ಸುಪ್ರೀಂ ಕೋರ್ಟ್
Supreme Court allows sub classification of SC ST for Reservation: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 1) ಮಹತ್ವದ ತೀರ್ಪು ನೀಡಿದ್ದು, ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಸಾಂವಿಧಾನಿಕ ಪೀಠವು 6:1 ರ ಬಹುಮತದೊಂದಿಗೆ ಎಸ್‌ಸಿ/ಎಸ್‌ಟಿ ವರ್ಗದೊಳಗೆ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ (ಒಳ ಮೀಸಲಾತಿ) ನೀಡಬಹುದು ಎಂದು ಹೇಳಿದೆ. ನವದೆಹಲಿ: ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ (Sub-Classification Of SC/ST Reservation) ಅವುಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಒಳ ಮೀಸಲಾತಿ ನೀಡುವುದಕ್ಕೆ ರಾಜ್ಯಗಳಿಗೆ ಇರುವ ಅಧಿಕಾರವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 1) ಮಹತ್ವದ ತೀರ್ಪು ನೀಡಿದ್ದು, ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಸಾಂವಿಧಾನಿಕ ಪೀಠವು 6:1 ರ ಬಹುಮತದೊಂದಿಗೆ ಎಸ್‌ಸಿ/ಎಸ್‌ಟಿ ವರ್ಗದೊಳಗೆ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ (ಒಳ ಮೀಸಲಾತಿ) ನೀಡಬಹುದು ಎಂದು ಹೇಳಿದೆ.7 ಕೋಟಿ ಮೌಲ್ಯದ ಜಮೀನು 4 ಲಕ್ಷ ರೂಗೆ ಡೀಲ್: ಇದು ಲಾಟರಿಯಲ್ಲ, ಖರೀದಿದಾರರಿಗೆ ಸಿಕ್ಕ ನ್ಯಾಯ
PUCಯಲ್ಲಿ 2 ಸಲ ಫೇಲ್, NEET ಎಕ್ಸಾಂನಲ್ಲಿ 720ಕ್ಕೆ 705 ಅಂಕ! Result ಕೇಳಿ ಸುಪ್ರೀಂ ನ್ಯಾಯಾಧೀಶರೇ ಶಾಕ್ಸುಪ್ರೀಂಕೋರ್ಟ್‌ನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮುಖಭಂಗ, ವಿವಾದಿತ ನಿರ್ಧಾರಕ್ಕೆ ನ್ಯಾಯಾಲಯದ ತಡೆಕನ್ನಡಿಗರಿಗೆ ಮೀಸಲಾತಿ ಕೊಡಿ, ಸಿಎಂ ಹೆದರಿದ್ರೆ ನಾವು ದಂಗೆ ಏಳ್ತೀವಿ! ಕರವೇ ನಾರಾಯಣಗೌಡ ಎಚ್ಚರಿಕೆಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಇ ವಿ ಚಿನ್ನಯ್ಯ ಮತ್ತು ಆಂಧ್ರ ಪ್ರದೇಶ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2005 ರಲ್ಲಿ ನೀಡಲಾಗಿದ್ದ ತೀರ್ಪನ್ನು ರದ್ದುಗೊಳಿಸಿದೆ.ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವುದು ಸಂವಿಧಾನದ 341ನೇ ವಿಧಿಗೆ ವಿರುದ್ಧ, ಎಸ್‌ಸಿ/ಎಸ್‌ಟಿ ಸಮುದಾಯಗಳ ಪಟ್ಟಿ ಸಿದ್ಧಪಡಿಸುವ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ ಎಂದು ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ತಿಳಿಸಲಾಗಿತ್ತು.ಇದನ್ನೂ ಓದಿ: LPG Price Hike: ಆಗಸ್ಟ್ ಮೊದಲ ದಿನವೇ ದೇಶದ ಜನತೆಗೆ ಬಿಗ್ ಶಾಕ್! ಇಂದಿನಿಂದ ದುಬಾರಿಯಾಗಲಿಗೆ LPG ಸಿಲಿಂಡರ್ ಬೆಲೆ!ಅಂದಹಾಗೆ, ಪಂಜಾಬ್‌ನಲ್ಲಿ ವಾಲ್ಮೀಕಿ ಮತ್ತು ಧಾರ್ಮಿಕ ಸಿಖ್ ಜಾತಿಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿಯ ಅರ್ಧ ಪಾಲನ್ನು ನೀಡುವ ಕಾನೂನನ್ನು 2010 ರಲ್ಲಿ ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಗುರುವಾರ ಈ ಅರ್ಜಿಯ ವಿಚಾರಣೆ ವೇಳೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಎಸ್‌ಸಿ/ಎಸ್‌ಟಿ ವರ್ಗದಲ್ಲಿ ಬಹಳ ಹಿಂದುಳಿದಿರುವ ಹಲವು ಜಾತಿಗಳಿವೆ, ಈ ಜಾತಿಗಳ ಸಬಲೀಕರಣದ ಅಗತ್ಯವಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.