[ಸಾಂದರ್ಭಿಕ ಚಿತ್ರ
ಇತ್ತೀಚೆಗೆ ಅಕ್ಕೂರು ಜಿ.ಪಂ ವ್ಯಾಪ್ತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಮುಖಂಡರ ಸಭೆ ನಡೆಸಿದ್ದರು. ಚನ್ನಪಟ್ಟಣ ಬೈ ಎಲೆಕ್ಷನ್ ವಿಚಾರಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಸಭೆ ನಡೆಸಿರೋದಕ್ಕೆ ಸಿಪಿ ಯೋಗೇಶ್ವರ್ ಟಾಂಗ್ ನೀಡಿದ್ದಾರೆ.
ಚನ್ನಪಟ್ಟಣ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ರಾಜೀನಾಮೆಯಿಂದ ತೆರವುಗೊಂಡಿರುವ ಚನ್ನಪಟ್ಟಣ ವಿಧಾನಸಭಾ (Channapatna Byelection) ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ (BJP JDS Alliance) ಮಧ್ಯೆ ಫೈಟ್ ನಡೆಯುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ಗೆ ಬಿಜೆಪಿಯಲ್ಲಿ ಸಿಪಿ ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾದರೆ, ಅತ್ತ ಹೇಗಾದರೂ ಮಾಡಿ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕು ಎಂದು ಜೆಡಿಎಸ್ ಪಣತೊಟ್ಟಿದೆ. ಇದರ ಭಾಗವಾಗಿಯೇ ಎಚ್‌ಡಿ ಕುಮಾರಸ್ವಾಮಿ ತಾನು ಗೆದ್ದ ಕ್ಷೇತ್ರದಲ್ಲಿ ಮತ್ತೊಮ್ಮೆ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ನಿಲ್ಲಿಸಿ ರಾಜಕೀಯದಲ್ಲಿ ಮುನ್ನೆಲೆಗೆ ತರುವ ಪಣ ತೊಟ್ಟಿದ್ದಾರೆ. ಆದರೆ ಸದ್ಯ ಸವಾಲಿರುವುದು ಪಕ್ಷದೊಳಗೆ ಅಲ್ಲ, ಬಿಜೆಪಿಯಿಂದ. ಬಿಜೆಪಿ ಜೆಡಿಎಸ್ ಮೈತ್ರಿಯಾಗಿರೋದ್ರಿಂದ ಎರಡೂ ಪಕ್ಷಗಳಿಗೆ ಕ್ಷೇತ್ರ ಉಳಿಸಿಕೊಳ್ಳುವುದೇ ಸವಾಲಾಗಿದೆ.
ಇದನ್ನೂ ಓದಿ: Sperm Donation: ಇಲ್ಲಿ ಗಂಡಸರ ವೀರ್ಯಕ್ಕೆ ಸಖತ್ ಡಿಮ್ಯಾಂಡ್! ವೀರ್ಯದಾನ ಮಾಡಿ ಕೈತುಂಬಾ ದುಡ್ಡು ಗಳಿಸಲು ಸಾಲುಗಟ್ಟಿ ನಿಂತಿದ್ದಾರೆ ಗಂಡೈಕ್ಲು!
ಈತನ್ಮಧ್ಯೆ ಚನ್ನಪಟ್ಟಣ ಬೈ ಎಲೆಕ್ಷನ್ ವಿಚಾರಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಸಭೆ ನಡೆಸಿರೋದಕ್ಕೆ ಸಿಪಿ ಯೋಗೇಶ್ವರ್ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ಅಕ್ಕೂರು ಜಿ.ಪಂ ವ್ಯಾಪ್ತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಮುಖಂಡರ ಸಭೆ ನಡೆಸಿದ್ದರು. ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು ಈ ಸಭೆಯನ್ನು ಆಯೋಜನೆ ಮಾಡಿದ್ದು, ಈ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಜೆಡಿಎಸ್ ಪರ ಮಾತನಾಡಿದ್ದರು.
ನಿಖಿಲ್ ಕುಮಾರಸ್ವಾಮಿ, ‘ಚನ್ನಪಟ್ಟಣದಲ್ಲಿ ಜನ ಜೆಡಿಎಸ್ ಚಿಹ್ನೆಗೆ ಮತ ಹಾಕಿದ್ದಾರೆ. ನಮ್ಮ ಕಾರ್ಯಕರ್ತರಲ್ಲಿಯೂ ಸಹ ಜೆಡಿಎಸ್ ಬಗ್ಗೆ ಒಲವಿದೆ. ಜೆಡಿಎಸ್ ಚಿಹ್ನೆಗೆ ಟಿಕೆಟ್ ಉಳಿಸಿಕೊಳ್ಳಲು ಒತ್ತಡವಿದೆ, ಕುಮಾರಸ್ವಾಮಿರವರು ಸಹ ಬರ್ತಾರೆ. ಚನ್ನಪಟ್ಟಣದ ಜೊತೆಗೆ ನಿರಂತರ ಸಂಪರ್ಕ ಇದೆ. ನಾನು ಸಂಘಟನೆ ಮಾಡ್ತೇನೆ, ಬೇರೆ ಆಲೋಚನೆ ಇಲ್ಲ ಎಂದು ಚನ್ನಪಟ್ಟಣದ ಸುಳ್ಳೇರಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Gold Rate Today: ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್! ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಬಂಗಾರ ಖರೀದಿಗೆ ಇದೇ ಉತ್ತಮ ಸಮಯ!
ಇದೀಗ ಇದೇ ವಿಚಾರವಾಗಿ ಮೈತ್ರಿ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದು, ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ನಯವಾಗಿಯೇ ಯೋಗೇಶ್ವರ್ ಟಾಂಗ್ ನೀಡಿದ್ದಾರೆ. ದೆಹಲಿ ಪ್ರವಾಸದ ಬಗ್ಗೆ ಮಾತನಾಡಿರುವ ಯೋಗೇಶ್ವರ್, ಚುನಾವಣೆ ಬಹುಶಃ ನವೆಂಬರ್‌ನಲ್ಲಿ ನಡೆಯಬಹುದು. ಹಾಗಾಗಿ ಆಗ ಟಿಕೆಟ್ ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ. ನಮ್ಮದು NDA ಮೈತ್ರಿ, ಹಾಗಾಗಿ ಯಾವುದೇ ಚಿಹ್ನೆಯಾದರು ಸರಿ, ಜೆಡಿಎಸ್ - ಬಿಜೆಪಿ ಯಾವುದೇ ಚಿಹ್ನೆಯಾದರು ಸ್ಪರ್ಧೆಗೆ ನಾನು ಸಿದ್ಧ. ಈ ಬಗ್ಗೆ ಕುಮಾರಸ್ವಾಮಿ - ಹಾಗೂ ನಮ್ಮ ವರಿಷ್ಠರು ನಿರ್ಧಾರ ಮಾಡಲಿ ಎಂದು ಹೇಳಿದ್ದಾರೆ.
ಆ ಮೂಲಕ ಯೋಗೇಶ್ವರ್ ಜೆಡಿಎಸ್ ನಿಂದಲೂ ತಾನು ಸ್ಪರ್ಧೆಗೆ ಸಿದ್ಧ ಎನ್ನುವ ಮೂಲಕ ಹೊಸ ದಾಳ ಉರುಳಿಸಿ ಟಿಕೆಟ್ ಫೈಟ್‌ಗೆ ಟ್ವಿಸ್ಟ್ ನೀಡಿದ್ದಾರೆ

Post a Comment