ಸಚಿವ ಜಮೀರ್ (ಸಂಗ್ರಹ ಚಿತ್ರ)
ಅಲ್ಪ ಸಂಖ್ಯಾತರಲ್ಲಿ ಶಿಕ್ಷಣ ಕಡಿಮೆ. ನಾನು KAS ಆಗಬಹುದಿತ್ತು, IPS ಆಗಬಹುದಿತ್ತು. ಆದರೆ ಶಿಕ್ಷಣ ಇಲ್ಲದಿದ್ದರೆ ಏನೂ ಮಾಡೋಕೆ ಆಗಲ್ಲ. ನಾನು SSLC ಪೂರ್ಣ ಮುಗಿಸಿಲ್ಲ” ಅಂತ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಹುಬ್ಬಳ್ಳಿ: ನಾನೊಬ್ಬ ಮುಸ್ಲಿಂ (Muslim) ಆಗಿದ್ದರೂ ಮೊದಲು ಹಿಂದೂಸ್ತಾನಿ, ನಾನು ಕನ್ನಡಿಗ, ಆಮೇಲೆ ನಾನು ಮುಸ್ಲಿಂ ಅಂತ ವಸತಿ ಸಚಿವ ಬಿಝಡ್ ಜಮೀರ್ ಅಹಮ್ಮದ್ ಖಾನ್ (BZ Zameer Ahmed Khan) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮೌಲಾನಾ ಅಜಾದ್ ಪದವಿ ಪೂರ್ವ ಕಾಲೇಜ್ ಉದ್ಘಾಟನೆ ವೇಳೆ ಭಾಷಣ ಮಾಡಿದ ಜಮೀರ್, ನನ್ನದು ಕನ್ನಡ (Kannada) ಮಾತೃಭಾಷೆ. ನಾನು ಕಾಂಗ್ರೆಸ್‌ಗೆ (Congress) ಬಂದ ಮೇಲೆ ಮಂತ್ರಿ ಮಾಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ ಅಂತ ಹೇಳಿದ್ದಾರೆ. ಅಲ್ಪ ಸಂಖ್ಯಾತರಲ್ಲಿ ಶಿಕ್ಷಣ ಕಡಿಮೆ ಎಂದಿರುವ ಅವರು, ನಾನು KAS ಆಗಬಹುದಿತ್ತು, IPS ಆಗಬಹುದಿತ್ತು. ಆದರೆ ಶಿಕ್ಷಣ ಇಲ್ಲದಿದ್ದರೆ ಏನೂ ಮಾಡೋಕೆ ಆಗಲ್ಲ. ನಾನು SSLC ಪೂರ್ಣ ಮುಗಿಸಿಲ್ಲ ಅಂತ ಜಮೀರ್ ಅಹ್ಮದ್ ಹೇಳಿದ್ದಾರೆ.
ಅಲ್ಪಸಂಖ್ಯಾತರಲ್ಲಿ ಶಿಕ್ಷಣ ಕಡಿಮೆ ಅಂತ ಸಚಿವ ಜಮೀರ್ ಹೇಳಿದ್ದಾರೆ. ನಾನು KAS ಆಗಬಹುದಿತ್ತು, IPS ಆಗಬಹುದಿತ್ತು. ಶಿಕ್ಷಣ ಇಲ್ಲದಿದ್ದರೆ ಏನೂ ಮಾಡೋಕೆ ಆಗಲ್ಲ. ಆದರೆ ನಾನು SSLC ಪೂರ್ಣ ಮುಗಿಸಿಲ್ಲ ಅಂತ ಅವರು ಹೇಳಿದ್ರು. ನನಗೆ ವಿದ್ಯಾಬ್ಯಾಸ ಇಲ್ಲ ಅಂತಾ ಕೆಲ ಸಲ ಕಣ್ಣೀರು ಹಾಕಿದ್ದೇನೆ ಅಂತ ಜಮೀರ್ ಅಹ್ಮದ್ ತಮ್ಮ ಬೇಸರ ಹೊರಹಾಕಿದ್ರು.
ಸಿದ್ದರಾಮಯ್ಯ ಯಾವತ್ತಿದ್ದರೂ ನಮಗೆ ಮುಖ್ಯಮಂತ್ರಿ
ಇನ್ನು ಭಾಷಣದ ವೇಳೆಯೂ ಸಿಎಂ ಸಿದ್ದರಾಮಯ್ಯ ಪರ ಜಮೀರ್ ಬ್ಯಾಟ್ ಬೀಸಿದ್ರು. ಸಿದ್ದರಾಮಯ್ಯ ನಮಗೆ ಯಾವತ್ತಿಗೂ ಮುಖ್ಯಮಂತ್ರಿ. ಹಾಲಿ ಇದ್ರೂ, ಮಾಜಿ ಇದ್ರೂ ಅವರು ಮುಖ್ಯಮಂತ್ರಿ. ನಾನು ಅವರನ್ನು ಬಿಟ್ಟು ಯಾವತ್ತೂ ಕಾರ್ಯಕ್ರಮ ಮಾಡಿಲ್ಲ ಅಂತ ಹೇಳಿದ್ರು.
