Muda Case: ಸಿಎಂ ವಿರುದ್ಧ ಇಂದು ಮತ್ತೆ ನಡೆಯಲಿದೆ ಪ್ರಾಸಿಕ್ಯೂಷನ್ ವಿಚಾರಣೆ, ಸಿದ್ದರಾಮಯ್ಯ ಚಿತ್ತ ಹೈಕೋರ್ಟ್‌ನತ್ತ!


 [ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಈ ಪ್ರಕರಣದ ತೀರ್ಪನ್ನು ಇಂದಿಗೆ ಅಂದರೆ ಸೆಪ್ಟೆಂಬರ್‌ 2ಕ್ಕೆ ಮುಂದೂಡಿತ್ತು. ಇಂದು ಮೂಡಾ ನಿವೇಶನ ಹಂಚಿಕೆ ಕುರಿತ ಸುದೀರ್ಘ ವಾದ -ಪ್ರತಿವಾದದ ವಿಚಾರಣೆ ಮತ್ತು ತೀರ್ಪು ಇಂದು ಮಧ್ಯಾಹ್ನ 2.30ಕ್ಕೆ ಬರಲಿದೆ.

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿನ (Muda Scam) ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ (Governor) ಆದೇಶವನ್ನು ವಜಾಗೊಳಿಸುವಂತೆ ಮನವಿ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ (High Court) ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಕಳೆದ ಶನಿವಾರ (ಆಗಸ್ಟ್ 31) ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ನಡೆದಿತ್ತು.

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಈ ಪ್ರಕರಣದ ತೀರ್ಪನ್ನು ಇಂದಿಗೆ ಅಂದರೆ ಸೆಪ್ಟೆಂಬರ್‌ 2ಕ್ಕೆ ಮುಂದೂಡಿತ್ತು. ಇಂದು ಮೂಡಾ ನಿವೇಶನ ಹಂಚಿಕೆ ಕುರಿತ ಸುದೀರ್ಘ ವಾದ -ಪ್ರತಿವಾದದ ವಿಚಾರಣೆ ಮತ್ತು ತೀರ್ಪು ಇಂದು ಮಧ್ಯಾಹ್ನ 2.30ಕ್ಕೆ ಬರಲಿದೆ.

ಇದನ್ನೂ ಓದಿ: ‘OYO’ ಪದದ ನಿಜವಾದ ಅರ್ಥ ಏನು? ಓಯೋ ಫುಲ್‌ಫಾರ್ಮ್ ಗೊತ್ತಿಲ್ದೆ ನೀವು ರೂಂ ಬುಕ್ ಮಾಡಿದ್ರೆ ಫಸ್ಟ್ ಈ ಸುದ್ದಿ ಓದಿ!

ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಇಂದು ಬಹುತೇಕ ಎಲ್ಲರ ವಾದ ಮುಗಿಯುವ ಸಾಧ್ಯತೆ ಇದ್ದು, ಈತನ್ಮಧ್ಯೆ ಇಂದು ಪುನಃ ವಾದ ಮಂಡನೆಗೆ ಅಡ್ವೋಕೇಟ್ ಜನರಲ್ ಅವಕಾಶ ಕೇಳಿದ್ದಾರೆ. ಹೀಗಾಗಿ ಇಂದು ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ ವಾದ ನಡೆಸಲಿದ್ದಾರೆ, ಅಲ್ಲದೆ ಪ್ರತಿವಾದಿಗಳ ಪರ ವಕೀಲರಿಂದಲೂ ವಾದ ನಡೆಯುವ ಸಾಧ್ಯತೆ ಇದೆ.

ಈಗಾಗಲೇ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ತುಷಾರ್ ಮೆಹ್ತಾ, ಪ್ರತಿವಾದಿ ಪ್ರದೀಪ್ ಪರವಾಗಿ ಪ್ರಭುಲಿಂಗ ನಾವದಗಿ, ಸ್ನೇಹಮಯಿ ಕೃಷ್ಣ ಪರವಾಗಿ ಮಣೀಂದರ್ ಸಿಂಗ್ ಹಾಗೂ ಟಿ‌ ಜೆ ಅಬ್ರಾಹಂ ಪರವಾಗಿ ರಂಗನಾಥ್ ರೆಡ್ಡಿ ವಾದ ಮಂಡನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರಾಸಿಕ್ಯೂಷನ್ ಅರ್ಜಿ ನಿರ್ಣಾಯಕ ಹಂತಕ್ಕೆ ಬರುವ ಸಾಧ್ಯತೆ ಇದೆ.

ಶನಿವಾರ ನಡೆದ ವಿಚಾರಣೆಯಲ್ಲಿ ಏನಾಗಿತ್ತು?

ಕಳೆದ ಶನಿವಾರ ನಡೆದ ವಿಚಾರಣೆ ವೇಳೆ ಪ್ರೊ ರವಿವರ್ಮ ಕುಮಾರ್ ಅವರು ವಾದ ಮಂಡಿಸಿ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಎನ್ಎಸ್ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸಾಧ್ಯವಿಲ್ಲ, ಯಾಕೆಂದರೆ ಅರ್ಜಿದಾರರು ದೂರು ನೀಡುವಾಗ ದೇಶದಲ್ಲಿ ನೂತನ ಬಿಎನ್‌ಎಸ್ ಕಾಯ್ದೆ ಜಾರಿಗೆ ಬಂದಿರಲಿಲ್ಲ, ಆಗ ಇನ್ನೂ ಐಪಿಸಿ ಕಾಯ್ದೆ ಇತ್ತು. ಹೀಗಾಗಿ ರಾಜ್ಯಪಾಲರು ಅರ್ಟಿಕಲ್ 20 ಪರವಾಗಿ ಉಲ್ಲೇಖಿಸಿಲ್ಲ ಎಂದು ಹೇಳಿದ್ದರು.

