Viral Video: ರೀಲ್ಸ್​ಗಾಗಿ ರೈಲ್ವೆ ಹಳಿ ಮೇಲೆ ಸೈಕಲ್, ಸಿಲಿಂಡರ್ ಇಟ್ಟು ಹುಚ್ಚಾಟ; ಯೂಟ್ಯೂಬರ್ ಗುಲ್ಜಾರ್ ಶೇಖ್ ಬಂಧನ


  ಉತ್ತರ ಪ್ರದೇಶದಲ್ಲಿ ಗುಲ್ಜಾರ್ ಶೇಖ್ ಎಂಬ ಯೂಟ್ಯೂಬರ್​ ಕಂಟೆಂಟ್​ಗಾಗಿ ಸಾವಿರಾರು ಜನರ ಪ್ರಾಣದ ಜೊತೆ ಆಟವಾಡಿದ್ದಾನೆ. ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ ಟ್ರೈನ್ ವಾಲ ಭಯ್ಯಾ ಎಂಬುವವರು ಗುಲ್ಜಾರ್ ಶೇಖ್‌ನ ಅಪಾಯಕಾರಿ ಚಟುವಟಿಕೆಗಳನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಲೈಕ್, ಕಾಮೆಂಟ್ ಮತ್ತು ಹೆಚ್ಚು ಜನ ವೀಕ್ಷಣೆ ಮಾಡಲಿ ಎಂಬ ಕಾಣಕ್ಕೆ ಜನರು ಅನೇಕ ಹುಚ್ಚಾಟಗಳಿಗೆ ಕೈ ಹಾಕೋದನ್ನು ನಾವು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲಿ ಗುಲ್ಜಾರ್ ಶೇಖ್ (Gulzar Sheikh) ಎಂಬ ಯೂಟ್ಯೂಬರ್​ (YouTuber) ಕಂಟೆಂಟ್​ಗಾಗಿ ಸಾವಿರಾರು ಜನರ ಪ್ರಾಣದ ಜೊತೆ ಆಟವಾಡಿದ್ದಾನೆ. ಯೂಟ್ಯೂಬ್​ನಲ್ಲಿ YouTube ಲೈಕ್ಸ್‌, ವೀವ್ಸ್‌, ಹಣಕ್ಕಾಗಿ ರೈಲ್ವೆ ಟ್ರ್ಯಾಕ್ (Railway Track) ಮೇಲೆ ಸೈಕಲ್‌, ಸಾಬೂನು, ಸಿಲಿಂಡರ್ ಮತ್ತು ಕಲ್ಲುಗಳಂತಹ ಹಲವು ವಸ್ತುಗಳನ್ನು ಇಟ್ಟು ವಿಡಿಯೋ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಅಂದು ಸಂಜಯ್ ದತ್​, ಇಂದು ಚಿರಂಜೀವಿ; ಅಭಿಮಾನಿಗಳನ್ನು ತಳ್ಳಿದ ನಟರು! ಇವರಿಗೆಲ್ಲಾ ಫ್ಯಾನ್ಸ್​ ಬೇಡ್ವಾ?Indian Railways: ರದ್ದುಗೊಂಡಿದ್ದ ಹಲವು ರೈಲುಗಳು ಪುನರಾರಂಭ, ಇಲ್ಲಿದೆ ಊರು-ರೈಲುಗಳ ವಿವರಜಲಾವೃತಗೊಂಡ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ಮಹಿಳೆ ಜೊತೆ ಪುರುಷರ ಗುಂಪಿನಿಂದ ಅನುಚಿತ ವರ್ತನೆ!ಎಣ್ಣೆ ಏಟಿನಲ್ಲಿ ಅಭಿಮಾನಿಗಳನ್ನ ತಳ್ಳಿದ್ರಾ ಸಂಜಯ್ ದತ್? ವಿಡಿಯೋ ಈಗ ಫುಲ್ ವೈರಲ್!ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ ಟ್ರೈನ್ ವಾಲ ಭಯ್ಯಾ ಎಂಬುವವರು ಗುಲ್ಜಾರ್ ಶೇಖ್‌ನ ಅಪಾಯಕಾರಿ ಚಟುವಟಿಕೆಗಳನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದರು. “ಗುಲ್ಜಾರ್ ಶೇಖ್ ಯೂಟ್ಯೂಬ್ ಹಣಕ್ಕಾಗಿ ರೈಲ್ವೆ ಟ್ರ್ಯಾಕ್​ ಮೇಲೆ ಅಪಯಕಾರಿ ವಸ್ತುಗಳನ್ನು ಇಡುತ್ತಿದ್ದಾನೆ ಅವರು ಸಾವಿರಾರು ಪ್ರಯಾಣಿಕರ ಜೀವಗಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ” ಎಂದು ಬರೆದಿದ್ದು, ಪ್ರಯಾಣಿಕರಿಗೆ ಆಗುವ ಅಪಾಯಗಳನ್ನು ಹೈಲೈಟ್ ಮಾಡಿದ್ದಾರೆ. ಈ ಪೋಸ್ಟ್ ಕಂಡ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ರೈಲ್ವೆ ಮತ್ತು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು.