ಸಾಂದರ್ಭಿಕ ಚಿತ್ರ
ಮಧ್ಯ ಪ್ರದೇಶದ ಭೊಪಾಲ್‌ನಲ್ಲಿ ನಡೆದಿದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನ ನಿವೃತ ಉನ್ನತ ಅಧೀಕಾರಿಯೊಬ್ಬರು ಹನಿಟ್ರಾಪ್‌ಗೆ ಒಳಗಾಗಿದ್ದಾರೆ ಮತ್ತು ಅದರಿಂದ ಪಾರಾಗಲು ಭಾರೀ ಮೊತ್ತದ ಹಣ ಪಾವತಿಸಿರುವುದು ಬೆಳಕಿಗೆ ಬಂದಿದೆ.
ಭೊಪಾಲ್: ಭಾರತದ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ (Honey Trap) ಮೂಲಕ ಹಣ (Money) ಪೀಕುವುದು, ಸರ್ಕಾರದ ಉನ್ನತ ಗೌಪ್ಯ ಮಾಹಿತಿಗಳನ್ನು (Confidential Information) ದೋಚುವ ಖದೀಮರ ಸಂಖ್ಯೆ ಅಧಿಕವಾಗುತ್ತಲೆ ಇದೆ. ಮೊದ ಮೊದಲು ಸೈನಿಕರನ್ನು ಮತ್ತು ರಾಜಕಾರಣಿಗಳನ್ನು (Politicians) ಗುರಿಯಾಗಿಸಿ ನಡೆಯುತ್ತಿದ್ದ, ಈ ಹನಿಟ್ರ್ಯಾಪ್‌ಗಳು ಇಂದು ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳನ್ನು ಗರಿಯಾಗಿಸಿಕೊಂಡು ವಿಪರೀತವಾಗಿ ನಡೆಯುತ್ತಿವೆ.
ಸದ್ಯ ಅಂತಹದ್ದೇ ಘಟನೆಯೊಂದು ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನ ನಿವೃತ ಉನ್ನತ ಅಧೀಕಾರಿಯೊಬ್ಬರು ಹನಿಟ್ರಾಪ್‌ಗೆ ಒಳಗಾಗಿದ್ದಾರೆ ಮತ್ತು ಅದರಿಂದ ಪಾರಾಗಲು ಭಾರೀ ಮೊತ್ತದ ಹಣ ಪಾವತಿಸಿರುವುದು ಬೆಳಕಿಗೆ ಬಂದಿದೆ.
27 ಕ್ಕೂ ಅಧಿಕ ವಿಡಿಯೋ
ಹನಿಟ್ರ್ಯಾಪ್ ತಂಡವು ಹೊಟೇಲ್ ಒಂದರಲ್ಲಿ ರಷ್ಯಾ ಮೂಲದ ಮಹಿಳೆ ಜೊತೆಗೆ ನಿವೃತ ಅಧಿಕಾರಿಯ 27ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ಚಿತ್ರಿಕರಣ ಮಾಡಿಕೊಂಡಿದ್ದಾರೆ. ನಂತರ ಆ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಾಗಿ ಅಧಿಕಾರಿಯನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ. ಬ್ಲಾಕ್‌ಮೇಲ್‌ಗೆ ಒಳಗಾದ ನಿವೃತ್ತ ಅಧಿಕಾರಿ 1 ಕೋಟಿ ಹಣವನ್ನು ಆ ತಂಡಕ್ಕೆ ನೀಡಿದ್ದಾರೆ ಎನ್ನಲಾಗಿದೆ.
ಹೋಟೆಲ್‌ಗೆ ಆಹ್ವಾನಿಸಿ ರಷ್ಯಾ ಹುಡುಗಿಯೊಂದಿಗೆ ವಿಡಿಯೋ
ಆದರಲ್ಲೂ, ಹನಿಟ್ರ್ಯಾಪ್ ತಂಡವು ಬಿಹೆಚ್ಇಎಲ್‌ನ ನಿವೃತ ಅಧಿಕಾರಿಯನ್ನು ಹೋಟೆಲ್‌ಗೆ ಆಹ್ವಾನಿಸಿ, ಬಳಿಕ ರಷ್ಯಾ ಹುಡುಗಿಯರನ್ನು ಬಳಸಿಕೊಂಡು ಅಶ್ಲೀಲ ವಿಡಿಯೋ ಮಾಡಿ ಅಧಿಕಾರಿಯನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ. ಆದರಲ್ಲೂ ತಂಡದ ಒಬ್ಬ ಸದಸ್ಯ ತಾನು ಮಧ್ಯ ಪ್ರದೇಶದ ಅಪರಾಧ ವಿಭಾಗದ ಅಧಿಕಾರಿ ಎಂದು ನಿವೃತ್ತ ಅಧಿಕಾರಿಯನ್ನು ಬಂಧಿಸುವ ಬೆದರಿಕೆಯನ್ನು ಸಹ ಹಾಕಿದ್ದಾನೆ ಎನ್ನಲಾಗಿದೆ.