ಆಗ ಮಧ್ಯ ಪ್ರವೇಶಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 17a ಮತ್ತು 19ರಲ್ಲಿ ವ್ಯತ್ಯಾಸಗಳಿವೆ. ರಾಜ್ಯಪಾಲರು ಕರ್ತವ್ಯದಂತೆ 17a ಉಲ್ಲೇಖಿಸಿದ್ದಾರೆ, ಕಾನೂನಿನ ಪ್ರಕಾರ ಗವರ್ನರ್ ನೋಟಿಸ್‌ ನೀಡುವ ಅಗತ್ಯ ಇಲ್ಲ. 17ಎ ಮತ್ತು 19 ಸಂದರ್ಭದಲ್ಲಿ ನೋಟಿಸ್‌ ನೀಡಬೇಕಿಲ್ಲ. ರಾಜ್ಯಪಾಲರು ವಿವೇಚನೆ ಬಳಸಿ ಅನುಮತಿ ನೀಡಿದ್ದಾರೆ, ಅಬ್ರಾಹಂ ಪ್ರಕರಣದಲ್ಲಿ ನೋಟಿಸ್ ನೀಡಲಾಗಿದೆ. ಯಾವ ಸೆಕ್ಷನ್‌ ಅಡಿ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ತನಿಖಾಧಿಕಾರಿ ನಿರ್ಧರಿಸ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: Sperm Donation: ಇಲ್ಲಿ ಗಂಡಸರ ವೀರ್ಯಕ್ಕೆ ಸಖತ್ ಡಿಮ್ಯಾಂಡ್! ವೀರ್ಯದಾನ ಮಾಡಿ ಕೈತುಂಬಾ ದುಡ್ಡು ಗಳಿಸಲು ಸಾಲುಗಟ್ಟಿ ನಿಂತಿದ್ದಾರೆ ಗಂಡೈಕ್ಲು!

 ಅಲ್ಲದೇ, ಬಿಎನ್‌ಎಸ್‌ ಉಲ್ಲೇಖಿಸಲಾಗಿದೆ ಅನ್ನೋದು ಅಪ್ರಸ್ತುತ. ಸಿಎಂ ಸಿದ್ದರಾಮಯ್ಯ ಯಾವುದೇ ಶಿಫಾರಸು ಮಾಡಿಲ್ಲ ಎಂದಿದ್ದಾರೆ, ಪಿಸಿ ಕಾಯಿದೆ 17a ಅಗತ್ಯವೇ ಇಲ್ಲ, ಅಭಿಯೋಜನೆ ನೀಡುವಾಗ ವಿವೇಚನೆ ಬಳಸಲಾಗಿದೆ ಅನ್ನೋದನ್ನ ತಿಳಿಸಬೇಕಿದೆ ಎಂದಿದ್ದ ತುಷಾರ್ ಮೆಹ್ತಾ, ನನ್ನ ಮತ್ತೊದು ವಾದ ಏನೆಂದರೆ ರಾಜ್ಯಪಾಲರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಹಾಗೂ ಸಚಿವ ಸಂಪುಟದ ತೀರ್ಮಾನವನ್ನ ಪರಿಗಣಿಸಬಾರದು ಎಂದರೆ ಇಲ್ಲಿ ಆರೋಪವಿರುವುದು ಸಿಎಂ ಮೇಲೆ. ಅವರ ಪತ್ನಿಯ ಅಸ್ತಿ ಇವರಿಗೆ ಅನ್ವಯ ಆಗಲ್ಲ ಎಂದರೆ, ಇದಕ್ಕೆ 17a ಅಡಿಯಲ್ಲಿ ಅನುಮತಿ ಬೇಕಾಗಿರಲಿಲ್ಲ. ಇದೊಂದು ಸೂಸೈಡ್ ವಾದ. ನಾನು ರಾಜ್ಯಪಾಲರ ಕಡತವನ್ನ ಇಲ್ಲಿ ಹಂಚಿಕೊಳ್ತೇನೆ, ಅರ್ಜಿದಾರರಿಗೂ ನೀಡ್ತಿನಿ ಎಂದು ಹೇಳಿದ್ದರು.

ಆಗಸ್ಟ್ 19ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌, ಆಗಸ್ಟ್ 29ರ ತನಕ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಅಧೀನ ನ್ಯಾಯಾಲಯಕ್ಕೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತ್ತು. ಗುರುವಾರ ಎರಡೂ ಕಡೆ ವಾದ ಆಲಿಸಿದ ನ್ಯಾಯಾದೀಶ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆಯನ್ನ ಆಗಸ್ಟ್ 31ಕ್ಕೆ ಮುಂದೂಡಿದ್ದರು. ಶನಿವಾರ ಬೆಳಗ್ಗೆ 10:30ಕ್ಕೆ ವಿಚಾರಣೆ ನಡೆಯುವ ತನಕ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದ್ದರು.

Post a Comment

Previous Post Next Post