North Korean: ಪ್ರವಾಹದ ವೇಳೆ ಸಾವು ತಡೆಯಲು ವಿಫಲವಾದ 30 ಅಧಿಕಾರಿಗಳಿಗೆ ಗಲ್ಲು; ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶ


 ಕಿಮ್ ಜಾಂಗ್ ಉನ್

 ಪ್ರವಾಹ ಮತ್ತು ಭೂಕುಸಿತಗಳನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣ 30 ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಈ ವಿಪತ್ತುಗಳಲ್ಲಿ ಸುಮಾರು 1,000 ಸಾವುಗಳು ಸಂಭವಿಸಿದೆ ಎಂದು ವರದಿಯಾಗಿದೆ.

 ಪ್ರಕೃತಿ ವಿಕೋಪಗಳು ಮಾನವನ ಶಕ್ತಿ ಮೀರಿದ್ದು, ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಮುಂದುವರಿದ ದೇಶಗಳೇ ಪ್ರವಾಹ-ಭೂಕಂಪನಕ್ಕೆ ತುತ್ತಾಗುತ್ತದೆ. ಪರಿಸರ ವಿಕೋಪಗಳಿಗೆ ವಿಧಿಯನ್ನೇ ಹೊಣೆ ಮಾಡಲಾಗುತ್ತದೆ, ಆದರೆ ಸರ್ವಾಧಿಕಾರಿಯ ಆಡಳಿತದಲ್ಲಿ ಬೇರೆಯದ್ದೇ ಕಾನೂನು. ಪ್ರವಾಹದ ಸಮಯದಲ್ಲಿ ಸಾವುಗಳನ್ನು ತಡೆಯಲು ವಿಫಲರಾದ 30 ಅಧಿಕಾರಿಗಳನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಗಲ್ಲಿಗೇರಿಸುವಂತೆ ಆದೇಶ ಹೊರಡಿಸಿದ್ದಾರಂತೆ. ಹಲವಾರು ದಕ್ಷಿಣ ಕೊರಿಯಾದ ಮಾಧ್ಯಮ ವರದಿಗಳು ಕಿಮ್ ಜಾಂಗ್ ಉನ್ ಅವರು 30 ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲು ಆದೇಶಿಸಿದ್ದಾರಂತೆ.

ಸಾವಿಗೆ ಕಾರಣವಾದವರಿಗೆ ಸಾವೇ ಶಿಕ್ಷೆ!

ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತಗಳನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣ 30 ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಈ ವಿಪತ್ತುಗಳಲ್ಲಿ ಸರಿಸುಮಾರು 1,000 ಸಾವುಗಳು ಸಂಭವಿಸಿದೆ ಎಂದು ವರದಿಯಾಗಿದೆ. ದಕ್ಷಿಣ ಕೊರಿಯಾದ ಚೋಸನ್ ಟಿವಿ ವರದಿಯ ಪ್ರಕಾರ, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪ ಆರೋಪವನ್ನೂ ಹೊರಿಸಲಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಮರಣದಂಡನೆಗಳು ನಡೆದಿವೆ ಎಂದು ವರದಿಯಾಗಿದೆ.

ಕಳೆದ ತಿಂಗಳ ಕೊನೆಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ 20 ರಿಂದ 30 ಸಿಬ್ಬಂದಿಯನ್ನು ಒಂದೇ ಸಮಯದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಎಂದು ಅಧಿಕಾರಿ ಹೇಳಿದ್ದಾರೆ. ಮರಣದಂಡನೆಗೊಳಗಾದ ಅಧಿಕಾರಿಗಳ ಗುರುತನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಉತ್ತರ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್ಎ) 2019 ರಿಂದ ಚಗಾಂಗ್ ಪ್ರಾಂತ್ಯದ ಪ್ರಾಂತೀಯ ಪಕ್ಷದ ಸಮಿತಿಯ ಕಾರ್ಯದರ್ಶಿ ಕಾಂಗ್ ಬಾಂಗ್-ಹೂನ್ ಅವರನ್ನು ಗಲ್ಲಿಗೇರಿಸಿದ ಅಧಿಕಾರಿಗಳಲ್ಲಿ ಒಬ್ಬರು ಎಂದು ವರದಿ ಮಾಡಿದೆ.

[ಭೀಕರ ಪ್ರವಾಹಕ್ಕೆ ತಲೆದಂಡ 

ಜುಲೈನಲ್ಲಿ ತೀವ್ರವಾದ ಮಳೆಯಿಂದ ಉತ್ತರ ಕೊರಿಯಾದಲ್ಲಿ ಭೂಕುಸಿತಗಳು ಮತ್ತು ಪ್ರವಾಹ ಸಂಭವಿಸಿತ್ತು. 4,000 ಮನೆಗಳ ಹಾನಿಗೊಳಗಾಗಿದ್ದವು, ಇದರಿಂದ 15000 ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಕಿಮ್ ಜಾಂಗ್ ಉನ್ ಸ್ವತಃ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ ನೆರೆಹೊರೆಗಳನ್ನು ಪುನರ್ನಿರ್ಮಿಸಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ತಾಯಂದಿರು, ಮಕ್ಕಳು, ವೃದ್ಧರು ಮತ್ತು ಅಂಗವಿಕಲ ಸೈನಿಕರಂತಹ ಗುಂಪುಗಳನ್ನು ಒಳಗೊಂಡಂತೆ 15,400 ಜನರಿಗೆ ಸರ್ಕಾರವು ಆಶ್ರಯವನ್ನು ಒದಗಿಸಿದೆ.

ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಉತ್ತರ ಕೊರಿಯಾ ಅಲ್ಲಗಳೆದಿದೆ. ಉತ್ತರ ಕೊರಿಯಾದ ಅಂತರಾಷ್ಟ್ರೀಯ ಖ್ಯಾತಿಗೆ ಧಕ್ಕೆ ತರಲು ಉದ್ದೇಶಿಸಲಾದ “ಸ್ಮೀಯರ್ ಅಭಿಯಾನ” ದ ಭಾಗವಾಗಿ ದಕ್ಷಿಣ ಕೊರಿಯಾ ಈ ವದಂತಿಗಳನ್ನು ಹರಡುತ್ತಿದೆ ಎಂದು ಅವರು ಆರೋಪಿಸಿದರು.

Post a Comment

Previous Post Next Post