ಸ್ಥಳೀಯ ಪೊಲೀಸರಿಗೆ ದೂರು
ಹನಿಟ್ರ್ಯಾಪ್ ತಂಡದದಿಂದ ಬೆದರಿಕೆಗಳ ಹೆಚ್ಚಾದ ಬೆನ್ನಲ್ಲೆ ನಿವೃತ ಅಧಿಕಾರಿಯು ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹನಿಟ್ರ್ಯಾಪ್ ತಂಡದ ಸದಸ್ಯರು ಮತ್ತು ರಷ್ಯಾ ಮಹಿಳೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: TMC MLA: ಟಿಕೆಟ್ ಇಲ್ಲದೆ ಪ್ರಯಾಣ; ಪ್ರಶ್ನಿಸಿದ ಅಧಿಕಾರಿಗೆ ಶಾಸಕನ ಬೆದರಿಕೆ ವಿಡಿಯೋ ವೈರಲ್
ಹೆಚ್ಚಾದ ಹನಿಟ್ರ್ಯಾಪ್‌ಗಳು:
ದೇಶದ ವಿವಿಧ ಭಾಗಗಳಲ್ಲಿ ಹನಿಟ್ರ್ಯಾಪ್ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಜನರು ಹನಿಟ್ರ್ಯಾಪ್ ಬಲೆಯಲ್ಲಿ ಬಿಳುವುದು ಸಾಮಾನ್ಯವಾಗಿದೆ. ತಂಡಗಳು ಸಾರ್ವಜನಿಕರ ಖಾಸಗಿ ಮಾಹಿತಿಗಳ ವಿಡಿಯೋ ಮತ್ತು ಇಮೇಜ್‌ಗಳನ್ನು ಬ್ಲ್ಯಾಕ್‌ಮೇಲ್ ಮಾಡುವವರು ಬಳಸಿಕೊಳ್ಳುವುದು ದೊಡ್ಡ ದಂಧೆಯಾಗಿದೆ.
ಕೋಪದಿಂದ ಹೆಂಡತಿಯ ಮೂಗನ್ನೇ ಕಚ್ಚಿದ ಗಂಡ
ಗಂಡ-ಹೆಂಡತಿಯ ಜಗಳ ಉಂಡು ಮಲಗೋ ತನಕ ಎಂಬ ಮಾತನ್ನ ನಾವೆಲ್ಲ ಕೇಳಿರಬಹುದು. ಆದ್ರೆ ಇಲ್ಲೊಂದು ಕಡೆ ರಕ್ಷಾಬಂಧನದ ವಿಚಾರವಾಗಿ ಆರಂಭವಾದ ಜಗಳ ಕಡೆಗೆ ಘೋರ ಕೃತ್ಯಕ್ಕೆ ಕಾರಣವಾಗಿದೆ.
ತವರಿಗೆ ಹೋಗಬೇಕೆಂದು ಹೆಂಡತಿಯ ಆಸೆ
ರಕ್ಷಾ ಬಂಧನದಂದು ಮನೆಗೆ ಹೋಗಬೇಕೆಂದು ಒತ್ತಾಯಿಸಿದ ವಿವಾಹಿತ ಮಹಿಳೆ ತನ್ನ ಪತಿಯೊಂದಿಗೆ ಜಗಳವಾಡಿದ್ದಾಳೆ. ಜಗಳಕ್ಕೆ ಕೋಪಗೊಂಡ ಪತಿ ಪತ್ನಿಯ ಮೂಗನ್ನೇ ಕಚ್ಚಿದ್ದಾನೆ. ಇನ್ನು ತಕ್ಷಣ ಆಕೆಯನ್ನು ಲಕ್ನೋ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು.
ರಕ್ಷಾಬಂಧನ ನೆಪದಲ್ಲಿ ಪತಿಯೊಂದಿಗೆ ಜಗಳ
ದೇಹತ್ ಕೊತ್ವಾಲಿ ಪ್ರದೇಶದ ಬನಿಯಾನಿಪುರ್ವಾ ನಿವಾಸಿ ಅನಿತಾ (ವಯಸ್ಸು 27) ಎಂಬವರು ಭಾನುವಾರ ಪತಿ ರಾಹುಲ್ಗೆ ಪೋಷಕರ ಮನೆಗೆ ಹೋಗುವಂತೆ ಒತ್ತಾಯಿಸುತ್ತಿದ್ದಳು. ಸದ್ಯ ನಿನ್ನನ್ನು ಮನೆಗೆ ಕಳುಹಿಸುವ ಪರಿಸ್ಥಿತಿ ಇಲ್ಲ ಎಂದು ಗಂಡ ಹೇಳುತ್ತಿದ್ದ. ಆದರೆ ಪತ್ನಿ ರಕ್ಷಾಬಂಧನ ನೆಪದಲ್ಲಿ ಪತಿಯೊಂದಿಗೆ ಜಗಳವಾಡಿದ್ದಾಳೆ. ಪತ್ನಿಯ ವಾದದಿಂದ ಕೋಪಗೊಂಡ ರಾಹುಲ್ ಅನಿತಾ ಅವರ ಮೂಗನ್ನೇ ಕಚ್ಚಿಬಿಟ್ಟಿದ್ದಾನೆ. ಆ ಬಳಿಕ ಅನಿತಾ ಸ್ಥಿತಿ ಹದಗೆಟ್ಟಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಮನೆಯಲ್ಲಿದ್ದ ಇತರರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ಮತ್ತೆ ತವರು ಮನೆಗೆ ಹೋಗಬೇಕು
ಈ ಘಟನೆ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೃಪೇಂದ್ರ ತಿಳಿಸಿದ್ದು, ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅನಿತಾ ಕೆಲ ದಿನಗಳ ಹಿಂದೆಯಷ್ಟೇ ಮಾವನ ಮನೆಗೆ ವಾಪಸ್ಸಾಗಿದ್ದರು. ಭಾನುವಾರ ಮತ್ತೆ ತವರು ಮನೆಗೆ ಹೋಗುವುದಾಗಿ ಹಠ ಹಿಡಿದ ಘಟನೆಯಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

Post a Comment