ ಸಾಕಷ್ಟು ಸಲ ಸಾಧಿಕ್ ವಾರ್ನಿಂಗ್ ಕೂಡ ಮಾಡಿದ್ದನಂತೆ. ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಸಾಧಿಕ್ ವಾರ್ನಿಂಗ್ ಮಾಡಿದ್ದನಂತೆ..

ಹಾವೇರಿ: ಬಾತ್ ರೂಂ ನಲ್ಲಿ (Bathroom) ಕಾಲು ಜಾರಿ ಬಿದ್ದು ತನ್ನ ಗಂಡ ಸತ್ತಿದ್ದಾನೆ (Husband Death) ಎಂದು ಕಥೆ ಕಟ್ಟಿದ್ದ ಪತ್ನಿಯ ಕಾಮಪುರಾಣ ಇದೀಗ ಬಟಾಬಯಲಾಗಿದೆ. ಹೌದು, ಈ ಪಾತಕಿ (Culprit) ತನ್ನ ಕಾಮದಾಹಕ್ಕೆ ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಹತ್ಯೆಗೈದಿದ್ದಾಳೆ. ಈ ಅಸಹ್ಯಕರ ಘಟನೆ ಹಾವೇರಿ (Haveri) ಜಿಲ್ಲೆಯ ಹಿರೆಕೇರೂರು (Hirekerur) ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

ಸಾಧಿಕ್ ಮತ್ತೂರು(30) ಕೊಲೆಯಾದ ದುರ್ದೈವಿ, ಸಲ್ಮಾ (26) ಹಾಗೂ ಜಾಫರ್ (28) ಬಂಧಿತ ಆರೋಪಿಗಳು. ಮಹಿಳೆ ಸಲ್ಮಾ ತನ್ನ ಪ್ರಿಯಕರ ಜಾಫರ್ ಜೊತೆ ಸೇರಿ ತಾಳಿ ಕಟ್ಟಿದ ಗಂಡ ಸಾಧಿಕ್ ಮತ್ತೂರುನನ್ನು ಕೊಲೆಗೈದಿದ್ದಾಳೆ. ಕಳೆದ ಸೆಪ್ಟೆಂಬರ್ 25 ರಂದು ಕೊಲೆ ಮಾಡಿದ್ದಾರೆ. ಈ ಕೊಲೆ ಪ್ರಕರಣವನ್ನು ಖಾಕಿಪಡೆ ಇದೀಗ ಭೇದಿಸಿದೆ.ಪಾತಕಿಯ ಕಾಮಪುರಾಣ

ಪಾತಕಿ ಸಲ್ಮಾ ಎನ್ನುವವಳು ಜಾಫರ್ ಎಂಬುವವನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸಲ್ಮಾ - ಜಾಫರ್ ಸರಸ ಸಲ್ಲಾಪ ನೋಡಿ ಸಾಧಿಕ್ ಬೇಸತ್ತಿದ್ದನು. ಪತ್ನಿ ಸಲ್ಮಾಗೆ ಸಾಕಷ್ಟು ಸಲ ಸಾಧಿಕ್ ವಾರ್ನಿಂಗ್ ಕೂಡ ಮಾಡಿದ್ದನಂತೆ. ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಸಾಧಿಕ್ ವಾರ್ನಿಂಗ್ ಮಾಡಿದ್ದನಂತೆ.. ಹೆಸರು ಬರೆದಿಟ್ಟು ಸಾಧಿಕ್ ಆತ್ಮಹತ್ಯೆ ಮಾಡಿಕೊಂಡರೆ ನಾವು ಜೈಲು ಪಾಲಾಗಬಹುದು ಎಂಬ ಆತಂಕ ಉಂಟಾದ ಹಿನ್ನಲೆಯಲ್ಲಿ ಪ್ರಿಯಕರ ಜಾಫರ್ ಜೊತೆ ಸೇರಿ ಸಾಧಿಕ್‌ ಸಾವಿಗೆ ಸಲ್ಮಾ ಮಹೂರ್ತ ಫಿಕ್ಸ್ ಮಾಡಿದ್ದಳು.

ಇದನ್ನೂ ಓದಿ: Gandhi Jayanti: ರಾಷ್ಟ್ರಧ್ವಜಕ್ಕಿಂತ ಮೇಲೆ ಹಾರಿದ ಈದ್ ಮಿಲಾದ್ ಬಾವುಟ! ಗಾಂಧಿ ಜಯಂತಿ ವೇಳೆ ತ್ರಿವರ್ಣ ಧ್ವಜಕ್ಕೆ ಅಪಮಾನ

ಹತ್ಯೆ ನಡೆಸಿದ್ದು ಹೇಗೆ?

ರಾತ್ರೋ ರಾತ್ರಿ ಸಾಧಿಕ್ ಕುತ್ತಿಗೆಗೆ ಹಗ್ಗ ಬಿಗಿದು, ತಲೆ ದಿಂಬು ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಸಾಧಿಕ್ ಇನ್ನೂ ಜೀವಂತ ಇರಬಹುದು ಎಂಬ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಸಲ್ಮಾ ಹಾಗೂ ಜಾಫರ್ ಮಚ್ಚಿನಿಂದ ಸಾಧಿಕ್ ತಲೆಗೆ ಹೊಡೆದಿದ್ದರು. ಬಳಿಕ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಗಂಡ ಸತ್ತಿರೋದಾಗಿ ಐನಾತಿ ಸಲ್ಮಾ ಕಥೆ ಕಟ್ಟಿದಳು.

 ಆ ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರ ವಿಚಾರಣೆ ವೇಳೆ ಗಂಡನ ಮರ್ಡರ್ ಬಗ್ಗೆ ಸಲ್ಮಾ ಹಾಗೂ ಜಾಫರ್ ಕಥೆ ಬಿಚ್ಚಿಟ್ಟಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಕೊಲೆ ಪಾತಕಿಗಳು ಜೈಲುಪಾಲಾಗಿದ್ದಾರೆ.

Post a Comment

Previous Post Next Post