ಐತಿಹಾಸಿಕ ತೀರ್ಪಿನ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ‘ಸಾಮಾಜಿಕ ಪ್ರಜಾಪ್ರಭುತ್ವ’ದ ಅಗತ್ಯತೆ ಕುರಿತು ಸಂವಿಧಾನದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾಷಣವನ್ನು ನೆನಪಿಸಿಕೊಂಡರು. ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದು ಗವಾಯಿ ಹೇಳಿದರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ವರ್ಗದ ಕೆಲವೇ ಜನರು ಮೀಸಲಾತಿಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ನೆಲದ ವಾಸ್ತವತೆಯನ್ನು ನಾವು ಅಲ್ಲಗಳೆಯುವಂತಿಲ್ಲ. ಎಸ್‌ಸಿ/ಎಸ್‌ಟಿಯೊಳಗೆ ಶತಮಾನಗಳಿಂದ ದಬ್ಬಾಳಿಕೆ ಎದುರಿಸುತ್ತಿರುವ ವರ್ಗಗಳಿವೆ. ವರ್ಗೀಕರಣದ ಆಧಾರವೆಂದರೆ ದೊಡ್ಡ ಗುಂಪಿನಲ್ಲಿ ಒಂದು ಗುಂಪು ಹೆಚ್ಚು ತಾರತಮ್ಯವನ್ನು ಎದುರಿಸುತ್ತದೆ ಎಂದರು.ಜಾತಿಗಳ ಹಿಂದುಳಿದಿರುವಿಕೆ ಪುರಾವೆ ನೀಡಬೇಕು: ಸುಪ್ರೀಂ ಕೋರ್ಟ್ಮೀಸಲಾತಿಯಲ್ಲಿ ಪ್ರತ್ಯೇಕ ಪಾಲು ನೀಡುತ್ತಿರುವ ಜಾತಿ ಹಿಂದುಳಿದಿರುವುದಕ್ಕೆ ಸಾಕ್ಷಿ ನೀಡಬೇಕು ಎಂದು ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಅದರ ಕಡಿಮೆ ಪ್ರಾತಿನಿಧ್ಯವನ್ನು ಇದಕ್ಕೆ ಕಾರಣವೆಂದು ಹೇಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ನಿರ್ದಿಷ್ಟ ಜಾತಿಯ ಉಪಸ್ಥಿತಿಯ ಮೇಲೆ ಇದನ್ನು ಆಧರಿಸಿರುವುದು ತಪ್ಪು ಎಂದು ನ್ಯಾಯಾಲಯ ಹೇಳಿದೆ.ಪರಿಶಿಷ್ಟ ಜಾತಿ ವರ್ಗೀಕರಣ ಸಮಾನವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಕೆಲವು ಜಾತಿಗಳು ಹೆಚ್ಚು ಹಿಂದುಳಿದಿವೆ. ಅವರಿಗೆ ಅವಕಾಶ ನೀಡುವುದು ಸರಿ. ಇಂದಿರಾ ಸಾಹ್ನಿ ನಿರ್ಧಾರದಲ್ಲಿ ನಾವು OBC ಯ ಉಪವರ್ಗೀಕರಣವನ್ನು ಅನುಮತಿಸಿದ್ದೇವೆ. ಈ ವ್ಯವಸ್ಥೆಯು ಪರಿಶಿಷ್ಟ ಜಾತಿಯವರಿಗೂ ಅನ್ವಯಿಸಬಹುದು ಎಂದು ಮಾನ್ಯ ನ್ಯಾಯಾಲಯ ಹೇಳಿದೆ.ಇದನ್ನೂ ಓದಿ: Ola Uber Fare: ಮಳೆ ಬಂದ್ರೆ ಸಾಕು, ಮೂರ್ನಾಲ್ಕು ಪಟ್ಟು ಹೆಚ್ಚಾಗುತ್ತೆ ಓಲಾ-ಊಬರ್ ದರ! ಈ ಸುಲಿಗೆಗೆ ಲಗಾಮು ಹಾಕೋರೇ ಇಲ್ವಾ?ಕೆಲವು ಜಾತಿಗಳು ಇತರರಿಗಿಂತ ಹೆಚ್ಚು ತಾರತಮ್ಯವನ್ನು ಅನುಭವಿಸಿವೆ: ಸುಪ್ರೀಂ ಕೋರ್ಟ್ಕೆಲವು ಪರಿಶಿಷ್ಟ ಜಾತಿಗಳು ಶತಮಾನಗಳಿಂದ ಇತರ ಪರಿಶಿಷ್ಟ ಜಾತಿಗಳಿಗಿಂತ ಹೆಚ್ಚಿನ ತಾರತಮ್ಯವನ್ನು ಈಗಲೂ ಅನುಭವಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಆದರೆ, ಯಾವುದೇ ರಾಜ್ಯವು ಮೀಸಲಾತಿಯನ್ನು ವರ್ಗೀಕರಿಸಲು ಬಯಸಿದರೆ, ಅದು ಮೊದಲು ಡೇಟಾವನ್ನು ಸಂಗ್ರಹಿಸಬೇಕಾಗುತ್ತದೆ ಎಂದು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದು ನ್ಯಾಯಾಲಯ ಹೇಳಿತು. ಉದಾಹರಣೆಯೊಂದನ್ನೂ ನೀಡಿರುವ ನ್ಯಾಯಾಲಯ, ರೈಲು ಕಂಪಾರ್ಟ್‌ಮೆಂಟ್‌ನ ಹೊರಗೆ ನಿಂತಿರುವ ಜನರು ಒಳಗೆ ಹೋಗಲು ಹರಸಾಹಸಪಡುತ್ತಿರುವುದನ್ನು ಗಮನಿಸುತ್ತೇವೆ. ಆದರೆ ಒಳಗೆ ಹೋಗುವವರು, ಇತರರು ಒಳಗೆ ಬರದಂತೆ ತಡೆಯಲು ಬಯಸುತ್ತಾರೆ. ಆದರೆ ಸರ್ಕಾರಿ ನೌಕರಿ ಪಡೆದವರ ಸ್ಥಿತಿ ಒಂದಾದರೆ, ಇನ್ನೂ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿರುವವರ ಪರಿಸ್ಥಿತಿಯೇ ಬೇರೆ ಇದೆ ಎಂದು ಕೋರ್ಟ್ ಹೇಳಿದೆ.

Post a Comment