ಇದನ್ನೂ ಓದಿ: ಬಿಡುವು ನೀಡದೆ ಆರ್ಭಟಿಸುತ್ತಿದೆ ಭಾರೀ ಮಳೆ! ಮತ್ತೆ ರೆಡ್‌ ಅಲರ್ಟ್ ಘೋಷಣೆ! ಶಾಲಾ-ಕಾಲೇಜುಗಳಿಗೂ ರಜೆಯೂಟ್ಯೂಬರ್ ಅರೆಸ್ಟ್ಇಂತದ್ದೇ ಹಲವು ವಿಡಿಯೋಗಳನ್ನು ಮಾಡಿರುವ ಗುಲ್ಜಾರ್ ಶೇಖ್ ವಿರುದ್ಧ ಜನರು ಕ್ರಮಕ್ಕೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಯೂಟ್ಯೂಬರ್​ನನ್ನು ಬಂಧಿಸಲಾಗಿದೆ. ಲೀಗಲ್ ಹಿಂದೂ ಡಿಫೆನ್ಸ್, ಶೇಖ್ ವಿರುದ್ಧ ದೂರು ದಾಖಲಿಸಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಎಕ್ಸ್​ನಲ್ಲಿ ತಿಳಿಸಿದ್ದಾರೆ. ಆರೋಪಿ ಯೂಟ್ಯೂಬರ್ ಗುಲ್ಜಾರ್ ಶೇಖ್ ವಿರುದ್ಧ ದೂರು ದಾಖಲಾದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೂನಾವಾಲಾ ಪೋಸ್ಟ್ ಮಾಡಿದ್ದಾರೆ. “ರೈಲ್ ಜಿಹಾದಿ” ಗುಲ್ಜಾರ್ ಬಂಧನ. ರೈಲ್ ಜಿಹಾದಿಯನ್ನು ಅಧಿಕಾರಿಗಳು ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೇನೆ ಎಂದು ಪೂನವಾಲಾ ಹೇಳಿದರು ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಯುಪಿ ಪೊಲೀಸ್ ಮತ್ತು ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ದೂರು ನೀಡಿದ್ದ ಲೀಗಲ್ ಹಿಂದೂ ಡಿಫೆನ್ಸ್ಈ ಹಿಂದೆ, ಲೀಗಲ್ ಹಿಂದೂ ಡಿಫೆನ್ಸ್ ಅವರು ದಾಖಲಿಸಿದ ಸೈಬರ್-ಕ್ರೈಮ್ ದೂರಿನ ಬಗ್ಗೆ ಮಾಹಿತಿ ನೀಡಿದರು. ಲೀಗಲ್ ಹಿಂದೂ ಡಿಫೆನ್ಸ್ ಎಂಬುದು ಪೂನಾವಾಲಾ ಅವರು ಕಳೆದ ತಿಂಗಳು ಪ್ರಾರಂಭಿಸಿದ ಕಾನೂನು ಸ್ವಯಂಸೇವಕ ಗುಂಪು. ಭಾರತೀಯ ನ್ಯಾಯ ಸಂಹಿತಾ, 2023ರ ಅಡಿಯಲ್ಲಿ, ರೈಲನ್ನು ಹಳಿತಪ್ಪಿಸುವ ಪ್ರಯತ್ನದೊಂದಿಗೆ ಸಾರ್ವಜನಿಕ ಕಿಡಿಗೇಡಿತನವನ್ನು ಸೃಷ್ಟಿಸುವ ಕೃತ್ಯವಾಗಿದೆ. ಗುಲ್ಜಾರ್ ಶೇಖ್ ಕಾನೂನು ಉಲ್ಲಂಘನೆಯ ಕೃತ್ಯವನ್ನು ಎಸಗುತ್ತಿದ್ದಾರೆ. ಆರೋಪಿಯ ಕೃತ್ಯ ದೊಡ್ಡ ಸಾರ್ವಜನಿಕ ದುರಂತಕ್ಕೆ ಕಾರಣವಾಗಬಹುದು ಎಂದು ದೂರಿನಲ್ಲಿ ಹೇಳಲಾಗಿದೆ. ಅನೇಕ ಯೂಟ್ಯೂಬ್ ಚಾನೆಲ್‌ಗಳು ಲೈಕ್‌ಗಳು ಮತ್ತು ಶೇರ್‌ಗಳಿಗಾಗಿ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿವೆ, ತಮ್ಮ ವೀಡಿಯೊಗಳಿಂದ ಹೆಚ್ಚು ಹಣಗಳಿಸುತ್ತಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಗುಲ್ಜಾರ್ ಶೇಖ್​, ‘ಗುಲ್ಜಾರ್ ಇಂಡಿಯನ್ ಹ್ಯಾಕರ್’ ಎಂಬ ಚಾನಲ್ ನಡೆಸುತ್ತಿದ್ದ. ರೈಲ್ವೆ ಹಳಿಗಳ ಮೇಲೆ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವ ವಿಡಿಯೋಗಳೆ ಹೆಚ್ಚಿವೆ ಎಂದು ವರದಿಯಾಗಿದೆ. ಇಯರ್‌ಬಡ್‌, ಕೊಡಲಿ, ಸೈಕಲ್‌, ಗ್ಯಾಸ್‌ ಸಿಲಿಂಡರ್‌, ಕೋಳಿ, ಕಲ್ಲುಗಳು ಸೇರಿ ಅನೇಕ ವಸ್ತುಗಳನ್ನು ಇಟ್ಟು ವಿಡಿಯೋ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Post a Comment

Previous Post Next Post