ರಾಹುಲ್ ಗಾಂಧಿ
ಚಕ್ರವ್ಯೂಹದ ಕುರಿತು ಭಾಷಣ ಮಾಡಿದ ನಂತರ ಜಾರಿ ನಿರ್ದೇಶನಾಲಯ ನನ್ನ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.ನವದೆಹಲಿ: ಜುಲೈ 29 ರಂದು ಸಂಸತ್ತಿನಲ್ಲಿ ‘ಚಕ್ರವ್ಯೂಹ’ದ ಕುರಿತು ಭಾಷಣ ಮಾಡಿದ ನಂತರ ಜಾರಿ ನಿರ್ದೇಶನಾಲಯ (Directorate of Enforcement) ನನ್ನ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ (Leader of Opposition) ಮತ್ತು ಕಾಂಗ್ರೆಸ್ ಸಂಸದ (Congress MP) ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಹೇಳಿದ್ದಾರೆ. ದಾಳಿ ನಡೆಸಲು ಯೋಜಿಸಲಾಗಿದೆ ಎಂದು ಇಡಿ ಒಳಗಿನವರು ಹೇಳಿದ ನಂತರ ಅವರನ್ನು ಸ್ವಾಗತಿಸಲು ಸಿದ್ದನಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.Ramanagara: ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ, ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಪ್ರಧಾನಿಗೆ ಮಹಿಳೆ ಪತ್ರಪಾಕ್ ವಿರುದ್ಧ ವಿಶ್ವ ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ನಿಧನ; ಪ್ರಧಾನಿ ಮೋದಿ ಸಂತಾಪಸಂಸತ್ನಲ್ಲಿ ರಾಹುಲ್ ಗಾಂಧಿ ಮಾತಿಗೆ ಬಿದ್ದು ಬಿದ್ದು ನಕ್ಕ ಸಚಿವೆ ನಿರ್ಮಲಾ ಸೀತಾರಾಮನ್PM Modi: ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ; ಮೋದಿ ಹೇಳಿದ ಕಿವಿಮಾತೇನು?ಎಕ್ಸ್‌ನಲ್ಲಿನ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಇಬ್ಬರಲ್ಲಿ ಒಬ್ಬರಿಗೆ ನನ್ನ ಚಕ್ರವ್ಯೂಹದ ಭಾಷಣ ಇಷ್ಟವಾಗಿಲ್ಲ. ಇಡಿ ಒಳಗಿನವರು ನನಗೆ ದಾಳಿಯನ್ನು ಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಚಹಾ ಮತ್ತು ಬಿಸ್ಕತ್ಗನ್ನು ಇಟ್ಟುಕೊಂಡು ಅಧಿಕಾರಿಗಳನ್ನು ತೆರೆದ ತೋಳುಗಳೊಂದಿಗೆ ಸ್ವಾಗತಿಸಲು ಕಾಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.ಚಕ್ರವ್ಯೂಹದ ಬಗ್ಗೆ ರಾಹುಲ್ ಮಾತುರಾಹುಲ್ ಗಾಂಧಿ ಜುಲೈ 29 ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತು ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ದೇಶದ ರೈತರು, ಕಾರ್ಮಿಕರು ಮತ್ತು ಯುವಕರು ಭಯಭೀತರಾಗಿದ್ದಾರೆ ಎಂದು ರಾಹುಲ್ ಹೇಳಿದ್ದರು. ಪ್ರಮುಖವಾಗಿ ಕಮಲದ ಚಿಹ್ನೆಯನ್ನು ಪ್ರದರ್ಶಿಸಿಗಿ ಪ್ರಧಾನಿ ಮೋದಿಯನ್ನು ಟೀಕಿಸಿದ ಅವರು 21ನೇ ಶತಮಾನದಲ್ಲಿ ಹೊಸ ‘ಚಕ್ರವ್ಯೂಹ’ವನ್ನು ರಚಿಸಲಾಗಿದೆ ಎಂದು ಹೇಳಿದ್ದರು. ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಆರು ಮಂದಿ ಅಭಿಮನ್ಯುವನ್ನು ‘ಚಕ್ರವ್ಯೂಹ’ದಲ್ಲಿ ಸಿಲುಕಿಸಿ ಕೊಂದಿದ್ದರು. ನಾನು ಸ್ವಲ್ಪ ಸಂಶೋಧನೆ ಮಾಡಿದ್ದೇನೆ ಮತ್ತು ‘ಚಕ್ರವ್ಯೂಹ’ವನ್ನು ‘ಪದ್ಮವ್ಯೂಹ’ ಎಂದೂ ಕರೆಯಲಾಗುತ್ತದೆ. ಅಂದರೆ ‘ಕಮಲ ರಚನೆ’ ಎಂದು ನಾನು ಕಂಡುಕೊಂಡೆ. ಚಕ್ರವ್ಯೂಹವು ಕಮಲದ ಆಕಾರದಲ್ಲಿದೆ ಎಂದಿದ್ದರು.ಇದನ್ನೂ ಓದಿ: ರೀಲ್ಸ್ಗಾಗಿ ರೈಲ್ವೆ ಹಳಿ ಮೇಲೆ ಸೈಕಲ್, ಸಿಲಿಂಡರ್ ಇಟ್ಟು ಹುಚ್ಚಾಟ; ಯೂಟ್ಯೂಬರ್ ಗುಲ್ಜಾರ್ ಶೇಖ್ ಬಂಧನಅಭಿಮನ್ಯುವಿನಂತೆ ಭಾರತಕ್ಕೆ ಅನ್ಯಾಯ!21ನೇ ಶತಮಾನದಲ್ಲಿ, ಹೊಸ ‘ಚಕ್ರವ್ಯೂಹ’ ರೂಪುಗೊಂಡಿದೆ, ಅದೂ ಕಮಲದ ರೂಪದಲ್ಲಿ. ಅದರ ಚಿಹ್ನೆಯನ್ನು ಪ್ರಧಾನಿ ಎದೆಯ ಮೇಲೆ ಧರಿಸುತ್ತಾರೆ. ಅಂದು ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ ಇಂದು ಭಾರತದ ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅದೇ ಆಗುತ್ತಿದೆ. ಅಭಿಮನ್ಯುವನ್ನು ಆರು ಜನರು ಕೊಂದರು. ಇಂದು ಕೂಡ ‘ಚಕ್ರವ್ಯೂಹ’ದ ಕೇಂದ್ರದಲ್ಲಿ ಆರು ಜನರಿದ್ದಾರೆ. ಆರು ಜನರು ಇಂದು ಭಾರತವನ್ನು ನಿಯಂತ್ರಿಸುತ್ತಾರೆ ಎಂದಿದ್ದರು.ಕೇಂದ್ರ ಸರ್ಕಾರ ನಿರ್ಮಿಸಿರುವ ‘ಚಕ್ರವ್ಯೂಹ’ದಿಂದ ಕೋಟ್ಯಂತರ ಜನರಿಗೆ ತೊಂದರೆಯಾಗುತ್ತಿದೆ ಎಂದು ರಾಹುಲ್ ಹೇಳಿದ್ದರು. ಬಿಜೆಪಿ ಲೋಕಸಭಾ ಸಂಸದ ಅನುರಾಗ್ ಠಾಕೂರ್ ಅವರು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮಹಾಭಾರತ ಮತ್ತು ಚಕ್ರವ್ಯೂಹದ ಹೇಳಿಕೆಗಳಿಗೆ ವ್ಯಂಗ್ಯವಾಡಿದ್ದರು. ಕೆಲವು ‘ಆಕಸ್ಮಿಕ ಹಿಂದೂಗಳು’ ಮತ್ತು ಮಹಾಭಾರತದ ಬಗ್ಗೆ ಅವರ ಜ್ಞಾನನ ಆಕಸ್ಮಿಕವಾಗಿದೆ ಎಂದು ಹೇಳಿ ಠಾಕೂರ್ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಚಕ್ರವ್ಯೂಹ ಹೇಳಿಕೆಯ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದರು. ಚಕ್ರವ್ಯೂಹದ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಏಕೆಂದರೆ ಈ ದೇಶವು ಕಾಂಗ್ರೆಸ್ ಪಕ್ಷದ ಅನೇಕ ಚಕ್ರವ್ಯೂಹಗಳನ್ನು ಚೆನ್ನಾಗಿ ನೋಡಿದೆ. ಮೊದಲ ಚಕ್ರವ್ಯೂಹ ದೇಶವನ್ನು ವಿಭಜಿಸಿದ ಕಾಂಗ್ರೆಸ್‌ನದ್ದೇ ಎಂದು ಹೇಳುವ ಮೂಲಕ 7 ಚಕ್ರವ್ಯೂಹಗಳನ್ನು ಹೆಸರಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

Post a Comment