ಇದನ್ನೂ ಓದಿ: Prahlad Joshi: ಸಿದ್ದರಾಮಯ್ಯ ಹುಲಿ, ಟಗರು, ಕುರಿ ಏನಾದರೂ ಇರಲಿ, ಸಿಎಂ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ
ಕುಮಾರಸ್ವಾಮಿಗೆ ಬಡವರ ಬಗ್ಗೆ ಕಾಳಜಿ ಇಲ್ಲ
2018ರಲ್ಲಿ ನನಗಿಂತ ಸೀನಿಯರ್ ಇದ್ರೂ ನನ್ನ ಮಂತ್ರಿ ಮಾಡಿದ್ರು. ಜನರ ಋಣದಿಂದ ನಾನು ಮಂತ್ರಿ ಆಗಿದ್ದೇನೆ ಅಂತ ಜಮೀರ್ ಅಹ್ಮದ್ ಸ್ಮರಿಸಿಕೊಂಡ್ರು. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಅವರು, ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡಿತಿದೆ. ಕುಮಾರಸ್ವಾಮಿ ಅವರಿಗೂ ಬಡವರ ಬಗ್ಗೆ ಕಾಳಜಿ ಇಲ್ಲ ಅಂತ ಆರೋಪಿಸಿದ್ರು.
ಬಿಜೆಪಿಯವರು ಬರೀ ಹಿಂದೂ, ಮುಸ್ಲಿಂ ಅಂತಾರೆ
ಗ್ಯಾರಂಟಿ ಕೊಟ್ಟ ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ಕಾಳಜಿ ಇದೆ ಅಂತ ಜಮೀರ್ ಶ್ಲಾಘಿಸಿದ್ರು. ಕಾಂಗ್ರೆಸ್ ಪಕ್ಷದ ಸಾಧನೆ ಹೇಳಿ ಮತ ಕೇಳುತ್ತೀವಿ, ಆದ್ರೆ ಬಿಜೆಪಿಯವರು ಬರೀ ಹಿಂದೂ ಮುಸ್ಲಿಂ ಅಂತಾರೆ. ಅವರಿಗೆ ಯಾವ ಹಿಂದೂ ಮುಸ್ಲಿಂ ಬೇಕಾಗಿಲ್ಲ ಅಂತ ಜಮೀರ್ ಆರೋಪಿಸಿದ್ರು.
ಹಿಂದೂಸ್ತಾನ್ ಹಮಾರ ಎಂದ ಜಮೀರ್
ಹಿಂದೂಸ್ತಾನ ಹಮಾರಾ ಎಂದ ಜಮೀರ್ ಅಹ್ಮದ್, ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಎಲ್ಲಿದೆ ವಿಕಾಸ್ ಅಂತ ಮೋದಿ ಸ್ಟೈಲ್‌ನಲ್ಲೇ ಟಾಂಗ್ ಕೊಟ್ರು. ಜಾತಿ ಬೇಧ ಮಾಡೋರು ಮನುಷ್ಯರೇ ಅಲ್ಲ ಅಂತ ಜಮೀರ್ ವಾಗ್ದಾಳಿ ನಡೆಸಿದರು.
[ ಸಿದ್ದರಾಮಯ್ಯ ಟಾರ್ಗೆಟ್
ಇನ್ನು ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಜಮೀರ್, ಸಿದ್ದರಾಮಯ್ಯಗೆ ತೊಂದರೆ ಕೊಟ್ಟರೆ ಕಾಂಗ್ರೆಸ್ ಪತನವಾಗುತ್ತೆ ಅನ್ನೋ ಲೆಕ್ಕಾಚಾರ. ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಅನ್ನೋ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಅಂತ ಆರೋಪಿಸಿದ್ದರು. ಸಿದ್ದರಾಮಯ್ಯ ರಾಜ್ಯದ ಜನರ ಮುಖ್ಯಮಂತ್ರಿ. ಅಂಥವರ ವಿರುದ್ಧ ಯಾರೋ ಖಾಸಗಿ ವ್ಯಕ್ತಿ ಕೊಟ್ಟ ದೂರಿನ ಅನ್ವಯ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಹೀಗಾಗಿ ನಾವು ರಾಜಭವನ ಚಲೊ ಹೋರಾಟ ಮಾಡಿದೆವು ಅಂತ ಹೇಳಿದ್ದರು.

Post a Comment